ಬಾಬರ್ ಆಝಮ್ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಕಾರಣ ಎಂದ ಅಹ್ಮದ್ ಶೆಹ್ಝಾದ್!
ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಮ ಅವರು ವೈಫಲ್ಯ ಅನುಭವಿಸಲು ವಿರಾಟ್ ಕೊಹ್ಲಿ ಜೊತೆ ಅವರನ್ನು ಹೋಲಿಕೆ ಮಾಡಿದ್ದೇ ಕಾರಣ ಎಂದು ಪಾಕ್ ಮಾಜಿ ಬ್ಯಾಟರ್ ಅಹ್ಮದ್ ಶೆಹ್ಝಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಬರ್ ಆಝಮ್ ಬ್ಯಾಟಿಂಗ್ ವೈಫಲ್ಯ ಅನುಭವಿಸಲು ಕಾರಣ ತಿಳಿಸಿದ ಅಹ್ಮದ್ ಶೆಹ್ಝಾದ್.

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಮ್ (Babar Azam) ಅವರು ಪ್ರಸ್ತುತ ಮೂರೂ ಸ್ವರೂಪದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಅಲ್ಲದೆ ಟಿ20ಐ ತಂಡದಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯ ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಕ್ರಮವಾಗಿ 0 ಮತ್ತು 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಅಂದ ಹಾಗೆ ಬಾಬರ್ ಆಝಮ್ ಬ್ಯಾಟಿಂಗ್‌ವೈಫಲ್ಯ ಅನುಭವಿಸಲು ಪ್ರಮುಖ ಕಾರಣವೇನೆಂದು ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಅಹ್ಮದ್ ಶಹ್ಝಾದ್ (Ahmed Shehzad) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ದಿಗ್ಗಜ ವಿರಾಟ್ ಕೊಹ್ಲಿಗೆ (Virat Kohli) ಬಾಬರ್ ಆಝಮ್ ಅವರನ್ನು ಹೋಲಿಕೆ ಮಾಡಿದ್ದೆ ಇವರ ವೈಫಲ್ಯಕ್ಕೆ ಕಾರಣ ಎಂದು ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಬಾಬರ್ ಆಝಮ್ ಅವರನ್ನು ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಹೋಲಿಕೆ ಮಾಡಿದ್ದರು. ಆದರೆ, ಅಭಿಮಾನಿಗಳ ನಿರೀಕ್ಷೆಯನ್ನು ಬಾಬರ್ ಆಝಮ್ ಹುಸಿ ಮಾಡಿದರು. ಅವರು 2023ರಿಂದ ಇಲ್ಲಿಯವರೆಗೂ ಒಂದೇ ಒಂದು ಶತಕವನ್ನು ಸಿಡಿಸಿರಲಿಲ್ಲ. ಬಾಬರ್ ಆಝಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿದ್ದರಿಂದಲೇ ಪಾಕ್ ಮಾಜಿ ನಾಯಕ ವಿಫಲವಾಗಲು ಕಾರಣ ಎಂದು ಅಹ್ಮದ್ ಶೆಹ್ಝಾದ್ ತಿಳಿಸಿದ್ದಾರೆ.
PAK vs WI: ಪಾಕಿಸ್ತಾನ ತಂಡ ಕೇವಲ 92 ರನ್‌ಗಳಿಗೆ ಆಲ್‌ಔಟ್, ಒಡಿಐ ಸರಣಿ ಗೆದ್ದ ವೆಸ್ಟ್ ಇಂಡೀಸ್!
ಜಿಸೂಪರ್ ಜೊತೆ ಮಾತನಾಡಿದ ಶೆಹ್ಝಾದ್, "ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ, ನೀವು ಆಟಗಾರರನ್ನು ಹೋಲಿಸುವ ಅಭಿಯಾನಗಳನ್ನು ನಡೆಸುತ್ತಿದ್ದಿರಿ. ಈಗ ಪ್ರದರ್ಶನಗಳು ಬರುತ್ತಿಲ್ಲ, ನೀವು 'ಇಬ್ಬರು ಆಟಗಾರರನ್ನು ಹೋಲಿಸಬೇಡಿ' ಎಂದು ಹೇಳುತ್ತಿದ್ದೀರಿ. ಏಕೆ? ವಿರಾಟ್ ಕೊಹ್ಲಿಯ ಹೋಲಿಕೆಯನ್ನು ಜಗತ್ತಿನ ಯಾರೊಂದಿಗೂ ಮಾಡಲು ಸಾಧ್ಯವಿಲ್ಲ. ಅವರು ಈ ಪೀಳಿಗೆಯ ದಂತಕಥೆ, ಮಾದರಿ. ನೀವು ಅವರನ್ನು ಎಂಎಸ್ ಧೋನಿಯೊಂದಿಗೆ ಸಹ ಹೋಲಿಸಲು ಸಾಧ್ಯವಿಲ್ಲ. ಧೋನಿ ಒಬ್ಬ ಮಹಾನ್ ನಾಯಕನಾಗಿರಬಹುದು, ಆದರೆ ಬ್ಯಾಟ್ಸ್‌ಮನ್, ಕ್ರಿಕೆಟಿಗ ಮತ್ತು ಕ್ರೀಡಾಪಟುವಾಗಿ ಕೊಹ್ಲಿ ಒಬ್ಬಂಟಿಯಾಗಿ ನಿಲ್ಲುತ್ತಾರೆ. ಯಾರನ್ನೂ ಯಾರೊಂದಿಗೂ ಹೋಲಿಸಬಾರದು ಏಕೆಂದರೆ ಅದು ಅನ್ಯಾಯವಾಗಿದೆ ಮತ್ತು ಇದು ಹೆಚ್ಚುವರಿ ಒತ್ತಡವನ್ನು ಸೇರಿಸುತ್ತದೆ, ಇದನ್ನು ನಾವು ಈಗ ಬಾಬರ್ ಅಜಮ್ ಮೇಲೆ ನೋಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
WI vs PAK: 18ನೇ ಒಡಿಐ ಶತಕ ಸಿಡಿಸಿ ಬ್ರಿಯಾನ್ ಲಾರಾ ಸನಿಹ ಬಂದ ಶೇಯ್ ಹೋಪ್!
ಬಾಬರ್ ಆಝಮ್ 2023ರ ಏಷ್ಯಾ ಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಕೊನೆಯ ಬಾರಿ ಶತಕ ಗಳಿಸಿದ್ದರು. ಅವರು 151 (131) ರನ್ ಗಳಿಸಿದ್ದರು. ಅಂದಿನಿಂದ ಬಾಬರ್ ಆಝಮ್ ಮುಂದಿನ 72 ಇನಿಂಗ್ಸ್‌ಗಳಲ್ಲಿ ಎಲ್ಲಾ ಸ್ವರೂಪಗಳಲ್ಲಿ ಮೂರು ಅಂಕಿಗಳನ್ನು ತಲುಪಲು ಸಾಧ್ಯವಾಗಲಿಲ್ಲ, 18 ಅರ್ಧಶತಕಗಳೊಂದಿಗೆ 31.45ರ ಸರಾಸರಿಯಲ್ಲಿ 2139 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 2022ರ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಿಸಿದ ಕೊನೆಯ ಶತಕದ ನಂತರ 25 ಇನಿಂಗ್ಸ್‌ಗಳಿಂದ 23.60ರ ಸರಾಸರಿಯಲ್ಲಿ 590 ರನ್ ಗಳಿಸಿದ್ದರು.