ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಫಾರ್ಮ್‌ಗೆ ಮರಳಲು ಅಭಿಷೇಕ್‌ ಶರ್ಮಾಗೆ ಸಲಹೆ ನೀಡಿದ ಮೊಹಮ್ಮದ್ ಅಮೀರ್!

ಭಾರತ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಫಾರ್ಮ್ ಬಗ್ಗೆ ಜಿಯೋ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್‌ ಮಾತನಾಡಿದ್ದಾರೆ. ಅಭಿಷೇಕ್ ಶರ್ಮಾ ಅವರು ಆಫ್ ಸೈಡ್‌ನಲ್ಲಿ ತಮ್ಮ ಆಟವನ್ನು ಸುಧಾರಿಸಿಕೊಳ್ಳಬೇಕು, ಇದರ ಹೊರತಾಗಿ ಅವರ ಪ್ರದರ್ಶನ ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಭಿಷೇಕ್‌ ಶರ್ಮಾಗೆ ಮೊಹಮ್ಮದ್‌ ಆಮಿರ್‌ ಸಲಹೆ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೂಪರ್-8ಕ್ಕೆ ಲಗ್ಗೆಯಿಟ್ಟಿದ್ದು, ಫೆಬ್ರವರಿ 22 ರಂದು ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (IND vs SA) ಕಾದಾಟ ನಡೆಸಲಿದೆ. ಆದರೆ, ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರು ಕಳೆದ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ಫಾರ್ಮ್ ಕಳೆದುಕೊಂಡಿರುವುದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಅಭಿಷೇಕ್, ಯುಎಸ್ಎ, ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್‌ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವುದು ತಂಡದಲ್ಲಿ ಆತಂಕವನ್ನು ಹುಟ್ಟಿ ಹಾಕಿದೆ. ಹಾಗಾಗಿ ಟೂರ್ನಿಯ ನಿರ್ಣಾಯಕ ಪಂದ್ಯಗಳಲ್ಲಿ ಅಭಿಷೇಕ್ ಲಯಕ್ಕೆ ಮರಳುವುದು ತುಂಬಾ ಮುಖ್ಯ.

ಇದರ ನಡುವೆ, ಅಭಿಷೇಕ್ ಶರ್ಮಾ ಅವರ ಕಳಪೆ ಪ್ರದರ್ಶನದ ಕುರಿತು ಹಲವರು ಟೀಕೆ ಮಾಡುತ್ತಿದ್ದು, ಇದೀಗ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ಅಭಿಷೇಕ್ ತಮ್ಮ ಆಫ್ ಸೈಡ್ ಆಟವನ್ನು ಸುಧಾರಿಸಿಕೊಳ್ಳಬೇಕು. ಈ ಹಿಂದೆ ಆಯುಬ್ ಸೈಮ್ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರು ಎಂದು ಹೇಳಿದ್ದಾರೆ.

IND vs SA: ಅಭಿಷೇಕ್‌ ಶರ್ಮಾರನ್ನು ಕಟ್ಟಿ ಹಾಕಲು ವಿಶೇಷ ರಣತಂತ್ರ ರೂಪಿಸಿರುವ ದಕ್ಷಿಣ ಆಫ್ರಿಕಾ!

ಅಭಿಷೇಕ್‌ರನ್ನು ಆಯುಬ್ ಸೈಮ್‌ಗೆ ಹೋಲಿಸಿದ ಆಮಿರ್‌

ಜಿಯೋ ಟಿವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, "ಸೈಮ್ ಕೆಲವು ವರ್ಷಗಳ ಹಿಂದೆ ಪಿಎಸ್ಎಲ್ ಆಡಲು ಬಂದಾಗಲೂ ಇದೇ ಸಮಸ್ಯೆ ಎದುರಿಸಿದ್ದರು. ಅವರು ಹೊಸಬರಾಗಿದ್ದರು ಮತ್ತು ನೋ-ಲುಕ್ ಶಾಟ್‌ಗಳನ್ನು ಹೊಡೆಯುತ್ತಿದ್ದರು. ಅವರ ಹೆಚ್ಚಿನ ಹೊಡೆತಗಳು ಲೆಗ್ ಸೈಡ್‌ನಲ್ಲಿದ್ದ ಕಾರಣ ಅವರ ದೌರ್ಬಲ್ಯ ಯಾರಿಗೂ ತಿಳಿದಿರಲಿಲ್ಲ. ಈಗ, ನೀವು ಮೂರನೇ ಅಥವಾ ನಾಲ್ಕನೇ ಸ್ಟಂಪ್ ಲೈನ್‌ನಲ್ಲಿ ಬೌಲ್‌ ಮಾಡಿದರೆ, ಅಭಿಷೇಕ್‌ ಶರ್ಮಾ ಎಸೆತವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಾರೆ. ಅವರ ಕೊನೆಯ ಎರಡು ಪಂದ್ಯಗಳಲ್ಲಿಯೂ ಸಹ, ಅವರು ಆಫ್ ಸೈಡ್‌ನಲ್ಲಿ ಆಡುವಾಗ ಔಟ್ ಆಗಿದ್ದರು. ಅವರು ತಮ್ಮ ಆಫ್-ಸೈಡ್ ಆಟವನ್ನು ಸುಧಾರಿಸದ ಹೊರತು, ಅವರು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಬಲಿಷ್ಠ ಬೌಲರ್‌ಗಳು ಯಾವಾಗಲೂ ನಿಮ್ಮ ದೌರ್ಬಲ್ಯವನ್ನು ಪರೀಕ್ಷಿಸುತ್ತಾರೆ," ಎಂದು ಆಮರ್‌ ತಿಳಿಸಿದರು.

IND vs SA: ಅಭಿಷೇಕ್‌ ಶರ್ಮಾ ಔಟ್‌? ಸೂಪರ್‌-8ರ ಪದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ಪ್ರತಿ ಎಸೆತವನ್ನು ಸ್ಲಾಟ್‌ನಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಬೌಲರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡದ ಸನ್ನಿವೇಶಗಳಲ್ಲಿ ಅವರು ಪ್ರತಿ ಎಸೆತವನ್ನು ಸ್ಲಾಗ್ ಮಾಡಲು ಸಾಧ್ಯವಿಲ್ಲ ಎಂದು ಮೊಹಮ್ಮದ್ ಅಮೀರ್ ಅಭಿಪ್ರಾಯಪಟ್ಟರು.

ಈ ಕುರಿತು ಮಾತನಾಡಿ "ಅವರು ಸ್ಲಾಟ್‌ನಲ್ಲಿರುವ ಪ್ರತಿಯೊಂದು ಚೆಂಡನ್ನು ಹೊಡೆಯಲು ಬಯಸುತ್ತಾರೆ. ಆದರೆ ದೊಡ್ಡ ಹಂತಗಳಲ್ಲಿ ಅಥವಾ ಏಕದಿನ ಪಂದ್ಯಗಳಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ನೀವು ಪ್ರತಿಯೊಂದು ಚೆಂಡನ್ನು ಸ್ಲಾಗ್ ಮಾಡಲು ಸಾಧ್ಯವಿಲ್ಲ. ಸಲ್ಮಾನ್ ಆಘಾ ಮತ್ತು ಆರ್ಯನ್ ದತ್ ಅವರನ್ನು ಇದೇ ರೀತಿಯಲ್ಲಿ ಔಟ್ ಮಾಡಿದ್ದರು," ಎಂದು ಹೇಳಿದ್ದಾರೆ.