IPL 2026: ಮುಂಬೈ ಇಂಡಿಯನ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವುದು ಪಕ್ಕಾ?
RCB vs MI Match Prediction: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮೇ 10ರಂದು ಭಾನುವಾರ ರಾಯ್ಪುರದ ಸಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 54ನೇ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಬಗ್ಗೆ ತೀವ್ರ ಕುತೂಹಲವಿದೆ.
RCB vs MI ನಡುವಣ ಗೆಲ್ಲುವ ನೆಚ್ಚಿನ ತಂಡ ಯಾವುದು? -
ರಾಯ್ಪುರ: ಇಲ್ಲಿನ ಸಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (RCB vs MI) ಕಾದಾಟ ನಡೆಸಲಿವೆ. ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಮುಂಬೈ ತಂಡಕ್ಕೆ ಪ್ಲೇಆಫ್ಸ್ ಅವಕಾಶ ಅತ್ಯಂತ ಕಠಿಣವಾಗಿದೆ. ಆದರೆ, ಆರ್‌ಸಿಬಿ ತಂಡ 10 ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿ ಪ್ಲೇಆಫ್ಸ್ ಸನಿಹದಲ್ಲಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ಆರ್‌ಸಿಬಿ ತಂಡ ತನ್ನ ನಾಕೌಟ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಆದರೆ, ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಕಳೆದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಹಾಗಾಗಿ ಆರ್‌ಸಿಬಿ ತಂಡದ ಮೇಲೆಯೂ ಒತ್ತಡವಿದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಎರಡನೇ ಬಾರಿ ಮುಂಬೈ ತಂಡವನ್ನು ಎದುರಿಸುತ್ತಿದೆ. ಇದಕ್ಕೂ ಮುನ್ನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಪಡೆದಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಲು ಬೆಂಗಳೂರು ತಂಡ ಎದುರು ನೋಡುತ್ತಿದೆ.
RCB vs MI: ಬೆಥೆಲ್ ಔಟ್, ಜೋರ್ಡನ್ ಇನ್? ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಪ್ಲೇಆಫ್ಸ್ ಹಾದಿಯಿಂದ ಬಹುತೇಕ ದೂರ ಸರಿದಿದೆ, ಹಾಗಾಗಿ ಕನಿಷ್ಠ ಮುಂದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯ ಅಭಿಯಾನವನ್ನು ಮುಗಿಸಲು ಐದು ಬಾರಿ ಚಾಂಪಿಯನ್ಸ್ ಪ್ರಯತ್ನಿಸಲಿದ್ದಾರೆ. ಅಂದ ಹಾಗೆ ಆರ್‌ಸಿಬಿ ತಂಡ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಆದರೆ, ಮುಂಬೈ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗುತ್ತಿದ್ದಾರೆ.
ಕಳೆದ 10 ಪಂದ್ಯಗಳಲ್ಲಿ ಮುಖಾಮುಖಿ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು: 07
ಮುಂಬೈ ಇಂಡಿಯನ್ಸ್ ಗೆಲುವು: 03
RCB vs MI ಗೆಲುವಿನ ಸಂಭವನೀಯತೆ
ಆರ್‌ಸಿಬಿ: 60%
ಎಂಐ: 40%
RCB vs MI: ಎರಡನೇ ತವರಿನಲ್ಲಿ ಆರ್‌ಸಿಬಿಗೆ ಮೊದಲ ಪಂದ್ಯ; ಮುಂಬೈ ಎದುರಾಳಿ
ಎರಡೂ ತಂಡಗಳ ಕೀ ಆಟಗಾರರು
ವಿರಾಟ್ ಕೊಹ್ಲಿ (ಆರ್‌ಸಿಬಿ): 379 ರನ್
ರಯಾನ್ ರಿಕೆಲ್ಟನ್ (ಎಂಐ): 380 ರನ್
ರಜತ್ ಪಾಟಿದಾರ್ (ಆರ್‌ಸಿಬಿ): 318 ರನ್
ಭುವನೇಶ್ವರ್ ಕುಮಾರ್ (ಆರ್‌ಸಿಬಿ): 17 ವಿಕೆಟ್‌ಗಳು
ಅಲನ್ ಘಜನ್‌ಫರ್ (ಎಂಐ): 12 ವಿಕೆಟ್‌ಗಳು
ಕೃಣಾಲ್ ಪಾಂಡ್ಯ (ಆರ್‌ಸಿಬಿ): 10 ವಿಕೆಟ್‌ಗಳು
54ನೇ ಪಂದ್ಯವನ್ನು ಯಾವ ತಂಡ ಗೆಲ್ಲಬಹುದು?
ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯದಲ್ಲಿ ತೀವ್ರ ಪೈಪೋಟಿ ನಡೆಯಲಿದೆ. ಆದರೆ, ಆರ್‌ಸಿಬಿ ತಂಡ ಬಲಿಷ್ಠ ಆಟಗಾರರ ಸಂಯೋಜನೆಯನ್ನು ಹೊಂದಿದ್ದು ಹಾಗೂ ಅತ್ಯುತ್ತಮ ಫಾರ್ಮ್‌ನ ಕಾರಣ ಮುಂಬೈ ತಂಡವನ್ನು ಬೆಂಗಳೂರು ತಂಡ ಸೋಲಿಸಲಿದೆ.