ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GT vs RR: 15ನೇ ವಯಸ್ಸಿನಲ್ಲಿಯೇ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ 15ನೇ ವಯಸ್ಸಿನ ಪೋರ ವೈಭವ್‌ ಸೂರ್ಯವಂಶಿ, ಇದೀಗ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ. 20ನೇ ವಯಸ್ಸಿಗೂ ಮುನ್ನ 100 ಟಿ20 ಸಿಕ್ಸರ್‌ ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

100 ಸಿಕ್ಸರ್‌ಗಳ ಮೂಲಕ ವಿಶ್ವ ದಾಖಲೆ ಬರೆದ ವೈಭವ್‌ ಸೂರ್ಯವಂಶಿ.

ಜೈಪುರ: ಮುಟ್ಟಿದ್ದೆಲ್ಲವೂ ಚಿನ್ನ ಎಂಬ ಗಾಧೆಯನ್ನು ಸದ್ಯ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಸದ್ದು ಮಾಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಬಳಸುವುದು ಸೂಕ್ತ. ಏಕೆಂದರೆ ಪ್ರಸಕ್ತ ಟೂರ್ನಿಯಲ್ಲಿ 15ರ ವಯಸ್ಸಿನ ಪೋರ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿಶ್ವದ ಘಟಾನುಘಟಿ ಬೌಲರ್‌ಗಳಿಗೆ ನಡುಕು ಹುಟ್ಟಿಸಿದ್ದಾರೆ ಹಾಗೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದೀಗ ಅವರು ಮತ್ತೊಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ 20 ವರ್ಷ ವಯಸ್ಸಿನೊಳಗಿನ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ವೈಭವ್‌ ಬರೆದಿದ್ದಾರೆ.

ಮೇ 9 ರಂದು ಶನಿವಾರ ಇಲ್ಲಿನ ಸವಾಯಿ ಮಾನ್ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 230 ರನ್‌ಗಳ ಚೇಸಿಂಗ್‌ ವೇಳೆ ವೈಭವ್‌ ಸೂರ್ಯವಂಶಿ ಪವರ್‌ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿಸಿದರು. ಅವರು ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳ ಮೂಲಕ 36 ರನ್‌ ಸಿಡಿಸಿದರು. ಆ ಮೂಲಕ ದೊಡ್ಡ ಇನಿಂಗ್ಸ್‌ ಆಡುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಮೊಹಮ್ಮದ್‌ ಸಿರಾಜ್‌ ಎಸೆತದಲ್ಲಿ ಕ್ಯಾಚ್‌ ಕೊಟ್ಟು ನಿರ್ಗಮಿಸಿದರು.

GT vs RR: ಐಪಿಎಲ್‌ ಇತಿಹಾಸದ ಅತ್ಯಂತ ದೀರ್ಘಾವಧಿ ಓವರ್‌ ಬೌಲ್‌ ಮಾಡಿದ ಜೋಫ್ರಾ ಆರ್ಚರ್‌!

ಈ ಪಂದ್ಯದಲ್ಲಿ ಮೂರು ಸಿಕ್ಸರ್‌ ಹಾಗೂ ಎಡಗೈ ಆರಂಭಿಕ ತಮ್ಮ ಟಿ20 ವೃತ್ತಿ ಜೀವನದಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 20 ವರ್ಷ ವಯಸ್ಸಿಗೂ ಮುನ್ನ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಆ ಮೂಲಕ ವೆಸ್ಟ್‌ ಇಂಡೀಸ್‌ ದಿಗ್ಗಜ ಕೈರೊನ್‌ ಪೊಲಾರ್ಡ್‌ ದಾಖಲೆಯನ್ನು ಮುರಿದಿದ್ದಾರೆ. ಪೊಲಾರ್ಡ್‌ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲು 843 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ, ವೈಭವ್‌ 514 ಎಸೆತಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ.



20ನೇ ವಯಸ್ಸಿಗೂ ಮುನ್ನ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್ಸ್‌

ವೈಭವ್ ಸೂರ್ಯವಂಶಿ - 29 ಇನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳು

ರೆಹಮಾನುಲ್ಲಾ ಗುರ್ಬಾಜ್ - 52 ಇನಿಂಗ್ಸ್‌ಗಳಲ್ಲಿ 90 ಸಿಕ್ಸರ್‌ಗಳು

ಡೆವಾಲ್ಡ್ ಬ್ರೆವಿಸ್ - 42 ಇನಿಂಗ್ಸ್‌ಗಳಲ್ಲಿ 73 ಸಿಕ್ಸರ್‌ಗಳು

ಗುಲ್ಸನ್ ಝಾ - 49 ಇನಿಂಗ್ಸ್‌ಗಳಲ್ಲಿ 53 ಸಿಕ್ಸರ್‌ಗಳು

ಇಶಾನ್ ಕಿಶನ್ - 52 ಇನಿಂಗ್ಸ್‌ಗಳಲ್ಲಿ 53 ಸಿಕ್ಸರ್‌ಗಳು

IPL 2026: ಮುಂಬೈ ಇಂಡಿಯನ್ಸ್‌ ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲ್ಲುವುದು ಪಕ್ಕಾ?

ಆರ್‌ಆರ್‌ಗೆ ಉತ್ತಮ ಆರಂಭ ನೀಡುವಲ್ಲಿ ಜೈಸ್ವಾಲ್‌-ವೈಭವ್‌ ವಿಫಲ

ಈ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಗೆದ್ದಿದ್ದ ಬಹುತೇಕ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರ ಸ್ಪೋಟಕ ಆರಂಭ ಪ್ರಮುಖ ಪಾತ್ರವನ್ನು ವಹಿಸಿತ್ತು. ಶನಿವಾರ ಗುಜರಾತ್‌ ಟೈಟನ್ಸ್‌ ನೀಡಿದ್ದ 230 ರನ್‌ಗಳ ಚೇಸಿಂಗ್‌ನಲ್ಲಿಯೂ ಈ ಜೋಡಿಯ ಮೇಲೆ ಭಾರಿ ನಿರೀಕ್ಷೆಯನ್ನು ಇಡಲಾಗಿತ್ತು. ಅದರಂತೆ ವೈಭವ್‌ 36 ರನ್‌ ಚಚ್ಚಿದ್ದರು, ಆದರೆ ಮತ್ತೊಂದು ತುದಿಯಲ್ಲಿ ಜೈಸ್ವಾಲ್‌ ಕಡೆಯಿಂದ ಉತ್ತಮ ಆಟ ಮೂಡಿ ಬರಲಿಲ್ಲ. ಈ ಜೋಡಿ ಮೊದಲನೇ ವಿಕೆಟ್‌ಗೆ 38 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿತು. ಜೈಸ್ವಾಲ್‌ ಕೇವಲ 3 ರನ್‌ಗೆ ವಿಕೆಟ್‌ ಒಪ್ಪಿಸಿದರು.