ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!

Ravi shastri Praised on Sanju Samson: ಇಂಗ್ಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕ ಸಿಡಿಸಿದ ಭಾರತ ತಂಡದ ವಿಕೆಟ್‌ ಕೀಪರ್‌- ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅವರನ್ನು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. ಅವರ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣವೇನೆಂದು ಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ರವಿ ಶಾಸ್ತ್ರಿ!

ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಕಾರಣ ತಿಳಿಸಿದ ರವಿ ಶಾಸ್ತ್ರಿ. -

Profile
Ramesh Kote Mar 6, 2026 5:35 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕವನ್ನು ಬಾರಿಸಿದ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ಗೆ (Sanju Samson) ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ (Ravi Shastri) ಶ್ಲಾಘಿಸಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಲು ಕಾರಣವೇನೆಂದು ಅವರು ಬಹಿರಂಗಪಡಿಸಿದ್ದಾರೆ. ಸಂಜು ಸ್ಯಾಮ್ಸನ್‌ ಯಶಸ್ವಿಯಾಗಲು ಅವರು ಅನುಸರಿಸುತ್ತಿರುವ ಮಾನಸಿಕ ವಿಧಾನವೇ ಕಾರಣ ಎಂದು ಕ್ರಿಕೆಟ್‌ ನಿರೂಪಕ ತಿಳಿಸಿದ್ದಾರೆ.

ಟೂರ್ನಿಯ ಕೊನೆಯ ಹಂತದಲ್ಲಿ ಸಂಜು ಸ್ಯಾಮ್ಸನ್‌ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಸೂಪರ್‌-8ರ ಹಂತದ ಕೊನೆಯ ಪಂದ್ಯದಲ್ಲಿ ಚೇಸಿಂಗ್‌ ವೇಳೆ ಅಜೇಯ 97 ರನ್‌ ಸಿಡಿಸಿದ್ದರು. ನಂತರ ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಅವರು 45 ಎಸೆತಗಳಲ್ಲಿ 89 ರನ್‌ಗಳನ್ನು ಸಿಡಿಸಿದ್ದರು. ಇವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 254 ರನ್‌ಗಳನ್ನು ಕಲೆ ಹಾಕಿತು. ಬಳಿಕ ಟೀಮ್‌ ಇಂಡಿಯಾ 7 ರನ್‌ನಿಂದ ಗೆದ್ದು ಫೈನಲ್‌ಗೆ ಅರ್ಹತೆ ಪಡೆಯಿತು.

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ಪಿಚ್‌ ಗುಟ್ಟು ರಟ್ಟು; ಈ ಬಾರಿ ಭಾರತದ ಕೈ ಹಿಡಿಯುತ್ತಾ ಪಿಚ್‌?

ಸಂಜು ಸ್ಯಾಮ್ಸನ್‌ ಬಗ್ಗೆ ರವಿ ಶಾಸ್ತ್ರಿ ಹೇಳಿಕೆ

ಐಸಿಸಿ ರಿವ್ಯೂವ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಸಂಜು ಸ್ಯಾಮ್ಸನ್‌ ಅವರ ಆಟದಿಂದ ನನಗೆ ಯಾವುದೇ ಅಚ್ಚರಿ ಇಲ್ಲ ಎಂದಿದ್ದಾರೆ. ತಮ್ಮ ಬ್ಯಾಟಿಂಗ್‌ ಮನಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಅವರು ತೋರಿಸಿದ್ದಾರೆ. ಫಲಿತಾಂಶಗಳು ಬರುವುದು ಕೇವಲ ಸಮಯದ ವಿಷಯ ಎಂದಿದ್ದಾರೆ.

“ಕೊನೆಗೂ ಅವರು ಹೆಚ್ಚು ಸ್ಥಿರತೆಯಿಂದ ಆಡಬೇಕೆಂಬುದನ್ನು ಅರಿತು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ನನಗೆ ಅನಿಸುತ್ತದೆ,” ಎಂದ ಶಾಸ್ತ್ರಿ “ತನ್ನ ಶಾಟ್ ಆಯ್ಕೆಗಳಲ್ಲಿ ಇನ್ನಷ್ಟು ಜಾಣ್ಮೆ ತೋರಿಸಬೇಕು ಮತ್ತು ತಮ್ಮ ಸಾಮರ್ಥ್ಯವನ್ನು ನಂಬಬೇಕು. ಸಂಜುವಿನ ವಿಚಾರದಲ್ಲಿ ಹೇಳಬೇಕಾದರೆ, ಅವರ ಬಳಿ ಎಲ್ಲ ರೀತಿಯ ಶಾಟ್‌ಗಳೂ ಇದ್ದರೂ ಕೆಲವೊಮ್ಮೆ ಏಕಾಗ್ರತೆಯಲ್ಲಿ ವ್ಯತ್ಯಯ ಕಾಣಿಸುತ್ತದೆ," ಎಂದರು.

