IPL 2026: ʻಬೇಕಿದ್ದರೆ ನನ್ನನ್ನು ಬೈದು ಬಿಡಿʼ-ಪಂಜಾಬ್ ಸೋಲಿನ ಬಳಿಕ ಸಿಎಸ್‌ಕೆಯನ್ನು ಟೀಕಿಸಿದ ಅಶ್ವಿನ್!
IPL 2026: ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲಿನ ನಂತರ ಆರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸ್ಪಿನ್ನರ್ ತಂಡದ ತೀವ್ರತೆಯಲ್ಲಿ ಕಂಡ ಕುಸಿತವನ್ನು "ನೋಡಲು ನೋವು ತಂದಿದೆ" ಎಂದು ಹೇಳಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಆಡಿದ ಸತತ ಎರಡೂ ಪಂದ್ಯಗಳಲ್ಲಿ ಸಿಎಸ್‌ಕೆ ಸೋಲು ಕಂಡಿದೆ.
ಸಿಎಸ್‌ಕೆ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಆರ್ ಅಶ್ವಿನ್. -
ಚೆನ್ನೈ: ಇಲ್ಲಿನ ಚೆಪಾಕ್‌ನಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ಅನುಭವಿಸಿದ ಭಾರೀ ಸೋಲಿನ ನಂತರ ತಮ್ಮ ಮಾಜಿ ತಂಡದ ಬಗ್ಗೆ ಭಾರತೀಯ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಂಡದ ಹಿನ್ನಡೆಯನ್ನು ನೋಡುವುದು “ನೋವಿನ ಸಂಗತಿ” ಎಂದು ಅವರು ಹೇಳಿಕೊಂಡಿದ್ದಾರೆ. ಈ ರೀತಿ ಮಾತನಾಡಿದಕ್ಕಾಗಿ ಟೀಕೆಗಳನ್ನು ಎದುರಿಸಲು ತಯಾರಿದ್ದೇನೆ, ತಂಡದ ಗುಣಮಟ್ಟದಲ್ಲಿ ಕಂಡ ಕುಸಿತವನ್ನು ಅವರು ನಿರ್ಲಕ್ಷ್ಯ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತಂಡದ ಸಂಕಷ್ಟಗಳು ಮುಂದುವರಿದಿವೆ. ಸರಣಿ ಸೋಲುಗಳಿಂದ ತಂಡ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ತಮ್ಮ ಮೊದಲ ತವರು ಪಂದ್ಯದಲ್ಲಿ 209/5 ರನ್‌ಗಳ ದೊಡ್ಡ ಮೊತ್ತವನ್ನು ಗಳಿಸಿದ್ದರೂ, ಅದನ್ನು ರಕ್ಷಿಸಲು ವಿಫಲವಾದ ಸಿಎಸ್‌ಕೆ, ಪಂಜಾಬ್ ಕಿಂಗ್ಸ್ ಎದುರು ಸುಲಭವಾಗಿ ಪಂದ್ಯವನ್ನು ಕೈಚೆಲ್ಲಿಕೊಂಡಿತು. ಆ ಮೂಲಕ ಸಿಎಸ್‌ಕೆ ತಂಡದ ಬೌಲಿಂಗ್ ಮತ್ತು ತೀವ್ರತೆಯಲ್ಲಿರುವ ಹಳೆಯ ಸಮಸ್ಯೆಗಳು ಪುನರಾವರ್ತನೆಯಾದವು . ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ತಂಡದ ಪ್ರದರ್ಶನದ ಬಗ್ಗೆ ಮನಸ್ಸಿಗೆ ತಟ್ಟುವಂತೆ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
CSK vs PBKS: ಚೆನ್ನೈಗೆ ಸತತ ಎರಡನೇ ಸೂಲು, ಚೆಪಾಕ್‌ನಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರಿದ ಪಂಜಾಬ್ ಕಿಂಗ್ಸ್!
