ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಯುಎಸ್‌ಎ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಟೀಮ್‌ ಇಂಡಿಯಾ!

India vs USA Match Preview: ಭಾರತ ಹಾಗೂ ಯುಎಸ್‌ಎ ತಂಡಗಳು ಶನಿವಾರ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದ ನಿಮಿತ್ತ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

IND vs USA: ಯುಎಸ್‌ಎ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಭಾರತ ತಂಡ!

ಯುಎಸ್‌ಎ ವಿರುದ್ಧದ ಪಂದ್ಯಕ್ಕೆ ಭಾರತ ತಂಡ ಸಜ್ಜು. -

Profile
Ramesh Kote Feb 6, 2026 7:41 PM

ಮುಂಬೈ: ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನು 4-1 ಅಂತರದಲ್ಲಿ ಗೆದ್ದಿದ್ದ ಭಾರತ ತಂಡ, ಇದೀಗ ಫೆಬ್ರವರಿ 7 ರಂದು ಆರಂಭವಾಗುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ(ICC T20 World Cup 2026) ಆಡಲು ಸಜ್ಜಾಗುತ್ತಿದೆ. ಶನಿವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ಮೊದಲನೇ ಪಂದ್ಯದಲ್ಲಿ (IND sv USA) ಯುಎಸ್‌ಎ ವಿರುದ್ಧ ಸೂರ್ಯಕುಮಾರ್‌ ಯಾದವ್‌ (Suryakumar Yadav) ನಾಯಕತ್ವದ ಟೀಮ್‌ ಇಂಡಿಯಾ ಕಾದಾಟ ನಡೆಸಲಿದೆ. ಕ್ರಿಕೆಟ್‌ ಶಿಸು ಯುಎಸ್‌ಎ ಎದುರು ಗೆದ್ದು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಾಣಲು ಎದುರು ನೋಡುತ್ತಿದೆ. ಅಂದ ಹಾಗೆ ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಭಾರತ ತಂಡದ ಬ್ಯಾಟಿಂಗ್‌ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ನಾಯಕ ಸೂರ್ಯಕುಮಾರ್‌ ಯಾದವ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ ಹಾಗೂ ರಿಂಕು ಸಿಂಗ್‌ ಅವರನ್ನು ಒಳಗೊಂಡ ಬ್ಯಾಟಿಂಗ್‌ ವಿಭಾಗ ಶಕ್ತಿಯುತವಾಗಿದೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವ್ತಿ ಹಾಗೂ ಅರ್ಷದೀಪ್‌ ಸಿಂಗ್‌ ಇದ್ದಾರೆ. ಆಲ್‌ರೌಂಡರ್‌ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಅಕ್ಷರ್‌ ಪಟೇಲ್‌ ಕಾಣಿಸಿಕೊಳ್ಳಲಿದ್ದಾರೆ.

ನಾಳೆಯಿಂದ ಭಾರತ, ಲಂಕಾದಲ್ಲಿ ಮಿನಿ ವಿಶ್ವಕಪ್‌ ರಂಗು; ಟೂರ್ನಿಯ ಸ್ವರೂಪ, ನಿಯಮಗಳು ಹೀಗಿವೆ

ಇನ್ನು ಯುಎಸ್‌ಎ ತಂಡ ಕೂಡ ಭಾರತ ತಂಡಕ್ಕೆ ತೀವ್ರ ಪೈಪೋಟಿ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಭಾರತೀಯ ಮೂಲದ ಆಟಗಾರರು ಇರುವ ಕಾರಣ, ಮುಂಬೈ ಕಂಡೀಷನ್ಸ್‌ ಬಗ್ಗೆ ಪರಿಚಯ ಇದೆ. ಸೌರಭ್‌ ನೇತ್ರಾವಳ್ಕರ್‌, ಹರ್ಮೀತ್‌ ಸಿಂಗ್‌ ಹಾಗೂ ಶುಭಮ್‌ ರಂಜಾನೆ ಅವರು ತಮ್ಮ ಅನುಭವನ್ನು ಇಲ್ಲಿ ಬಳಸಿಕೊಳ್ಳಲಿದ್ದಾರೆ. ಅಂದ ಹಾಗೆ ಪ್ರಸ್ತುತ ಯುಎಸ್‌ಎ ತಂಡ 200 ರನ್‌ಗಳನ್ನು ಕಲೆ ಹಾಕುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ನ್ಯೂಜಿಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 7 ರನ್‌ಗಳಿಂದ ಯುಎಸ್‌ಎ ಸೋಲು ಅನುಭವಿಸಿತ್ತು.

ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್‌ ರಿಪೋರ್ಟ್‌

ಇಲ್ಲಿನ ವಾಂಖೆಡೆ ಕ್ರೀಡಾಂಗಣ ಪಿಚ್‌ ಫ್ಲ್ಯಾಟ್‌ ಆಗಿದ್ದು, ಬೌಂಡರಿ ಕಡಿಮೆ ಅಂತರವನ್ನು ಹೊಂದಿರುವ ಕಾರಣ, ಈ ಪಂದ್ಯ ಹೈಸ್ಕೋರಿಂಗ್‌ ಆಗಲಿದೆ. ಪಂದ್ಯದ ಆರಂಭಿಕ ಓವರ್‌ಗಳಲ್ಲಿ ಬೌಲರ್‌ಗಳು ಪಿಚ್‌ನ ಲಾಭವನ್ನು ಪಡೆಯಬಹುದು. ಆದರೆ, ಪಂದ್ಯದ ಬಹುತೇಕ ಅವಧಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯವನ್ನು ಸಾಧಿಸಲಿದ್ದಾರೆ. ಹಾಗಾಗಿ ಭಾರತ ಹಾಗೂ ಯುಎಸ್‌ಎ ನಡುವಣ ಪಂದ್ಯ ಹೈಸ್ಕೋರಿಂಗ್‌ ಆಗುವ ಸಾಧ್ಯತೆ ಇದೆ. ಆದರೆ, ಟೀಮ್‌ ಇಂಡಿಯಾ ಮೊದಲು ಬ್ಯಾಟ್‌ ಮಾಡಿದರೆ ಮಾತ್ರ.

ಗಾಯ; ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಹರ್ಷಿತ್ ರಾಣಾ!

ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI: ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ತಿಲಕ್‌ ವರ್ಮಾ, ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ (ಉಪ ನಾಯಕ), ಶಿವಂ ದುಬೆ. ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌, , ಕುಲ್ದೀಪ್‌ ಯಾದವ್‌/ವರುಣ್‌ ಚಕ್ರವರ್ತಿ

ಯುಎಸ್‌ಎ ಸಂಭಾವ್ಯ ಪ್ಲೇಯಿಂಗ್‌ XI: ಮೊನಾಂಕ್‌ ಪಟೇಲ್‌ (ನಾಯಕ), ಆಂಡ್ರೀಸ್‌ ಗೌಸ್‌ (ವಿಕೆಟ್‌ ಕೀಪರ್‌), ಸಾಯ್‌ ತೇಜಾ ಮುಕ್ಕಮಲ್ಲಾ, ಶಯಾನ್‌ ಜಹಾಂಗೀರ್‌, ಮಿಲಿಂದ್‌ ಕುಮಾರ್‌, ಶುಭಂ ರಂಜನೆ, ಹರ್ಮೀತ್‌ ಸಿಂಗ್‌, ಮೊಹಮ್ಮದ್‌ ಮೊಹ್ಸಿನ್‌, ಆಲಿ ಖಾನ್‌, ನೊಸ್ತುಷ್‌ ಕೆಂಜಿಗೆ, ಸೌರಭ್‌ ನೇತ್ರವಾಳ್ಕರ್‌

ಟಿ20 ವಿಶ್ವಕಪ್‌ಗೆ ಭಾರತ ಸಿದ್ಧ: ಇಲ್ಲಿದೆ ವೇಳಾಪಟ್ಟಿ, ಪೂರ್ಣ ತಂಡ

ಪಂದ್ಯದ ವಿವರ

2026ರ ಟಿ20 ವಿಶ್ವಕಪ್‌

ಮೂರನೇ ಪಂದ್ಯ

ಭಾರತ vs ಯುಎಸ್‌ಎ

ದಿನಾಂಕ: ಫೆಬ್ರವರಿ 07, 2026

ಸಮಯ: ಸಂಜೆ 07: 30ಕ್ಕೆ

ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್:‌ ಡಿಸ್ನಿ ಹಾಟ್‌ಸ್ಟಾರ್‌

ಮುಖಾಮುಖಿ ದಾಖಲೆ

ಆಡಿರುವ ಪಂದ್ಯ: 01

ಭಾರತದ ಗೆಲುವು: 01

ಯುಎಸ್‌ಎ ಗೆಲುವು: 00