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ನಿಶ್ಚಿತ

ಸಂಜು ಸ್ಯಾಮ್ಸನ್ ಅವರ ಪ್ರತಿಭೆ ಬಗ್ಗೆ ಯಾವತ್ತೂ ಸಂಶಯ ಇರಲಿಲ್ಲ ಎಂಬುದನ್ನು ಶಾಸ್ತ್ರಿ ಸ್ಪಷ್ಟಪಡಿಸಿದರು. ಮಾಜಿ ಕೋಚ್ ಅವರ ಅಭಿಪ್ರಾಯದಲ್ಲಿ, ಅವರನ್ನು ಹಿಂದೆ ತಡೆದು ನಿಂತಿದ್ದು ಸಾಮರ್ಥ್ಯದ ಕೊರತೆಯಲ್ಲ, ಬದಲಾಗಿ ನಿರಂತರ ಸ್ಥಿರತೆಯ ಕೊರತೆಯಿಂದ.

“ಅವರು ಈಗ ಮಾನಸಿಕವಾಗಿ ಹೆಚ್ಚು ದೃಢರಾಗಿದ್ದಾರೆ. ತಂಡದಲ್ಲಿ ಸ್ಥಾನ ಪಡೆದ ನಂತರದಿಂದಲೇ ಅವರ ಕೌಶಲ ಅಥವಾ ಪ್ರತಿಭೆ ಬಗ್ಗೆ ಯಾರಿಗೂ ಸಂಶಯ ಇರಲಿಲ್ಲ,” ಎಂದು ಶಾಸ್ತ್ರಿ ಹೇಳಿದರು. “ಜನರು ನಿರಾಶರಾದದ್ದು ಏನೆಂದರೆ, ಈಗಾಗಲೇ ಕಾಣಿಸಬೇಕಾದ ನಿರಂತರ ಉತ್ತಮ ಪ್ರದರ್ಶನ ಕಾಣಿಸದಿರುವುದು. ಆದರೆ ಈಗ ಅವರು ಪರಿಪಕ್ವತೆಯನ್ನು ಹೊಂದಿದ್ದಾರೆ," ಎಂದರು.

ರೋಹಿತ್‌ ಶರ್ಮರ ಸಿಕ್ಸರ್‌ ದಾಖಲೆ ಮುರಿದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್‌ ಮ್ಯಾಚ್‌ ವಿನ್ನರ್‌: ಶಾಸ್ತ್ರಿ

ಸಂಜು ಸ್ಯಾಮ್ಸನ್ ಈಗ 31 ವರ್ಷ ವಯಸ್ಸಿನವರಾಗಿದ್ದು, ಭಾರತ ತಂಡದಲ್ಲಿ ಅವರ ಪಾತ್ರವೂ ಇನ್ನಷ್ಟು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಅತ್ಯಂತ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಅವರಿಂದ ಇನ್ನೂ ಉತ್ತಮ ಪ್ರದರ್ಶನಗಳು ಬರಬೇಕಿವೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

“ಅವರು ಇನ್ನೂ ಕೇವಲ 31 ವರ್ಷ ವಯಸ್ಸಿನವರು ಮತ್ತು ನಿಜವಾದ ಪಂದ್ಯ ವಿಜೇತರು,” ಎಂದು ಹೇಳಿದ ಶಾಸ್ತ್ರಿ, “ಅಂತಹ ಶಾಟ್‌ಗಳನ್ನು ಆಡುತ್ತಿರುವುದನ್ನು ನೋಡಿದಾಗ, ಅದರಲ್ಲಿ ಕ್ಲಾಸ್ ಇದೆ, ಟಚ್ ಇದೆ, ಪವರ್ ಇದೆ, ಜೊತೆಗೆ ಕಚ್ಚಾ ಶಕ್ತಿಯೂ ಇದೆ. ಅದು ನಿಜಕ್ಕೂ ಅದ್ಭುತವಾಗಿದೆ," ಎಂದು ಗುಣಗಾನ ಮಾಡಿದರು.