ಮುಂಬೈ: ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಈ ಟೂರ್ನಿಯಲ್ಲಿ ಭಾರತ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಆದಾಗ್ಯೂ, ಭಾರತ ತಂಡವು ಈಗಾಗಲೇ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಟೀಮ್ ಇಂಡಿಯಾದ ವೇಗದ ಬೌಲರ್ ಹರ್ಷಿತ್ ರಾಣಾ (Harshit Rana) ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬೌಲಿಂಗ್ ವೇಳೆ ಹರ್ಷಿತ್ ರಾನಾ ಮೊಣಕಾಲಿನಲ್ಲಿ ಅಸ್ವಸ್ಥತೆ ಅನುಭವಿಸಿದರು, ನಂತರ ಅವರು ತಮ್ಮ ಓವರ್ ಪೂರ್ಣಗೊಳಿಸಿ ಮೈದಾನವನ್ನು ತೊರೆದರು. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಗುರುವಾರ ಸಂಜೆ ತಂಡದ ಆಡಳಿತ ಮಂಡಳಿಗೆ ಅವರ ಗಂಭೀರ ಸ್ಥಿತಿಯ ಬಗ್ಗೆ ತಿಳಿಸಲಾಯಿತು. ಹರ್ಷಿತ್ ರಾಣಾ ಬದಲಿಗೆ ಅನುಭವಿ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಆಯ್ಕೆದಾರರು ಈಗ ಪರಿಗಣಿಸುತ್ತಿದ್ದಾರೆ.
T20 World Cup 2026: ಯುಎಸ್‌ಎ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಟೀಮ್ ಇಂಡಿಯಾ!
ಮೊಹಮ್ಮದ್ ಸಿರಾಜ್ 2024ರ ಜುಲೈನಲ್ಲಿ ತಮ್ಮ ಕೊನೆಯ ಟಿ20ಐ ಪಂದ್ಯವನ್ನು ಭಾರತದ ಆಡಿದ್ದರು. ಗುಜರಾತ್ ಟೈಟನ್ಸ್ ಬೌಲರ್ 16 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದರು. ನಾಯಕ ಸೂರ್ಯಕುಮಾರ್ ಯಾದವ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹರ್ಷಿತ್ ರಾಣಾ ಅವರನ್ನು ಇನ್ನೂ ನಿರ್ಣಯಿಸುತ್ತಿದ್ದಾರೆ ಎಂದು ಹೇಳಿದ್ದರೂ, ಅವರ ಸ್ಥಿತಿ ಪ್ರಸ್ತುತ ಅಸ್ವಸ್ಥವಾಗಿದೆ ಮತ್ತು ಅವರ ಅನುಪಸ್ಥಿತಿಯು ತಂಡದ ಸಂಯೋಜನೆಗೆ ಗಮನಾರ್ಹ ನಷ್ಟವಾಗಲಿದೆ ಎಂದು ಒಪ್ಪಿಕೊಂಡಿದ್ದಾರೆ.
ವಾಷಿಂಗ್ಟನ್ ಸುಂದರ್ ಕೂಡ ಫಿಟ್ ಇಲ್ಲ
ಟೀಮ್ ಇಂಡಿಯಾದ ಸಮಸ್ಯೆಗಳು ಕೇವಲ ವೇಗದ ಬೌಲಿಂಗ್‌ಗೆ ಸೀಮಿತವಾಗಿಲ್ಲ. ಸ್ಟಾರ್ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇನ್ನೂ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಮತ್ತು ತಂಡವನ್ನು ಸೇರಿಕೊಂಡಿಲ್ಲ. ಆದಾಗ್ಯೂ, ತಿಲಕ್ ವರ್ಮಾ ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಸುಂದರ್ ಅವರ ಅನುಪಸ್ಥಿತಿಯು ತಂಡದ ಸಮತೋಲನದ ಮೇಲೆ ಪರಿಣಾಮ ಬೀರಲಿದೆ. ವಿಶೇಷವಾಗಿ ಭಾರತ ತಂಡ ಗ್ರೂಪ್ ಎ ನಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೇಲೆ ಬೀರಬಹುದು.
U-19 World Cup: 80 ಎಸೆತಗಳಲ್ಲಿ 175 ರನ್ ಚಚ್ಚಿ ಹಲವು ದಾಖಲೆಗಳನ್ನು ಮುರಿದ ವೈಭವ್ ಸೂರ್ಯವಂಶಿ!
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್