ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್‌ ಕಿತ್ತು ಇತಿಹಾಸ ಬರೆದ ರಶೀದ್‌ ಖಾನ್‌!

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ 700 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆಯನ್ನು ಅಫ್ಘಾನಿಸ್ತಾನ ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ ಬರೆದಿದ್ದಾರೆ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ರಶೀದ್‌ ಈ ಮೈಲುಗಲ್ಲು ತಲುಪಿದ್ದಾರೆ.

ರಶೀದ್‌ ಖಾನ್‌ 700 ಟಿ20 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ನವದೆಹಲಿ: ಅಫ್ಘಾನಿಸ್ತಾನ ತಂಡದ ನಾಯಕ ಹಾಗೂ ಸ್ಪಿನ್ನರ್‌ ರಶೀದ್‌ ಖಾನ್‌ (Rashid Khan) ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಅವರು ಚುಟುಕು ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ಮೊದಲ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಸೋಮವಾರ ದೆಹಲಿಯ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE) ವಿರುದ್ಧದ 2026ರ ಐಸಿಸಿ ಟಿ 20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಪಂದ್ಯದಲ್ಲಿ ಆಫ್ಘನ್‌ ಸ್ಪಿನ್ನರ್‌ ಈ ಸಾಧನೆಗೆ ಭಾಜನರಾಗಿದ್ದಾರೆ. ಈ ಪಂದ್ಯದ 16ನೇ ಓವರ್‌ನಲ್ಲಿ ಮುಹಮ್ಮದ್‌ ಅರ್ಫಾನ್‌ ಅವರನ್ನು ಔಟ್‌ ಮಾಡಿದ ಬಳಿಕ ರಶೀದ್‌ ಈ ದಾಖಲೆಯ ಪಟ್ಟಿಗೆ ಸೇರಿದರು.

ಮುಹಮ್ಮದ್‌ ಅರ್ಫಾನ್‌ ಅವರು ಆಡಿದ ಎರಡು ಎಸೆತಗಳಲ್ಲಿ ಖಾತೆ ತೆರೆಯದೆ ರಶೀದ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ಅಂದ ಹಾಗೆ ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ ರಶೀದ್‌ ಖಾನ್‌, ನಾಲ್ಕು ಓವರ್‌ಗಳಿಗೆ ಕೇವಲ 24 ರನ್‌ ನೀಡಿ ಒಂದು ವಿಕೆಟ್‌ ಕಿತ್ತರು. ಆ ಮೂಲಕ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಯುಎಇ ತಂಡವನ್ನು 160 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಆಫ್ಘನ್‌ಗೆ ನೆರವು ನೀಡಿದ್ದರು. ಮುಹಮ್ಮದ್‌ ಅರ್ಫಾನ್‌ ಅವರ ವಿಕೆಟ್‌ ಮೂಲಕ ರಶೀದ್‌ ಖಾನ್‌ ಅವರದು ತಮ್ಮ ಟಿ20 ವೃತ್ತಿ ಜೀವನದಲ್ಲಿ 700ನೇ ವಿಕೆಟ್‌ ಆಗಿದೆ. ಅವರು 700 ವಿಕೆಟ್‌ಗಳನ್ನು ಪೂರ್ಣಗೊಳಿಸಲು 513 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

T20 World Cup 2026: ಅಭಿಷೇಕ್‌ ಶರ್ಮಾ ವೈಫಲ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಹರ್ಭಜನ್‌ ಸಿಂಗ್‌!

ಲೆಗ್‌ ಸ್ಪಿನ್ನರ್‌ 18.51ರ ಅದ್ಭುತ ಸರಾಸರಿ ಹಾಗೂ 6.69ರ ಎಕಾನಮಿಯಲ್ಲಿ ನಾಲ್ಕು ಬಾರಿ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. 27ನೇ ವಯಸ್ಸಿನ ರಶೀದ್‌ ಖಾನ್‌ ಅವರು ಚುಟುಕು ಕ್ರಿಕೆಟ್‌ನಲ್ಲಿ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದಾರೆ. 631 ವಿಕೆಟ್‌ಗಳ ಮೂಲಕ ವೆಸ್ಟ್‌ ಇಂಡೀಸ್‌ ಮಾಜಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೊ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. 613 ವಿಕೆಟ್‌ಗಳೊಂದಿಗೆ ಸುನೀಲ್‌ ನರೇನ್‌ ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರಶೀದ್‌ಗೆ ಅಗ್ರ ಸ್ಥಾನ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿಯೂ ರಶೀದ್‌ ಖಾನ್‌ 191 ವಿಕೆಟ್‌ಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ನ್ಯೂಜಿಲೆಂಡ್‌ ತಂಡದ ಟಿಮ್‌ ಸೌಥಿ ಅವರು 164 ವಿಕೆಟ್‌ಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಇಶ್‌ ಸೋಧಿ ಅವರು 162 ವಿಕೆಟ್‌ಗಳ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.



ಆಫ್ಘನ್‌ ತಂಡದ ಸೂಪರ್-‌8 ಆಸೆ ಜೀವಂತ

ಅಂದ ಹಾಗೆ ಈ ಪಂದ್ಯದಲ್ಲಿ ಯುಎಇ ವಿರುದ್ಧ ಅಫ್ಘಾನಿಸ್ತಾನ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 161 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಅಪ್ಘಾನಿಸ್ತಾನ ತಂಡ, ರೆಹಮಾನುಲ್ಲಾ ಗುರ್ಬಾಝ್‌ (0) ಹಾಗೂ ಗುಲ್ಬದ್ದಿನ್‌ ನೈಬ್‌ (13 ರನ್‌) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಇಬ್ರಾಹಿಂ ಝರ್ಡಾನ್‌ (53 ರನ್‌) ಅವರ ಅರ್ಧಶತಕ ಹಾಗೂ ಡಾರ್ವಿಸ್‌ ರಸೋಲಿ (33 ರನ್‌) ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್‌ (40 ರನ್‌) ಅವರ ಬ್ಯಾಟಿಂಗ್‌ ಬಲದಿಂದ ಆಫ್ಘನ್‌ ಗೆಲುವು ಪಡೆಯಿತು.