ಬುಲವಾಯೊ: ಪ್ರಸ್ತುತ ನಡೆಯುತ್ತಿರುವ 2026ರ ಅಂಡರ್-19 ವಿಶ್ವಕಪ್ (U-19 world Cup 2026) ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಭಾರತ ಕಿರಿಯರ ತಂಡ, ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದಿದೆ. ಭಾನುವಾರ ಇಲ್ಲಿನ ಕ್ವೀನ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದಿದ್ದ ಸೂಪರ್-6ರ ಎರಡನೇ ಗುಂಪಿನ ಪಂದ್ಯದಲ್ಲಿ ಕಾನಿಷ್ಕ್ ಚೌವ್ಹಾಣ್ (Kanishk Chouhan) ಅವರ ಆಲ್‌ರೌಂಡರ್ ಆಟದ ಬಲದಿಂದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 58 ರನ್‌ಗಳಿಂದ ಮಣಿಸಿತು. ಆ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿತು. ಫಬ್ರವರಿ 4 ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ (India U-19 Team) ತಂಡ ಕಾದಾಟ ನಡೆಸಲಿದೆ.
ಫೆಬ್ರವರಿ ಒಂದರಂದು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 2026ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯದಲ್ಲಿ ಭಾರತ ನೀಡಿದ್ದ 253 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ಖಲಿನ್ ಪಟೇಲ್ ಹಾಗೂ ಆಯುಷ್ ಮ್ಹಾತ್ರೆ ಸ್ಪಿನ್ ಮೋಡಿಗೆ ನಲುಗಿದ ಪಾಕಿಸ್ತಾನ ತಂಡ, 46.2 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ದೊಡ್ಡ ಅಂತರದಲ್ಲಿ ಸೋಲುವ ಮೂಲಕ ಅಂಡರ್-19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು. ಪಾಕಿಸ್ತಾನ ತಂಡದ ಪರ ಉಸ್ಮಾನ್ ಖಾನ್ 66 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
IND vs NZ: ಐದನೇ ಪಂದ್ಯದಲ್ಲಿ ಶತಕ ಸಿಡಿಸಿದರೂ ತೃಪ್ತಿ ಇಲ್ಲ ಎಂದ ಇಶಾನ್ ಕಿಶನ್!
ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ, ಉತ್ತಮ ಆರಂಭವನ್ನೇ ಪಡೆಯಿತು. ಆ ಮೂಲಕ ಸುಲಭ ಗೆಲುವು ಸಾಧಿಸುತ್ತದೆ ಎಂದು ಭಾವಿಸಲಾಗುತ್ತದೆ. ನಂತರ, ಭಾರತೀಯ ಬೌಲರ್‌ಗಳು ಬಲವಾಗಿ ಕಮ್‌ಬ್ಯಾಕ್ ಮಾಡಿ, ಪಾಕಿಸ್ತಾನದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಕೆಡವಿದರು. ಪಾಕಿಸ್ತಾನದ ಕೊನೆಯ ಏಳು ವಿಕೆಟ್‌ಗಳು ಕೇವಲ 43 ರನ್‌ಗಳಿಗೆ ಪತನಗೊಂಡವು. ಭಾರತ ಪರ ಖಿಲನ್ ಪಟೇಲ್ ಮತ್ತು ಆಯುಷ್ ಮ್ಹಾತ್ರೆ ತಲಾ ಮೂರು ವಿಕೆಟ್ ಪಡೆದರು. ಆರ್‌ಎಸ್ ಅಂಬ್ರೀಶ್, ಹೆನಿಲ್ ಪಟೇಲ್, ಕನಿಷ್ಕ್ ಚೌಹಾಣ್ ಮತ್ತು ವಿಹಾನ್ ಮಲ್ಹೋತ್ರಾ ತಲಾ ಒಂದು ವಿಕೆಟ್ ಪಡೆದರು.
ಸಂಜು ಸ್ಯಾಮ್ಸನ್ ಬದಲು ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ನಿರ್ವಹಿಸಲು ಕಾರಣ ತಿಳಿಸಿದ ಸೂರ್ಯಕುಮಾರ್!
252 ರನ್ ಕಲೆ ಹಾಕಿದ್ದ ಭಾರತ
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ, 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಯಿತು. ವೇದಾಂತ್ ತ್ರಿವೇದಿ 68 ರನ್‌ಗಳಿಸಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕನಿಷ್ಕ್ ಚೌಹಾಣ್ 35 ರನ್ ಗಳಿಸಿದರೆ, ವೈಭವ್ ಸೂರ್ಯವಂಶಿ 30 ರನ್ ಗಳಿಸಿದರು. ಪಾಕಿಸ್ತಾನ ಪರ ಅಬ್ದುಲ್ ಸುಭಾನ್ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಸಯ್ಯಮ್ ಎರಡು ವಿಕೆಟ್ ಪಡೆದರು. ಅಲಿ ರಜಾ, ಅಹ್ಮದ್ ಹುಸೇನ್, ಮೋಮಿನ್ ಕಮರ್ ಮತ್ತು ಅಲಿ ಹಸನ್ ಬಲೂಚ್ ಕೂಡ ತಲಾ ಒಂದು ವಿಕೆಟ್ ಪಡೆದರು.
ವೇದಾಂತ್ ತ್ರಿವೇಧಿ ಅರ್ಧಶತಕ
ಭಾರತೀಯ ಕ್ರಿಕೆಟ್‌ನ ಸೆನ್ಸೇಷಲ್ ವೈಭವ್ ಸೂರ್ಯವಂಶಿ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಕ್ಕೂ ಮುನ್ನ ಮತ್ತೊಬ್ಬ ಆರಂಭಿಕ ಆರೋನ್ ಜಾರ್ಜ್ (16) ಹಾಗೂ ನಾಯಕ ಆಯಷ್ ಮ್ಹಾತ್ರೆ ಡಕ್‌ಔಟ್ ಆಗಿದ್ದರು. ಆದರೆ, ವೇದಾಂತ್ ತ್ರಿವೇದಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ ಮಾಡಿ 98 ಎಸೆತಗಳಲ್ಲಿ 68 ರನ್‌ಗಳನ್ನು ಬಾರಿಸಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಸನಿಹ ತಂದು ಔಟ್ ಆದರು. ವಿಹಾನ್ ಮೆಲ್ಹೋತ್ರಾ 21 ರನ್ ಹಾಗೂ ಕಾನಿಷ್ಕ್ ಚೌವ್ಹಾಣ್ 35 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಆರ್ ಅಂಬರೀಶ್ 29 ರನ್ ಗಳಿಸಿದ್ದರೆ, ಖಿಲನ್ ಪಟೇಲ್ 21 ರನ್‌ಗಳನ್ನು ಕಲೆ ಹಾಕಿದ್ದರು.