ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದ. ಆಫ್ರಿಕಾ vs ನ್ಯೂಜಿಲೆಂಡ್‌ ಸೆಮಿಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ, ಮುಖಾಮುಖಿ ದಾಖಲೆ ಹೀಗಿದೆ

SA vs NZ T20 WC Semi-Finals: ಬುಧವಾರ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಅಕ್ಯೂವೆದರ್ ಮುನ್ಸೂಚನೆ ಪ್ರಕಾರ ಪಂದ್ಯದ ಸಮಯದಲ್ಲಿ ಸುಮಾರು 30 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಳೆಯಾಗುವ ಸಾಧ್ಯತೆ ಶೂನ್ಯ ಎಂದು ತಿಳಿಸಿದೆ. ಒಂದೊಮ್ಮೆ ಅಕಾಲಿಕವಾಗಿ ಮಳೆ ಬಂದರೂ ಮೀಸಲು ದಿನವಿದೆ.

ದ. ಆಫ್ರಿಕಾ vs ನ್ಯೂಜಿಲೆಂಡ್‌ ಸೆಮಿ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ?

NZ vs SA The First Semi-Final -

Abhilash BC
Abhilash BC Mar 3, 2026 3:02 PM

ಕೋಲ್ಕತಾ, ಮಾ.3: 10ನೇ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2026)ನ ಗುಂಪು ಹಂತ ಹಾಗೂ ಸೂಪರ್‌-8 ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೆಮಿಫೈನಲ್‌(SA vs NZ T20 WC Semi-Finals) ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಬುಧವಾರ ನಡೆಯುವ ಸೆಮಿಫೈನಲ್-‌1 ರಲ್ಲಿ ಬಲಿಷ್ಠ ತಂಡಗಳಾದ, ಇದುವರೆಗೂ ಟ್ರೋಫಿ ಗೆಲ್ಲದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್‌ ಮುಖಾಮುಖಿಯಾಗಲಿವೆ. ಈ ಬಾರಿಯೂ ಒಂದು ತಂಡಕ್ಕೆ ಮತ್ತೆ ಟ್ರೋಫಿ ಗೆಲ್ಲುವ ಅವಕಾಶ ಕೈತಪ್ಪಲಿದೆ. ಪಂದ್ಯಕ್ಕೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಅಣಿಯಾಗಿದೆ.

ಈ ಬಾರಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಅಜೇಯವಾಗಿ ಸೆಮಿಫೈನಲ್‌ ತಲುಪಿತ್ತು. ತಂಡ ಗುಂಪು ಹಂತದಲ್ಲಿ 4 ಹಾಗೂ ಸೂಪರ್‌-8 ಹಂತದಲ್ಲಿ ಎಲ್ಲಾ 3 ಪಂದ್ಯಗಳಲ್ಲೂ ಗೆದ್ದಿದೆ. ಕಳೆದ ಆವೃತ್ತಿಯೂ ತಂಡ ಅಜೇಯವಾಗಿ ಫೈನಲ್‌ ತಲುಪಿತ್ತು. ಆದರೆ ಫೈನಲ್‌ನಲ್ಲಿ ಭಾರತ ವಿರುದ್ಧ ಸೋಲು ಕಂಡಿತ್ತು. ಇದು ಕಿವೀಸ್‌ಗೆ 5ನೇ ಹಾಗೂ ದಕ್ಷಿಣ ಆಫ್ರಿಕಾಗೆ 4ನೇ ಸೆಮಿ ಫೈನಲ್‌ ಪಂದ್ಯ.

ಪಿಚ್‌ ರಿಪೋರ್ಟ್‌

ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ ಕ್ರೀಡಾಂಗಣವು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು ಹೈ- ಸ್ಕೋರಿಂಗ್ ನಿರೀಕ್ಷಿಸಲಾಗಿದೆ. ಆರಂಭದಲ್ಲಿ ಸ್ಥಿರವಾದ ಬೌನ್ಸ್ ಮತ್ತು ವೇಗವನ್ನು ನೀಡುವ ಮೇಲ್ಮೈ ಪಿಚ್‌ನಲ್ಲಿ ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಮುಕ್ತವಾಗಿ ಆಡಲು ಅನುವು ಮಾಡಿಕೊಡುತ್ತದೆ. ಆಟ ಮುಂದುವರೆದಂತೆ, ಪಿಚ್ ಸ್ವಲ್ಪ ಹಿಡಿತ ಸಾಧಿಸಬಹುದು. ಸ್ಪಿನ್ನರ್‌ಗಳಿಗೆ ನೆರವಾಗಬಹುದು. ರಾತ್ರಿ ಇಬ್ಬನಿ ಬೀಳುವ ಕಾರಣ ಟಾಸ್‌ ಕೂಡ ಪ್ರಧಾನವಾಗಲಿದೆ.

ಮಳೆ ಭೀತಿ ಇಲ್ಲ

ಬುಧವಾರ ನಡೆಯುವ ಈ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲ. ಅಕ್ಯೂವೆದರ್ ಮುನ್ಸೂಚನೆ ಪ್ರಕಾರ ಪಂದ್ಯದ ಸಮಯದಲ್ಲಿ ಸುಮಾರು 30 ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಳೆಯಾಗುವ ಸಾಧ್ಯತೆ ಶೂನ್ಯ ಎಂದು ತಿಳಿಸಿದೆ. ಒಂದೊಮ್ಮೆ ಅಕಾಲಿಕವಾಗಿ ಮಳೆ ಬಂದರೂ ಮೀಸಲು ದಿನವಿದೆ. ನಿಗದಿತ ದಿನದಂದು ಮಳೆಯಿಂದ ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಲ್ಲಿಂದಲೇ ಪಂದ್ಯ ಆರಂಭಿಸಲಾಗುತ್ತದೆ.

ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಪಿ.ವಿ ಸಿಂಧು

ಮುಖಾಮುಖಿ

ಉಭಯ ತಂಡಗಳು ಈ ವರೆಗೆ ಟಿ20ಯಲ್ಲಿ 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ದಕ್ಷಿಣ ಆಫ್ರಿಕಾ ಗರಿಷ್ಠ 12 ಪಂದ್ಯ ಮತ್ತು ನ್ಯೂಜಿಲೆಂಡ್‌ 7 ಪಂದ್ಯ ಗೆದ್ದಿದೆ.

ಸಂಭಾವ್ಯ ತಂಡಗಳು

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಿಯಾನ್ ರಿಕಲ್ಟನ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕಾಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ.

ನ್ಯೂಜಿಲೆಂಡ್: ಟಿಮ್ ಸೀಫರ್ಟ್ (ವಿ.ಕೀ.), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮೆಕ್‌ಕೊಂಚಿ, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗುಸನ್.