ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಭಾರತೀಯರ ನೆಚ್ಚಿನ ಆಹಾರ ಸಮೋಸಾಗೆ ನಿಷೇಧ ಹೇರಿದೆ ಈ ದೇಶ; ಕಾರಣ ಏನು?

This country has banned samosas: ಭಾರತ ಮತ್ತು ಅದರಾಚೆಗೆ ವ್ಯಾಪಕವಾಗಿ ಬಳಸ್ಪಡುವ ಪ್ರಮುಖ ತಿಂಡಿಗಳಲ್ಲಿ ಸಮೋಸಾ ಕೂಡ ಒಂದು. ಸಂಜೆ ಸ್ನಾಕ್ಸ್‌ಗಂತೂ ಇದು ಬೆಸ್ಟ್ ತಿಂಡಿ ಎನಿಸಿಕೊಂಡಿದೆ. ಆದರೆ ಈ ದೇಶದಲ್ಲಿ ಸಮೋಸಾಗೆ ನಿಷೇಧವಿದೆ. ತಯಾರಿಕೆ, ಮಾರಾಟ, ತಿನ್ನುವುದು ಇಲ್ಲಿ ಅಪರಾಧ. ಯಾವುದು ಆ ದೇಶ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ.

ಭಾರತೀಯರ ನೆಚ್ಚಿನ ಆಹಾರ ಸಮೋಸಾಗೆ ನಿಷೇಧ ಹೇರಿದೆ ಈ ದೇಶ

-

Priyanka P Priyanka P Sep 17, 2025 8:10 PM

ಮೊಗಡಿಶು: ಸಾಮಾನ್ಯ ಜ್ಞಾನ ರಸಪ್ರಶ್ನೆಗಳು (General knowledge quizzes) ಸ್ಪರ್ಧಿಗಳನ್ನು ಸಹ ಆಶ್ಚರ್ಯಗೊಳಿಸುವ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಈ ರಸಪ್ರಶ್ನೆಗಳು ಜ್ಞಾನ ನೀಡುವುದಲ್ಲದೆ, ನಮ್ಮಲ್ಲಿ ಎಷ್ಟು ಜ್ಞಾನವಿದೆ ಎಂಬುದನ್ನು ತಿಳಿಯಲು ಕೂಡ ಸಹಕಾರಿ. ಅಂದರೆ ಇಂತಹ ಕುತೂಹಲಕಾರಿ ಪ್ರಶ್ನೆಗಳು ಜ್ಞಾನವನ್ನು ಪರೀಕ್ಷಿಸುತ್ತವೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸವಾಲಿನ ಅಂಶವನ್ನು ಸೇರಿಸುತ್ತವೆ. ಇದೀಗ ಸ್ಪರ್ಧೆಯೊಂದರಲಲಿ ಕೇಳಲಾದ ಪ್ರಶ್ನೆಯ ಬಗ್ಗೆ ನಿಮಗೆ ತಿಳಿದರೆ ಅಚ್ಚರಿಯೆನಿಸಬಹುದು.

ಯಾವ ದೇಶವು ಜನಪ್ರಿಯ ಭಾರತೀಯ ತಿಂಡಿ ಸಮೋಸಾ (samosa)ವನ್ನು ನಿಷೇಧಿಸಿದೆ? ಎಂಬ ಪ್ರಶ್ನೆಯೊಂದು ಎದ್ದಿದೆ. ಈ ಪ್ರಶ್ನೆ ಕೇಳಿದರೆ ಖಂಡಿತಾ ಅಚ್ಚರಿ ಎನಿಸಬಹುದು. ಯಾಕೆಂದರೆ ಕರಿದ ತಿಂಡಿ ಸಮೋಸಾವು ಭಾರತ ಮತ್ತು ಅದರಾಚೆಗೆ ವ್ಯಾಪಕವಾಗಿ ಬಳಸ್ಪಡುವ ಪ್ರಮುಖ ತಿಂಡಿ ಎನಿಸಿಕೊಂಡಿದೆ. ಸಂಜೆ ಸ್ನಾಕ್ಸ್‌ಗಂತೂ ಇದು ಬೆಸ್ಟ್ ತಿಂಡಿ. ಮಕ್ಕಳಿಂದ ವೃದ್ಧರವರೆಗೆ ಈ ತಿಂಡಿಯನ್ನು ಬಹುತೇಕರು ಇಷ್ಟಪಡುತ್ತಾರೆ.

