ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ʻನಾನು ನರ್ವಸ್‌ ಆಗಿದ್ದʼ-ಕೊನೆಯ ಓವರ್‌ನಲ್ಲಿನ ಅನುಭವ ಹಂಚಿಕೊಂಡ ಶಿವಂ ದುಬೆ!

Shivam Dube on last Over: ಇಂಗ್ಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಕೊನೆಯ ಓವರ್‌ ಬೌಲ್‌ ಮಾಡಿದ್ದ ಅನುಭವವನ್ನು ಭಾರತ ತಂಡದ ಆಲ್‌ರೌಂಡರ್‌ ಶಿವಂ ದುಬೆ ಹಂಚಿಕೊಂಡಿದ್ದಾರೆ. ನಾನು 20ನೇ ಓವರ್‌ನಲ್ಲಿ ನರ್ವಸ್‌ ಆಗಿದ್ದೆ ಎಂದು ಹೇಳಿದ್ದಾರೆ.

ಕೊನೆಯ ಓವರ್‌ನಲ್ಲಿ ನರ್ವಸ್‌ ಆಗಿದ್ದೆ ಎಂದ ಶಿವಂ ದುಬೆ.

ಮುಂಬೈ: ಮಾರ್ಚ್ 5 ರಂದು ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಸೆಮಿಫೈನಲ್‌ನಲ್ಲಿ(IND vs ENG) ಇಂಗ್ಲೆಂಡ್ ವಿರುದ್ಧ ಅಂತಿಮ ಓವರ್‌ನಲ್ಲಿ ಉಂಟಾದ ತೀವ್ರ ಒತ್ತಡದ ಕ್ಷಣಗಳ ಬಗ್ಗೆ ಶಿವಂ ದುಬೆ (Shivam Dube) ಮಾತನಾಡಿದ್ದಾರೆ. ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಗೆಲುವಿಗೆ 30 ರನ್ ಬೇಕಿದ್ದ ಸಂದರ್ಭದಲ್ಲಿ, ಭಾರತ ತಂಡ ಅಕ್ಷರ್ ಪಟೇಲ್ ಅವರಿಗೆ ನಾಲ್ಕನೇ ಓವರ್ ನೀಡಬೇಕೋ ಅಥವಾ ಅದುವರೆಗೆ ಬೌಲ್‌ ಮಾಡದಿದ್ದ ದುಬೆ ಅವರಿಗೆ ಚೆಂಡು ನೀಡಬೇಕೋ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ಥಿತಿ ಎದುರಾಯಿತು.

ಕೊನೆಯಲ್ಲಿ ಭಾರತ ತಂಡ ಶಿವಂ ದುಬೆ ಅವರಿಗೆ ಚೆಂಡು ನೀಡುವ ನಿರ್ಧಾರ ತೆಗೆದುಕೊಂಡಿತು. ಅವರು ಒತ್ತಡದ ಪರಿಸ್ಥಿತಿಯಲ್ಲೂ ಧೈರ್ಯ ಕಾಪಾಡಿಕೊಂಡು ಭಾರತಕ್ಕೆ ಏಳು ರನ್‌ಗಳ ಜಯ ತಂದುಕೊಟ್ಟು ಫೈನಲ್‌ಗೆ ಪ್ರವೇಶಿಸುವಂತೆ ಮಾಡಿದರು. ತಾವು ಸ್ವಲ್ಪ ನರ್ವಸ್ ಆಗಿದ್ದರೂ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿದ್ದೆ ಎಂದು ಒಪ್ಪಿಕೊಂಡರು. ಜಾಕೋಬ್‌ ಬೆಥೆಲ್ 45 ಬಾಲ್‌ಗಳಲ್ಲಿ ಶತಕ ಬಾರಿಸಿದ್ದರೂ ಪಂದ್ಯವನ್ನು ಮುಕ್ತಾಯಗೊಳಿಸಲು ತಮ್ಮ ಸಾಮರ್ಥ್ಯವನ್ನು ನಂಬಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

“ನಾನು ನನ್ನನ್ನೇ ನಂಬಲು ಪ್ರಯತ್ನಿಸಿದೆ. ಆ ಓವರ್‌ನ ಮೊದಲ ಎರಡು ಬಾಲ್‌ಗಳು ಬಹಳ ಪ್ರಮುಖವಾಗುತ್ತವೆ ಎಂದು ನನಗೆ ಗೊತ್ತಿತ್ತು. ಆದ್ದರಿಂದ ಅವುಗಳನ್ನು ಸರಿಯಾಗಿ ಎಸೆಯುವುದರ ಮೇಲೆ ನಾನು ಗಮನಹರಿಸಿದ್ದೆ, ಏಕೆಂದರೆ ಅದು ಪಂದ್ಯವನ್ನು ನಿರ್ಧರಿಸಬಹುದಾಗಿತ್ತು. ಕೊನೆಯ ಓವರ್ ನಾನು ಎಸೆಯುವುದಾಗಿ ಈಗಾಗಲೇ ನಿರ್ಧರಿಸಲಾಗಿತ್ತು. ಖಂಡಿತವಾಗಿಯೂ ಸ್ವಲ್ಪ ನರ್ವಸ್ ಆಗಿದ್ದೆ – ವಿಶ್ವಕಪ್ ಸೆಮಿ-ಫೈನಲ್‌ನ ಕೊನೆಯ ಓವರ್ ಬೌಲ್‌ ಮಾಡುವುದು ಯಾವಾಗಲೂ ಸವಾಲಿನ ಕೆಲಸ,” ಎಂದು ದುಬೆ ಬಿಸಿಸಿಐ ಹಂಚಿಕೊಂಡ ವಿಡಿಯೊದಲ್ಲಿ ತಿಳಿಸಿದ್ದಾರೆ.

