ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶುಭಮನ್‌ ಗಿಲ್‌ ಬೇಡ, ರೋಹಿತ್‌ ಶರ್ಮಾ ಜೊತೆ ವೈಭವ್‌ ಸೂರ್ಯವಂಶಿ ಇನಿಂಗ್ಸ್‌ ಆರಂಭಿಸಬೇಕೆಂದ ಫಾರೂಖ್‌ ಇಂಜಿನಿಯರ್‌!

ಭಾರತ ಏಕದಿನ ಕ್ರಿಕೆಟ್‌ ತಂಡದಲ್ಲಿ ವೈಭವ್‌ ಸೂರ್ಯವಂಶಿ ಅವರು ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಬೇಕೆಂದು ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್‌ ಅವರು ಸಲಹೆ ನೀಡಿದ್ದಾರೆ. ಆ ಮೂಲಕ ನಾಯಕ ಶುಭಮನ್‌ ಗಿಲ್‌ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಹೇಳಿದ್ದಾರೆ. ಭಾರತ ತಂಡ, ಮುಂದಿನ ಏಕದಿನ ಸರಣಿಯನ್ನು ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದೆ.

ವೈಭವ್‌ ಸೂರ್ಯವಂಶಿಗೆ ಫಾರೂಖ್‌ ಇಂಜಿನಿಯರ್‌ ಬೆಂಬಲ.

ನವದೆಹಲಿ: ಯುವ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಬೇಕೆಂದು ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್‌ (Farokh Engineer) ಅವರು, 15ರ ಪ್ರಾಯದ ಬ್ಯಾಟ್ಸ್‌ಮನ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ಜೊತೆಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಬೇಕೆಂಬುದು ಅವರ ಅಭಿಪ್ರಾಯ. ಕಳೆದ ಹಲವು ವರ್ಷಗಳಿಂದ ಭಾರತ ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಜೊತೆಗೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಆದರೆ, ಗಿಲ್‌ ಅವರಿಗೂ ಮಾಜಿ ಕ್ರಿಕೆಟಿಗ ನೂತನ ಬ್ಯಾಟಿಂಗ್‌ ಕ್ರಮಾಂಕವನ್ನು ನೀಡಿದ್ದಾರೆ.

ಜಿಂಬಾಬ್ವೆ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ಅವರು ಮೂರು ಪಂದ್ಯಗಳಲ್ಲಿ 151 ರನ್ ಗಳಿಸಿ ಎರಡು ಅರ್ಧಶತಕಗಳೊಂದಿಗೆ ಸರಣಿಯ ಶ್ರೇಷ್ಠ ಆಟಗಾರ (Player of the Series) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದೀಗ ಅವರನ್ನು ಭಾರತ ಏಕದಿನ ತಂಡಕ್ಕೂ ಆಯ್ಕೆ ಮಾಡಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ. ಭಾರತದ ಮಾಜಿ ಕ್ರಿಕೆಟಿಗ ಫಾರೂಖ್ ಎಂಜಿನಿಯರ್, ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರಿಗೆ ಭಾರತ ಏಕದಿನ ತಂಡದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.

IND vs ZIM:29 ಎಸೆತಗಳಲ್ಲಿ 60 ರನ್‌ ಸಿಡಿಸಿ ಎಂಎಸ್‌ ಧೋನಿಯ ದಾಖಲೆಯನ್ನು ಮುರಿದ ತಿಲಕ್‌ ವರ್ಮಾ!

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಶುಭಮನ್ ಗಿಲ್ ಅವರಂತಹ ಶ್ರೇಷ್ಠ ಬ್ಯಾಟರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು. ಇದೇ ವೇಳೆ, ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ವೈಭವ್‌ ಸೂರ್ಯವಂಶಿ ಅವರನ್ನು ರೋಹಿತ್ ಶರ್ಮಾ ಅವರ ಜೊತೆ ಇನಿಂಗ್ಸ್‌ ಆರಂಭಿಸಲು ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ.

