ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ನಾನು ನೋಡಿದ ಬೆಸ್ಟ್‌ ಆಟಗಾರ ವೈಭವ್‌ ಸೂರ್ಯವಂಶಿ ಎಂದ ಜೋಸ್‌ ಬಟ್ಲರ್‌!

Jos Buttler Praise on Vaibhav: ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್, ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಈ ಯುವ ಆಟಗಾರ ವಿಶ್ವ ಕ್ರಿಕೆಟ್‌ನಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೈಭವ್‌ ಸೂರ್ಯವಂಶಿಗೆ ಜೋಸ್‌ ಬಟ್ಲರ್‌ ಮೆಚ್ಚುಗೆ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) 2026ರ ಸಾಲಿನ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವಿನ ಪಂದ್ಯಕ್ಕೂ ಮುನ್ನ, ಜೋಸ್ ಬಟ್ಲರ್ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ತುಂಬಾ ಮೆಚ್ಚಿಕೊಂಡರು. ತನ್ನ ಸಾಮಾಜಿಕ ಜಾಲತಾಣಗಳಲ್ಲಿ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೊದಲ್ಲಿ ಬಟ್ಲರ್, ತಾವು ನೋಡಿದ ಅತ್ಯಂತ ಯುವ ಪ್ರತಿಭೆಗಳಲ್ಲೊಬ್ಬನೆಂದು ವೈಭವ್ ಅವರನ್ನು ಕೊಂಡಾಡಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ತರಬೇತಿ ಅವಧಿಯಲ್ಲಿ ಈ ಕ್ಷಣ ಕಂಡುಬಂದಿತು. ಅಲ್ಲಿ ಬಟ್ಲರ್, ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಜೊತೆ ವೈಭವ್ ಜೊತೆ ಮಾತನಾಡುತ್ತಿರುವುದು ಕಾಣಿಸಿತು. ವಿಡಿಯೊದಲ್ಲಿ ಮಾತನಾಡಿದ ಬಟ್ಲರ್, ವೈಭವ್ ಜೊತೆಗಿನ ಸಂಭಾಷಣೆಯನ್ನು ಹಂಚಿಕೊಂಡು, ಯುವ ಆಟಗಾರನ ಧೈರ್ಯಶಾಲಿ ಆಟದ ಶೈಲಿ ಮತ್ತು ಇತ್ತೀಚಿನ ಪ್ರದರ್ಶನಗಳಿಂದ ತಾನು ಬಹಳವಾಗಿ ಪ್ರಭಾವಿತರಾಗಿದ್ದೇನೆ ಎಂದು ಹೇಳಿದರು.

IPL 2026: ʻಬೇಕಿದ್ದರೆ ನನ್ನನ್ನು ಬೈದು ಬಿಡಿʼ-ಪಂಜಾಬ್‌ ಸೋಲಿನ ಬಳಿಕ ಸಿಎಸ್‌ಕೆಯನ್ನು ಟೀಕಿಸಿದ ಅಶ್ವಿನ್!

“ಕಲ್ಪನೆ ಮಾಡಿಕೊಳ್ಳಿ, ಅವರು 21 ಅಥವಾ 25 ವರ್ಷದಾಗಿದ್ದಾಗ, ವಿಶ್ವವು ಅವರ ಕಾಲಿನಡಿ ಇರುತ್ತದೆ,” ಎಂದು ಬಟ್ಲರ್ ಹೇಳಿದ್ದಾರೆ. 2026 U19 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ ವೈಭವ್ ಸೂರ್ಯವಂಶಿ ದಾಖಲಿಸಿದ ಅದ್ಭುತ 175 ರನ್‌ಗಳನ್ನು ನೆನಪಿಸುತ್ತಾ ಅವರು ಈ ರೀತಿ ತಿಳಿಸಿದ್ದಾರೆ.

ಯುವ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಅವರು ಈಗಾಗಲೇ ದೃಢವಾದ ಪ್ರಭಾವವನ್ನು ತೋರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಬೌಲಿಂಗ್‌ ದಾಳಿಗಳನ್ನು ನಿಯಂತ್ರಿಸಲು ಅವರ ಸಾಮರ್ಥ್ಯವು ಜಾಗತಿಕ ಕ್ರಿಕೆಟ್ ವಲಯದಿಂದಲೂ ಗಮನ ಸೆಳೆದಿದೆ.



ಸೂರ್ಯವಂಶಿ ಏನು ಎದುರು ನೋಡುತ್ತಿದ್ದಾನೆ?

ಐಪಿಎಲ್ 2026ರಲ್ಲಿಯೂ ವೈಭವ್ ಸೂರ್ಯವಂಶಿಯ ಫಾರ್ಮ್ ಮುಂದುವರಿದಿತ್ತು. ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೇವಲ 17 ಎಸೆತಗಳಲ್ಲಿ 52 ರನ್ ಗಳಿಸಿ ಆತ ಸ್ಫೋಟಕ ಪ್ರದರ್ಶನ ನೀಡಿದ್ದರು. ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಮತ್ತು ಟೂರ್ನಿಯಲ್ಲಿನ ವೇಗದ ಶತಕಗಳನ್ನು ಬಾರಿಸಿದವರ ಪೈಕಿ ಒಬ್ಬರಾಗಿದ್ದಾರೆ.

CSK vs PBKS: ಚೆನ್ನೈಗೆ ಸತತ ಎರಡನೇ ಸೂಲು, ಚೆಪಾಕ್‌ನಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿದ ಪಂಜಾಬ್‌ ಕಿಂಗ್ಸ್‌!

ಈ ಸಂಭಾಷಣೆಯಲ್ಲಿ, ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಹೇಳಿದ್ದಾರೆ, ಈ ಯುವ ಆಟಗಾರ ಜೋಸ್ ಬಟ್ಲರ್ ಅವರಂತೆಯೇ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಟ್ರೋಫಿಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ ಎಂದಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಅವರ ಪ್ರದರ್ಶನಗಳಿಂದ ಈ ನಂಬಿಕೆ ಬರುತ್ತಿದೆ. ಈ ಯುವ ಪ್ರತಿಭೆ ತನ್ನ ವಯಸ್ಸಿಗಿಂತ ಹೆಚ್ಚಿನ ಆತ್ಮವಿಶ್ವಾಸ ಮತ್ತು ಸ್ಥಿತಪ್ರಜ್ಞೆಯನ್ನು ಪ್ರದರ್ಶಿಸುತ್ತಿದ್ದಾರೆ.