ಸಿಎಸ್‌ಕೆ ತಂಡವನ್ನು ನೋಡಲು ಕಷ್ಟವಾಗುತ್ತಿದೆ
“ಯಾವುದೇ ತಪ್ಪು ಹಿಡಿಯುವ ಉದ್ದೇಶ ಇಲ್ಲ — ನಾನು ಯಾವುದೇ ಆಟಗಾರನನ್ನು ದೋಷಾರೋಪಣೆ ಮಾಡುವುದಿಲ್ಲ. ಆದರೆ ಹೊರಗಿನಿಂದ ನೋಡಿದಾಗ, ಕೆಲವೊಮ್ಮೆ ಇದು ನೋಡಲು ಕಷ್ಟವಾಗುತ್ತದೆ. ಈ ತಂಡ ಒಂದು ಕಾಲದಲ್ಲಿ ಹೇಗಿತ್ತು ಎಂಬುದು ನಿಮಗೆ ಗೊತ್ತೇ? ಇಂದು ಮೈದಾನದಿಂದ, ಕಾಮೆಂಟ್ರಿ ಬಾಕ್ಸ್‌ನಿಂದ ನೇರವಾಗಿ ಪಂದ್ಯವನ್ನು ನೋಡಿದಾಗ — ನನಗೆ ಅದು ಸ್ಪಷ್ಟವಾಗಿ ಅನಿಸಿತು,” ಎಂದು ಅಶ್ವಿನ್ ಹೇಳಿದರು.
IPL 2026: 2 ಬಾರಿ ಬ್ಯಾಟ್ ಟೆಸ್ಟ್‌ನಲ್ಲಿ ವಿಫಲರಾದ ಆಯುಷ್ ಮ್ಹಾತ್ರೆ! ಮುಂದೇನಾಯ್ತು ಗೊತ್ತೆ?
ನನ್ನನ್ನು ಬೈದರೂ ಪರವಾಗಿಲ್ಲ
“ಜನರು ಏನೇ ಬೇಕಾದರೂ ಹೇಳಲಿ, ನನಗೆ ಪರವಾಗಿಲ್ಲ. ನೀವು ನನ್ನ ಬಗ್ಗೆ ತೀರ್ಪು ಕೊಡಬಹುದು, ಟೀಕಿಸಬಹುದು — ಅದು ನನಗೆ ಮಹತ್ವದಲ್ಲ. ನನಗೆ ಚೆನ್ನೈ ಎಂದರೆ ಹೆಮ್ಮೆ. ನೀವು ಏನು ಬೇಕಾದರೂ ಯೋಚಿಸಿ, ಅದು ನನಗೆ ಬೇಸರ ತರೋದಿಲ್ಲ. ಆದರೆ ಇಂದು ಈ ತಂಡವನ್ನು ನೋಡಿದಾಗ, 15ನೇ ಓವರ್ ವೇಳೆಗೆ ಎಲ್ಲರ ಭುಜಗಳು ಕುಸಿದಂತಾಗಿತ್ತು. ನೋಡಲು ತುಂಬಾ ನೋವಾಗಿತ್ತು. ನಿಜವಾಗಿಯೂ ನೋವುಂಟುಮಾಡಿತು. ಅನುಭವ ಕಡಿಮೆ ಇರುವ ಆಟಗಾರರ ಬಾಡಿ ಲಾಂಗ್ವೇಜ್‌ನಲ್ಲಿ ಅದು ಗೋಚರಿಸುತ್ತಿತ್ತು. ತಂಡದ ವಾತಾವರಣವೇ ಬದಲಾಗುತ್ತಿದೆ. ಇದು ನಿಜವಾಗಿಯೂ ನಿರಾಶೆ ಮೂಡಿಸಿತು,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಎಂಎಸ್ ಧೋನಿಯನ್ನು ನೆನೆದ ಅಶ್ವಿನ್
“ಆ ಸಂಸ್ಕೃತಿಯನ್ನು ಮತ್ತೆ ತಂದುಕೊಡಿ. ಈ ತಂಡ ಇನ್ನೂ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಬಹುದು ಎಂಬ ನಂಬಿಕೆ ನನಗಿದೆ. ನಾನು ವಿಶ್ವಾಸದಿಂದ ಹೇಳುತ್ತೇನೆ — ಅವರು ಕೆಲವು ವಿಷಯಗಳನ್ನು ಸರಿಪಡಿಸಿಕೊಳ್ಳಬೇಕು. ಇಂದು ಒಂದು ಸಣ್ಣ ಬೇಸರ — ಎಂಎಸ್ ಧೋನಿ ಮೈದಾನದಲ್ಲಿರಲಿಲ್ಲ. ಅವರು ಇದ್ದಿದ್ದರೆ, ಇಂತಹ ಆಟಗಾರರಿಗೆ ಅದು ತುಂಬಾ ಉಪಯುಕ್ತವಾಗುತ್ತಿತ್ತು. ಅವರ ಡ್ರೆಸಿಂಗ್ ರೂಮ್‌ನಲ್ಲಿನ ಉಪಸ್ಥಿತಿ ಸಂಪೂರ್ಣ ವಾತಾವರಣವನ್ನು ಬದಲಾಯಿಸುತ್ತದೆ,” ಎಂದು ಅಶ್ವಿನ್ ಹೇಳಿದರು.