IND vs NZ: ಶತಕ ಸಿಡಿಸಿ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
Virat Kohli Scored Century: ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ಆ ಮೂಲಕ ಕಿವೀಸ್ ಎದುರು ಅತಿ ಹೆಚ್ಚು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ ಹಾಗೂ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದರು.
ಶತಕ ಬಾರಿಸಿ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಕೊಹ್ಲಿ. -
ಇಂದೋರ್: ನ್ಯೂಜಿಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ (IND vs NZ) ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 54ನೇ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 85ನೇ ಶತಕವನ್ನು ಬಾರಿಸಿದರು. ಶತಕದ ಮೂಲಕ ಮೂಲಕ ಕಿಂಗ್ ಕೊಹ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇದರ ಹೊರತಾಗಿಯೂ ಭಾರತ ತಂಡ (India) ಮೂರನೇ ಪಂದ್ಯವನ್ನು ಸೋತು ಏಕದಿನ ಸರಣಿಯನ್ನು 1-2 ಅಂತರದಲ್ಲಿ ಸೋಲು ಅನುಭವಿಸಿತು.
ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕಿವೀಸ್ ನೀಡಿದ್ದ 338 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ವಿರಾಟ್ ಕೊಹ್ಲಿ ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 108 ಎಸೆತಗಳಲ್ಲಿ 124 ರನ್‌ಗಳನ್ನು ಬಾರಿಸಿದರು. ಇವರಿಗೆ ಸಾಥ್ ನೀಡಿದ ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ತಲಾ ಅರ್ಧಶತಕಗಳನ್ನು ಬಾರಿಸಿದರು. ಆದರೂ ಅಂತಿಮವಾಗಿ ಟೀಮ್ ಇಂಡಿಯಾ 41 ರನ್‌ಗಳಿಂದ ಸೋಲು ಅನುಭವಿಸಿತು.
IND vs NZ: ವಿರಾಟ್ ಕೊಹ್ಲಿ ಹೋರಾಟದ ಶತಕ ವ್ಯರ್ಥ, ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್!
ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ಈ ಶತಕದ ಮೂಲಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಅತಿ ಹೆಚ್ಚು ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕಿವೀಸ್ ಎದುರು ಕೊಹ್ಲಿ 7 ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಈ ಹಿಂದೆ 6 ಶತಕಗಳನ್ನು ಗಳಿಸಿದ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ರಿಕಿ ಪಾಟಿಂಗ್ ಅವರನ್ನು ಕೂಡ ಕಿಂಗ್ ಕೊಹ್ಲಿ ಹಿಂದಿಕ್ಕಿದ್ದಾರೆ.
54th ODI century and 7th against New Zealand! An absolute innings of class from Virat Kohli unfolding in Indore. Congratulations @imVkohli pic.twitter.com/85wz6x8hiJ
— Rajeev Shukla (@ShuklaRajiv) January 18, 2026
ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಒಡಿಐ ಶತಕ ಬಾರಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ: 7 ಶತಕ, 36 ಇನಿಂಗ್ಸ್
ವೀರೇಂದ್ರ ಸೆಹ್ವಾಗ್: 6 ಶತಕ, 51 ಇನಿಂಗ್ಸ್
ರಿಕಿ ಪಾಂಟಿಂಗ್: 6 ಶತಕ, 23 ಇನಿಂಗ್ಸ್
ಸನತ್ ಜಯಸೂರ್ಯ: 5 ಶತಕ, 47 ಇನಿಂಗ್ಸ್
ಸಚಿನ್ ತೆಂಡೂಲ್ಕರ್: 5 ಶತಕ, 42 ಇನಿಂಗ್ಸ್
ಕಿವೀಸ್ ಎದುರು 10 ಶತಕ ಬಾರಿಸಿರುವ ಕೊಹ್ಲಿ
IND vs NZ: ಡ್ರೆಸ್ಸಿಂಗ್ ರೂಂಗೆ ತೆರಳುತ್ತಿದ್ದ ಡ್ಯಾರಿಲ್ ಮಿಚೆಲ್‌ರನ್ನು ತಳ್ಳಿದ ವಿರಾಟ್ ಕೊಹ್ಲಿ! ವಿಡಿಯೊ
ವಿರಾಟ್ ಕೊಹ್ಲಿ ಒಟ್ಟಾರೆ ನ್ಯೂಜಿಲೆಂಡ್ ವಿರುದ್ಧ ಎಲ್ಲಾ ಸ್ವರೂಪದಲ್ಲಿಯೂ 10 ಶತಕಗಳನ್ನು ಬಾರಿಸಿದ್ದಾರೆ.
ಈ ಸ್ಟಾರ್ ಬ್ಯಾಟ್ಸ್‌ಮನ್ ಜಾಕ್ ಕಾಲಿಸ್, ಸಚಿನ್ ತೆಂಡೂಲ್ಕರ್ ಮತ್ತು ಜೋ ರೂಟ್ ಅವರೊಂದಿಗಿನ ತ್ರಿ-ಜಂಟಿ ದಾಖಲೆಯನ್ನು ಮುರಿದರು. ಆ ಮೂಲಕ ಕಿವೀಸ್ ಎದುರು ಎಲ್ಲಾ ಸ್ವರೂಪದಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಟಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಮೂರು ಶತಕ ಬಾರಿಸಿದ್ದಾರೆ. ಪಾಂಟಿಂಗ್, ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ನ್ಯೂಜಿಲೆಂಡ್ ವಿರುದ್ಧ ಎಂಟು ಶತಕಗಳನ್ನು ಗಳಿಸಿದ್ದಾರೆ.