"ಆದರ್ಶ ಪರಿಸ್ಥಿತಿಯಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಕಣಕ್ಕಿಳಿಯಬೇಕು. ಶುಭಮನ್ ಗಿಲ್ ಅಗ್ರ ದರ್ಜೆಯ ಬ್ಯಾಟರ್. ನನ್ನ ಅಭಿಪ್ರಾಯದಲ್ಲಿ ಈಗಿನ ಭಾರತ ತಂಡದ ಅತ್ಯುತ್ತಮ ಬ್ಯಾಟರ್ ಗಿಲ್. ಆದ್ದರಿಂದ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೆ ಒಳಿತು," ಎಂದು ಫಾರೂಖ್ ಎಂಜಿನಿಯರ್ ಹೇಳಿದ್ದಾರೆ.

ಜಿಂಬಾಬ್ವೆ ವಿರುದ್ಧ ಸರಣಿ ಕ್ಲೀನ್​ಸ್ವೀಪ್‌ ಸಾಧನೆಗೈದ ಭಾರತ; ಅಂತಿಮ ಪಂದ್ಯದಲ್ಲಿ 35 ರನ್‌ ಗೆಲುವು

ಎಡಗೈ-ಬಲಗೈ ಬ್ಯಾಟ್ಸ್‌ಮನ್‌ಗಳ ಸಂಯೋಜನೆ

ಭಾರತದ ಮಾಜಿ ಕ್ರಿಕೆಟಿಗ ಫಾರೂಖ್ ಎಂಜಿನಿಯರ್, ಏಕದಿನ ಕ್ರಿಕೆಟ್‌ನಲ್ಲಿ ಎಡ-ಬಲ ಆರಂಭಿಕರ ಜೋಡಿ ತಂಡಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಗಿಲ್ ಚೆಂಡನ್ನು ಹೆಚ್ಚು ಎತ್ತರಕ್ಕೆ ಹೊಡೆಯುವ ರೀತಿಯ ಬ್ಯಾಟರ್ ಅಲ್ಲ. ಆದ್ದರಿಂದ ಏಕದಿನ ಪಂದ್ಯಗಳಲ್ಲಿ ಎಡ-ಬಲ ಆರಂಭಿಕರ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗುತ್ತದೆ. ರೋಹಿತ್ ಶರ್ಮಾ ತಂಡದಲ್ಲಿದ್ದರೆ ಮತ್ತು ಅವರು ಆಡಲೇಬೇಕು ಎಂದು ನಾನು ಭಾವಿಸುತ್ತೇನೆ, ಅವರು ವೈಭವ್ ಸೂರ್ಯವಂಶಿ ಜೊತೆಗೆ ಇನಿಂಗ್ಸ್ ಆರಂಭಿಸಬೇಕು," ಎಂದು ಎಂಜಿನಿಯರ್ ಹೇಳಿದ್ದಾರೆ.

ಇಂಗ್ಲೆಂಡ್‌ ಹಿಂದಿಕ್ಕಿ ಮತ್ತೆ ಟಿ20 ನಂ.1 ಸ್ಥಾನಕ್ಕೇರಿದ ಭಾರತ

ಮಾತು ಮುಂದುವರಿಸಿದ ಅವರು, "ಸೂರ್ಯವಂಶಿಯಂತಹ ಬ್ಯಾಟರ್‌ಗೆ ಆರಂಭಿಕನಾಗಿ ಆಡುವುದೇ ಹೆಚ್ಚು ಸೂಕ್ತ. ಆರಂಭದಲ್ಲಿ ಮೈದಾನದಲ್ಲಿ ದೊಡ್ಡ ಅಂತರಗಳು (ಗ್ಯಾಪ್‌ಗಳು) ಇರುವುದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಹುದು. ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ, ಭಾರತದ ಬ್ಯಾಟಿಂಗ್ ಕ್ರಮಾಂಕ ಅತ್ಯಂತ ಬಲಿಷ್ಠವಾಗಿರುತ್ತದೆ," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.