ಆದರೆ ಈ ದೇಶವೊಂದರಲ್ಲಿ ಸಮೋಸವಾನ್ನು ನಿಷೇಧಿಸಲಾಗಿದೆ. ಆ ದೇಶ ಯಾವುದು ಗೊತ್ತಾ? ಸೊಮಾಲಿಯಾ. ಹೌದು, 2011ರಿಂದ ಉಗ್ರಗಾಮಿ ಗುಂಪು ಅಲ್-ಶಬಾಬ್ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಸಮೋಸಾ ತಯಾರಿಕೆ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿರ್ಧಾರವು ಅನೇಕ ಜನರನ್ನು ಆಶ್ಚರ್ಯಚಕಿತಗೊಳಿಸಿದೆ. ಈ ಸುದ್ದಿ ಈಗ ಭಾರಿ ವೈರಲ್ (Viral News) ಆಗಿದೆ.

ಇದನ್ನೂ ಓದಿ: Viral News: ನೀರಿನ ಬಾಟಲಿಯ ಮುಚ್ಚಳಗಳು ಯಾವಾಗಲೂ ನೀಲಿ ಬಣ್ಣದಲ್ಲಿಯೇ ಇರುವುದು ಏಕೆ ಗೊತ್ತಾ? ಇಲ್ಲಿದೆ ಕಾರಣ

ಅಲ್-ಶಬಾಬ್ ಸಂಘಟನೆಯು ಸಮೋಸಾದ ತ್ರಿಕೋನ ಆಕಾರವನ್ನು ಕ್ರಿಶ್ಚಿಯನ್ ಚಿಹ್ನೆಗೆ ಸಂಯೋಜಿಸಿದ್ದರಿಂದ ಈ ನಿಷೇಧ ಹೇರಲಾಗಿದೆ. ಇದು ಇಸ್ಲಾಂ ವಿರೋಧಿ ಎಂದು ಅವರು ಭಾವಿಸಿದ್ದಾರೆ. ಇದರ ಪರಿಣಾಮವಾಗಿ, ಸಮೋಸಾ ತಯಾರಿಸುವುದು, ಮಾರಾಟ ಮಾಡುವುದು ಅಥವಾ ತಿನ್ನುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ.

ಸಮೋಸಾಗಳು ಭಾರತೀಯ ಪಾಕಪದ್ಧತಿಯ ಒಂದು ವಿಶಿಷ್ಟ ತಿಂಡಿ ಎನಿಸಿಕೊಂಡಿದೆ. ಇದನ್ನು ಹೆಚ್ಚಾಗಿ ಚಹಾದೊಂದಿಗೆ ಸೇವಿಸಲಾಗುತ್ತದೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಹೊಟೇಲ್‌ಗಳವರೆಗೆ ಎಲ್ಲೆಡೆ ಸಮೋಸಾ ಕಂಡುಬರುತ್ತದೆ. ಸೊಮಾಲಿಯಾದಲ್ಲಿ ಇದರ ನಿಷೇಧವು ಸಾಂಸ್ಕೃತಿಕ ಸಂಕೇತಗಳನ್ನು ಕೆಲವೊಮ್ಮೆ ಅನಿರೀಕ್ಷಿತ ರೀತಿಯಲ್ಲಿ ಹೇಗೆ ಅರ್ಥೈಸಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ.

ಭಾರತೀಯರಿಗೆ ಬಹಳ ಪ್ರಿಯವಾಗಿರುವ ಈ ತಿಂಡಿಯನ್ನು ನಿಷೇಧಿಸಿರುವ ಕಲ್ಪನೆಯು ಅಸಂಬದ್ಧವೆಂದು ತೋರಬಹುದು. ಆದರೂ ಈ ಉದಾಹರಣೆಯು ಪ್ರಪಂಚದಾದ್ಯಂತ ಪಾಕಶಾಲೆಯ ಸಂಪ್ರದಾಯಗಳು ಹೇಗೆ ಬದಲಾಗುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಪರಿಚಿತ ಆಹಾರಗಳು ಸಹ ಹೇಗೆ ವಿವಾದಾಸ್ಪದವಾಗಬಹುದು ಎಂಬುದನ್ನು ಒತ್ತಿಹೇಳುತ್ತದೆ.

ಇದನ್ನೂ ಓದಿ: Viral Video: ಭಾರತ ಮೂಲದ ಗರ್ಭಿಣಿಯರಿಗೆ ಈ ದೇಶದಲ್ಲಿ ಸಿಗುತ್ತೆ ಬರೋಬ್ಬರಿ 1.26 ಲಕ್ಷ ರೂ!