ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ENG: ಪವರ್‌ಪ್ಲೇನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಬೌಲಿಂಗ್‌ ಕೊಡಿ ಎಂದ ಸುನೀಲ್‌ ಗವಾಸ್ಕರ್‌!

Sunil Gavaskar on Jasprit Bumrah: ಇಂಗ್ಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ, ಪವರ್‌ಪ್ಲೇನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಬೌಲಿಂಗ್‌ ನೀಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಸೆಮಿಫೈನಲ್‌ ಪಂದ್ಯ ಮಾರ್ಚ್‌ 5 ರಂದು ನಡೆಯಲಿದೆ.

ಭಾರತ ತಂಡಕ್ಕೆ ತಾಂತ್ರಿಕ ಸಲಹೆ ನೀಡಿದ ಸುನೀಲ್‌ ಗವಾಸ್ಕರ್‌.

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯ ಮಾರ್ಚ್‌ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ ತಾಂತ್ರಿಕ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಆಗ್ರಹಿಸಿದ್ದಾರೆ. ಇಂಗ್ಲೆಂಡ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಭಾರತ ತಂಡ, ಪವರ್‌ಪ್ಲೇನಲ್ಲಿ ಹಿರಿಯ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರನ್ನು ಬಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ಮೊದಲ ಆರು ಓವರ್‌ಗಳಲ್ಲಿ ಕನಿಷ್ಠ ಎರಡು ಓವರ್‌ಗಳನ್ನು ಜಸ್‌ಪ್ರೀತ್‌ ಬುಮ್ರಾ ಅವರಿಗೆ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಸಾಮಾನ್ಯವಾಗಿ ಐದನೇ ಓವರ್‌ನಲ್ಲಿ ಬೌಲಿಂಗ್‌ಗೆ ಬರುವ ಬದಲು, ಆರಂಭದಲ್ಲೇ ಅವರನ್ನು ಬಳಸುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ಜೋಸ್‌ ಬಟ್ಲರ್‌, ಫಿಲ್‌ ಸಾಲ್ಟ್‌ ಹಾಗೂ ಉತ್ತಮ ಫಾರ್ಮ್‌ನಲ್ಲಿರುವ ಹ್ಯಾರಿ ಬ್ರೂಕ್‌ ಅವರನ್ನು ಆರಂಭದಲ್ಲೇ ಔಟ್‌ ಮಾಡುವಲ್ಲಿ ಯಶಸ್ವಿಯಾದರೆ, ಇಂಗ್ಲೆಂಡ್‌ ತಂಡದ ಬ್ಯಾಟಿಂಗ್ ವಿಭಾಗವನ್ನು ನೆಲಕ್ಕೆ ಉರುಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ನಾಳೆ ಮೊದಲ ಸೆಮಿಫೈನಲ್‌; ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ

ಪವರ್‌ಪ್ಲೇನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಬೌಲಿಂಗ್‌ ಕೊಡಿ

“ಅವರು ಪವರ್‌ಪ್ಲೇನಲ್ಲಿ ಕನಿಷ್ಠ ಎರಡು ಓವರ್‌ಗಳನ್ನು ಬೌಲ್ ಮಾಡಬೇಕು ಎಂಬುದು ನನ್ನ ನಂಬಿಕೆ. ಹೊಸ ಚೆಂಡಿನ ಬೌಲರ್ ಆಗಿರುವ ಅವರು ಆರಂಭದಲ್ಲೇ ವಿಕೆಟ್‌ಗಳನ್ನು ಪಡೆದರೆ, ಜೋಸ್‌ ಬಟ್ಲರ್‌, ಫಿಲ್‌ ಸಾಲ್ಟ್‌ ಮತ್ತು ಹ್ಯಾರಿ ಬ್ರೂಕ್‌ ಅವರನ್ನು ಔಟ್ ಮಾಡಿದರೆ, ಇಂಗ್ಲೆಂಡ್‌ ತಂಡದ ಬ್ಯಾಟಿಂಗ್ ಕ್ರಮದ ಬೆನ್ನೆಲುಬನ್ನು ಬಹುತೇಕ ಮುರಿದಂತೆಯೇ ಆಗುತ್ತದೆ,” ಎಂದು ಸುನೀಲ್‌ ಗವಾಸ್ಕರ್‌ ವಿವರಿಸಿದ್ದಾರೆ.

ತಮ್ಮ ಅಭಿಪ್ರಾಯದ ಹಿಂದೆ ಇರುವ ಕಾರಣ ಸರಳವಾಗಿದ್ದರೂ ಪ್ರಭಾವಶೀಲವಾಗಿದೆ. ಸಾಮಾನ್ಯವಾಗಿ ಐದನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಬೌಲಿಂಗ್‌ಗೆ ತರುವಾಗ, ಆ ವೇಳೆಗೆ ಬ್ಯಾಟರ್‌ಗಳು ಸುಮಾರು 20 ಎಸೆತಗಳನ್ನು ಎದುರಿಸಿ ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಕ್ಕೆ ಅಂಪೈರ್‌ಗಳ ಪಟ್ಟಿ ಪ್ರಕಟ

“ಹಾಗಾಗಿ, ನಾಲ್ಕು ಓವರ್‌ಗಳು ಮುಗಿದ ನಂತರ ಐದನೇ ಓವರ್‌ನಲ್ಲಿ ಅವರು ಬೌಲಿಂಗ್‌ಗೆ ಬರುವಾಗ, ಬ್ಯಾಟರ್‌ಗಳು ಸುಮಾರು 20 ಎಸೆತಗಳನ್ನು ಎದುರಿಸಿರುತ್ತಾರೆ. ಅಂದರೆ ಇಬ್ಬರೂ ಬ್ಯಾಟರ್‌ಗಳು ತಲಾ 8–10 ಎಸೆತಗಳನ್ನು ಆಡಿಕೊಂಡು ಲಯಕ್ಕೆ ಬಂದಿರುತ್ತಾರೆ. ಹಾಗಾಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆರಂಭದಲ್ಲೇ ಬೌಲಿಂಗ್‌ಗೆ ಕರೆ ತಂದು ಇಂಗ್ಲೆಂಡ್‌ ಆರಂಭಿಕರನ್ನು ಔಟ್ ಮಾಡುವುದು ಭಾರತ ತಂಡಕ್ಕೆ ಹಾಗೂ ಬುಮ್ರಾಗೆ ಉತ್ತಮವಾಗುವುದಿಲ್ಲವೇ?” ಎಂದು ಸುನೀಲ್‌ ಗವಾಸ್ಕರ್ ಪ್ರಶ್ನಿಸಿದರು.

ಅಂಕಿಅಂಶಗಳು ಕೂಡ ಸುನೀಲ್‌ ಗವಾಸ್ಕರ್‌ ಅವರ ಸಲಹೆಯನ್ನು ಸಮರ್ಥಿಸುತ್ತವೆ. ಈ ಟೂರ್ನಿಯಲ್ಲಿ ಪವರ್‌ಪ್ಲೇ ವೇಳೆ ಬೌಕ್‌ ಮಾಡಿದ ಐದು ಪಂದ್ಯಗಳಲ್ಲಿ ಜಸ್‌ಪ್ರೀತ್‌ ಬುಮ್ರಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಮೊದಲ ಆರು ಓವರ್‌ಗಳಲ್ಲಿ ಅವರಿಗೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ನೀಡಿರುವುದು ತುಂಬಾ ಕಡಿಮೆ ಎಂಬುದು ಅಚ್ಚರಿಯ ಸಂಗತಿಯಾಗಿದೆ.