IND vs NZ: ಜಸ್‌ಪ್ರೀತ್‌ ಬುಮ್ರಾ ತಂಡದಲ್ಲಿರುವುದು ಭಾರತದ ಅದೃಷ್ಟ ಎಂದ ಫಾಫ್‌ ಡು ಪ್ಲೆಸಿಸ್‌!

“ಬೆಥೆಲ್ ಈಗಾಗಲೇ ಶತಕದೊಂದಿಗೆ ಬ್ಯಾಟ್‌ ಮಾಡುತ್ತಿದ್ದರಿಂದ ಅದು ಕಷ್ಟಕರವಾಗಲಿದೆ ಎಂಬುದು ನನಗೆ ಗೊತ್ತಿತ್ತು. ಆದರೆ ನಾನು ಆತ್ಮವಿಶ್ವಾಸದಿಂದಿದ್ದು ನನ್ನ ಸಾಮರ್ಥ್ಯವನ್ನು ನಂಬಿಕೊಳ್ಳಬೇಕು ಎಂದು ನನ್ನಲ್ಲೇ ಹೇಳಿಕೊಂಡಿದ್ದೆ. ಸೆಮಿ-ಫೈನಲ್‌ನಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಕೇವಲ 10 ಶೇಕಡಾ ಕೊಡುಗೆ ನೀಡಿದರೂ ಅದು ದೊಡ್ಡ ಬದಲಾವಣೆಯನ್ನು ತರಬಹುದು,” ಎಂದು ದುಬೆ ಹೇಳಿದರು.

ಶಿವಂ ದುಬೆ ಕೊನೆಯ ಓವರ್ ಹೇಗೆ ಹಾಕಿದರು?

ದುಬೆ ಅವರ ಕೊನೆಯ ಓವರ್ ಜಾಕೋಬ್‌ ಬೆಥೆಲ್ ರನ್‌ಔಟ್ ಆಗುವುದರಿಂದ ಆರಂಭವಾಯಿತು. ಎರಡನೇ ರನ್ ಪಡೆಯಲು ಪ್ರಯತ್ನಿಸಿದ ವೇಳೆ ಅವರು ಸ್ಟ್ರೈಕರ್ ಎಂಡ್‌ನಲ್ಲಿ ರನ್‌ಔಟ್ ಆದರು. ಮುಂದಿನ ಎರಡು ಬಾಲ್‌ಗಳಲ್ಲಿ ದುಬೆ ಎರಡು ಸಿಂಗಲ್‌ ಮಾತ್ರ ನೀಡಿದರು. ಇದರಿಂದ ಇಂಗ್ಲೆಂಡ್‌ಗೆ ಕೊನೆಯ ಮೂರು ಬಾಲ್‌ಗಳಲ್ಲಿ ಗೆಲುವಿಗೆ 27 ರನ್ ಅಗತ್ಯವಾಯಿತು. ಆ ನಂತರ ದುಬೆ ಒಂದು ವೈಡ್ ಎಸೆದರು ಮತ್ತು ಜೋಫ್ರಾ ಆರ್ಚರ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಆದರೆ ದುಬೆ ಅವರ ಮೊದಲ ಮೂರು ಬಾಲ್‌ಗಳು ಈಗಾಗಲೇ ಭಾರತಕ್ಕೆ ಜಯವನ್ನು ಖಚಿತಪಡಿಸಿತ್ತು.

T20 World Cup: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!

ದುಬೆ ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಪಾತ್ರವಹಿಸಿದರು. ಅವರು 25 ಬಾಲ್‌ಗಳಲ್ಲಿ 43 ರನ್ ಗಳಿಸಿ, ಒಂದು ಫೋರ್ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ಭಾರತವನ್ನು 7 ವಿಕೆಟ್‌ಗೆ 253 ರನ್‌ಗಳಿಗೆ ತಲುಪಲು ನೆರವಾಗಿದ್ದರು. ಈಗ ಅವರು ಇದೇ ಫಾರ್ಮ್ ಅನ್ನು ಫೈನಲ್ ಪಂದ್ಯದಲ್ಲೂ ಮುಂದುವರಿಸಲು ನೋಡುತ್ತಿದ್ದಾರೆ. ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ, ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ.