ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಜಯ ಹಝಾರೆ ಟ್ರೋಫಿ ಗೆಲ್ಲುವ ಕನಸು ಭಗ್ನ, ವಿದರ್ಭ ಎದುರು ಸೆಮೀಸ್‌ನಲ್ಲಿ ಸೋತ ಕರ್ನಾಟಕ!

KAR vs VID Match Highlights: 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಗೆಲ್ಲುವ ಕರ್ನಾಟಕ ತಂಡದ ಕನಸು ಭಗ್ನವಾಯಿತು. ಗುರುವಾರ ವಿದರ್ಭ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಕರ್ನಾಟಕ ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. 122 ಎಸೆತಗಳಲ್ಲಿ 138 ರನ್‌ ಗಳಿಸುವ ಮೂಲಕ ಅಮನ್‌ ಮೊಖಾಡೆ, ವಿದರ್ಭ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ವಿದರ್ಭ ಎದುರು ಸೆಮಿಫೈನಲ್‌ ಪಂದ್ಯ ಸೋತ ಕರ್ನಾಟಕ.

ಬೆಂಗಳೂರು: ಕರುಣ್‌ ನಾಯರ್‌ (Karun Nair) ಹಾಗೂ ಕೃಷ್ಣನ್‌ ಶ್ರೀಜಿತ್‌ ಅವರ ಅರ್ಧಶತಕಗಳ ಹೊರತಾಗಿಯೂ ಕರ್ನಾಟಕ (Karnataka) ತಂಡ, ಬೌಲಿಂಗ್‌ ವೈಫಲ್ಯದಿಂದ 20250-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭ ಎದುರು 6 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ಟೂರ್ನಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿದ್ದ ಮಯಾಂಕ್‌ ಅಗರ್ವಾಲ್‌ ನಾಯಕತ್ವದ ಆತಿಥೇಯ ತಂಡ, 50 ಓವರ್‌ ದೇಶಿ ಟೂರ್ನಿಯ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು. ಆದರೆ, ಅಮನ್‌ ಮೊಖಾಡೆ ಅವರ ಶತಕ ಹಾಗೂ ಆರ್‌ ಸಮರ್ಥ ಅವರ ಅರ್ಧಶತಕದ ಬಲದಿಂದ ವಿದರ್ಭ, ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಅರ್ಹತೆ ಪಡೆಯಿತು.

ನಗರದ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್‌ ಆಪ್‌ ಎಕ್ಸ್‌ಲೆಂಟ್‌ ಮೊದಲನೇ ಮೈದಾನದಲ್ಲಿ ಕರ್ನಾಟಕ ನೀಡಿದ್ದ 281 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವಿದರ್ಭ ತಂಡ, ಬಹುಬೇಗ ನಾಯಕ ಅಥರ್ವ ಥೈಡೆ ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಆದರೆ, ಅಮನ್‌ ಮೊಖಾಡೆ ಅವರ ಶತಕ ಮತ್ತು ಆರ್‌ ಸಮರ್ಥ್‌ ಅವರ ಅರ್ಧಶತಕದ ಬಲದಿಂದ 46.2 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ವಿರಾಟ್‌ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಜಯ್‌ ಮಾಂಜ್ರೇಕರ್‌ರನ್ನು ಟೀಕಿಸಿದ ಹರ್ಭಜನ್‌ ಸಿಂಗ್‌!

ಭರ್ಜರಿ ಶತಕ ಬಾರಿಸಿದ ಅಮನ್‌ ಮೊಖಾಡೆ

ವಿದರ್ಭ ತಂಡದ ಮೊದಲನೇ ವಿಕೆಟ್‌ ಅನ್ನು ಬಹುಬೇಗ ಪಡೆದರೂ ಕರ್ನಾಟಕ ಬೌಲರ್‌ಗಳು ನಂತರದ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವಲ್ಲಿ ವಿಫಲರಾದರು. ಧ್ರುವ್‌ ಶೋರೆ 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಇವರು ಅಮನ್‌ ಜೊತೆ 89 ರನ್‌ಗಳ ಜೊತೆಯಾಟವನ್ನು ಆಡಿ ತಂಡಕ್ಕೆ ಭದ್ರ ಅಡಿಪಾಯವನ್ನು ಹಾಕಿದ್ದರು. ಆದರೆ, ಮೂರನೇ ವಿಕೆಟ್‌ಗೆ ಅಮನ್‌ ಹಾಗೂ ಆರ್‌ ಸಮರ್ಥ 147 ರನ್‌ಗಳ ಜೊತೆಯಾಟವನ್ನುಆಡಿದರು. ಈ ಜೋಡಿ ಬೇರ್ಪಡಿಸುವಲ್ಲಿ ಕರ್ನಾಟಕ ಬೌಲರ್‌ಗಳ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದ್ಭುತವಾಗಿ ಬ್ಯಾಟ್‌ ಮಾಡಿದ ಅಮನ್‌ ಮೊಖಾಡೆ 122 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 138 ರನ್‌ ಕಲೆ ಹಾಕಿದರು. ಆ ಮೂಲಕ ವಿದರ್ಭ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಆರ್‌ ಸಮರ್ಥ್‌ ಅರ್ಧಶತಕ

ಅಮನ್‌ ಮೊಖಾಡೆ ಜತೆ ದೀರ್ಘಾವಧಿ ಬ್ಯಾಟ್‌ ಮಾಡಿದ್ದ ಕನ್ನಡಿಗ ಆರ್‌ ಸಮರ್ಥ್‌ ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ವಿದರ್ಭ ತಂಡವನ್ನು ಗೆಲ್ಲಿಸಿದರು. ಅದ್ಭುತವಾಗಿ ಬ್ಯಾಟ್‌ ಮಾಡಿದ ಸಮರ್ಥ್‌, 69 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ಅಜೇಯ 76 ರನ್‌ ಗಳಿಸಿದರು. ಕೊನೆಯಲ್ಲಿ ವಿನ್ನಿಂಗ್‌ ಶಾಟ್‌ ಮೂಲಕ ವಿದರ್ಭ ತಂಡವನ್ನು ಗೆಲುವಿನ ಗೆರೆ ದಾಟಿಸಿದರು. ಕರ್ನಾಟಕ ಪರ ಅಭಿಲಾಷ್‌ ಶೆಟ್ಟಿ 10 ಓವರ್‌ಗಳಿಗೆ 48 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು.

280 ರನ್‌ಗಳನ್ನು ಕಲೆ ಹಾಕಿದ್ದ ಕರ್ನಾಟಕ

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಕರ್ನಾಟಕ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಕರುಣ್‌ ನಾಯರ್‌ ಹಾಗೂ ಕೃಷ್ಣನ್‌ ಶ್ರೀಜಿತ್‌ ಅವರ ಅರ್ಧಶತಕಗಳ ಬಲದಿಂದ 49.4 ಓವರ್‌ಗಳಿಗೆ 280 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್‌ ತಂಡಕ್ಕೆ 281 ರನ್‌ಗಳ ಗುರಿಯನ್ನು ನೀಡಿತು.

VHT 2025-26: ಇತಿಹಾಸ ಬರೆದ ದೇವದತ್‌ ಪಡಿಕ್ಕಲ್‌; ಮುಂಬೈ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಕರ್ನಾಟಕ!

ಮಯಾಂಕ್‌-ಪಡಿಕ್ಕಲ್‌ ವೈಫಲ್ಯ

ಈ ಟೂರ್ನಿಯುದ್ದಕ್ಕೂ ರನ್‌ ಹೊಳೆ ಹರಿಸಿದ್ದ ಆರಂಭಿಕ ಜೋಡಿ ಮಯಾಂಕ್‌ ಅಗರ್ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಫಲರಾದರು. ನಾಯಕ ಮಯಾಂಕ್‌ ಅಗರ್ವಾಲ್‌ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ದೇವದತ್‌ ಪಡಿಕ್ಕಲ್‌ ಕೇವಲ 4 ರನ್‌ಗೆ ಔಟ್‌ ಆದರು. ಆ ಮೂಲಕ ಕರ್ನಾಟಕ ತಂಡ ಕೇವಲ 20 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.

ಅರ್ಧಶತಕ ಬಾರಿಸಿದ ಕರುಣ್‌, ಕೃಷ್ಣನ್‌ ಶ್ರೀಜಿತ್‌

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಧ್ರುವ್‌ ಪ್ರಭಾಕರ್‌ 28 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ದರ್ಶನ್‌ ನಲ್ಕಂಡೆ ಎಸೆತದಲ್ಲಿ ಪುಲ್‌ ಮಾಡಲು ಹೋಗಿ ಕ್ಯಾಚ್‌ ಕೊಟ್ಟರು. ಕರುಣ್‌ ಹಾಗೂ ಪ್ರಭಾಕರ್‌ ಮೂರನೇ ವಿಕೆಟ್‌ಗೆ 54 ರನ್‌ ಗಳಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಧ್ರುವ್‌ ವಿಕೆಟ್‌ ಒಪ್ಪಿಸಿದ ಬಳಿಕ ಜೊತೆಯಾದ ಕರುಣ್‌ ಹಾಗೂ ಕೃಷ್ಣನ್‌ ಶ್ರೀಜಿತ್‌ ಭರ್ಜರಿ ಜೊತೆಯಾಟವನ್ನು ಆಡಿದರು. ಇವರಿಬ್ಬರೂ 113 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ತಂಡದ ಮೊತ್ತವನ್ನು 200ರ ಸನಿಹ ತಂದು ವಿಕೆಟ್‌ ಒಪ್ಪಿಸಿದ್ದರು. ಜವಾಬ್ದಾರಿಯುತ ಬ್ಯಾಟ್‌ ಮಾಡಿದ ಕರುಣ್‌, 90 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 70 ರನ್‌ ಗಳಿಸಿ ದರ್ಶನ್‌ಗೆ ಔಟ್‌ ಆದರು. ಇವರ ಬೆನ್ನಲ್ಲೆ 53 ಎಸೆತಗಳಲ್ಲಿ 54 ರನ್‌ ಗಳಿಸಿ ಆಡುತ್ತಿದ್ದ ಶ್ರೀಜಿತ್‌, ಯಶ್‌ ಕದಮ್‌ಗೆ ಬೌಲ್ಡ್‌ ಆದರು.

Kuldeep Yadav: ಎಲ್ಲಾ ಸ್ವರೂಪದಲ್ಲಿಯೂ ವಿಶ್ವದ ನಂ.1 ಸ್ಪಿನ್ನರ್‌ ಹೆಸರಿಸಿದ ಯುಜ್ವೇಂದ್ರ ಚಹಲ್‌!

ನಂತರ ಬ್ಯಾಟ್‌ ಮಾಡಿದ ಶ್ರೇಯಸ್‌ ಗೋಪಾಲ್‌ 39 ಎಸೆತಗಳಲ್ಲಿ 36 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೆ, ಅವರು ಇನಿಂಗ್ಸ್‌ ಅನ್ನು ಯಶಸ್ವಿಯಾಗಿ ಮುಗಿಸುವಲ್ಲಿ ವಿಫಲರಾದರು. ಸ್ಪೋಟಕ ಬ್ಯಾಟರ್‌ ಅಭಿನವ್‌ ಮನೋಹರ್‌ ಕೂಡ 26 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಇವರು ಕೂಡ 50 ಓವರ್‌ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲರಾದರು.