ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಿಎಸ್‌ಎಲ್‌ನಿಂದ ಒಬ್ಬೇ ಒಬ್ಬ ವೈಭವ್‌ ಸೂರ್ಯವಂಶಿಯಂಥಾ ಬ್ಯಾಟರ್‌ ಬೆಳಕಿಗೆ ಬಂದಿಲ್ಲ: ವಸೀಮ್‌ ಅಕ್ರಮ್‌

ಪಾಕಿಸ್ತಾನ ಮಾಜಿ ನಾಯಕ ಹಾಗೂ ದಿಗ್ಗಜ ವೇಗದ ಬೌಲರ್‌ ವಸೀಮ್‌ ಅಕ್ರಮ್‌ ಅವರು, ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯ ವಿರುದ್ಧ ಗುಡುಗಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ವೈಭವ್‌ ಸೂರ್ಯವಂಶಿಯಂಥಾ ಪ್ರತಿಭಾವಂತ ಬ್ಯಾಟರ್‌ ಬೆಳಕಿಗೆ ಬಂದಿದ್ದಾರೆ. ಆದರೆ, ಪಿಎಸ್‌ಎಲ್‌ನಿಂದ ಯಾರು ಬಂದಿದ್ದಾರೆಂದು ಅಕ್ರಮ್‌ ಗುಡುಗಿದ್ದಾರೆ.

ವೈಭವ್‌ ಸೂರ್ಯವಂಶಿಯನ್ನು ಶ್ಲಾಘಿಸಿದ ವಸೀಮ್‌ ಅಕ್ರಮ್‌.

ನವದೆಹಲಿ: ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರನ್ನು ಉದಾಹರಣೆಯಾಗಿ ಉಲ್ಲೇಖಿಸಿ ಪಾಕಿಸ್ತಾನದ ದಿಗ್ಗಜ ವೇಗಿ ವಸೀಮ್‌ ಅಕ್ರಮ್‌ (Wasim AKram), ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (PSL) ನಡುವಿನ ಬೆಳವಣಿಗೆಯನ್ನು ಹೋಲಿಕೆ ಮಾಡಿದ್ದಾರೆ. ಕೇವಲ 15 ವರ್ಷದ ವೈಭವ್ ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸತತ ಎರಡು ಅದ್ಭುತ ಐಪಿಎಲ್ ಋತುಗಳಲ್ಲಿ ಮಿಂಚಿದ ಬಳಿಕ ವೈಭವ್, ಇಂಗ್ಲೆಂಡ್ ವಿರುದ್ಧ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಐಪಿಎಲ್ ಹಾಗೂ ಪಿಎಸ್‌ಎಲ್ ಎರಡೂ ಲೀಗ್‌ಗಳಲ್ಲಿ ಕೋಚ್ ಮತ್ತು ಮೆಂಟರ್ ಆಗಿ ಕೆಲಸ ಮಾಡಿರುವ ವಸೀಮ್‌ ಅಕ್ರಮ್‌, ಐಪಿಎಲ್‌ನಂತೆ ಪಿಎಸ್‌ಎಲ್‌ನಿಂದ ವೈಭವ್‌ ಸೂರ್ಯವಂಶಿ ಅವರಂಥಾ ಯುವ ಬ್ಯಾಟಿಂಗ್ ಪ್ರತಿಭೆಗಳು ಹೊರಹೊಮ್ಮುತ್ತಿಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ವಸೀಮ್‌ ಅಕ್ರಮ್‌ 2010ರಿಂದ 2017ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬೌಲಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಅವಧಿಯಲ್ಲಿ ಕೆಕೆಆರ್ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಇನ್ನು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅಕ್ರಮ್‌, ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳೊಂದಿಗೆ ಕೋಚಿಂಗ್ ಹಾಗೂ ಮೆಂಟರಿಂಗ್ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ENG vs PAK: ಅರ್ಧಶತಕ ಬಾರಿಸಿ ಮಿಸ್ಬಾ ಉಲ್‌ ಹಕ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಬಾಬರ್‌ ಆಝಮ್!

ವೈಭವ್ ಸೂರ್ಯವಂಶಿಯ ಬೆಳವಣಿಗೆಯನ್ನು ಉದಾಹರಣೆಯಾಗಿ ನೀಡುವ ಮೂಲಕ ಅಕ್ರಮ್‌, ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ಬೆಳೆಸುವಲ್ಲಿ ಪಿಎಸ್‌ಎಲ್ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬರ್ ಫುರ್ಕಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ವಸೀಮ್‌ ಅಕ್ರಮ್‌, "ಪಿಎಸ್‌ಎಲ್ ಆರಂಭವಾಗಿ 10 ವರ್ಷಗಳಾಗಿವೆ. ಆದರೆ ಈ ಲೀಗ್‌ನಿಂದ ಒಬ್ಬ ಬ್ಯಾಟರ್‌ ಆದರೂ ಹೊರಹೊಮ್ಮಿದ್ದಾರೆಯೇ? ಹೌದು, ನಾವು ಕೆಲವು ಉತ್ತಮ ಬೌಲರ್‌ಗಳನ್ನು ಬೆಳೆಸಿದ್ದೇವೆ. ಆದರೆ ಗಮನಾರ್ಹ ಬ್ಯಾಟಿಂಗ್ ಪ್ರತಿಭೆ ಯಾರಾದರೂ ಬಂದಿದ್ದಾರೆಯೇ? 14ರ ವಯಸ್ಸಿನ (ವೈಭವ್ ಸೂರ್ಯವಂಶಿ, 15) ಆಟಗಾರನಂತಹ ಬ್ಯಾಟಿಂಗ್ ಪ್ರತಿಭೆಯನ್ನು ನಾವು ಬೆಳೆಸಿದಾಗ ಮಾತ್ರ ಸುಧಾರಣೆ ಕಾಣಲು ಆರಂಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿಯೇ ಅತ್ಯಂತ ಶ್ರೇಷ್ಠ ನಾಯಕ ಎಂಎಸ್‌ ಧೋನಿ ಎಂದ ರಾಹುಲ್‌ ದ್ರಾವಿಡ್‌!

ಪಾಕಿಸ್ತಾನದ ದಿಗ್ಗಜ ವೇಗಿ ವಸೀಮ್‌ ಅಕ್ರಂ, ದೇಶದಲ್ಲಿ ಕ್ಲಬ್ ಕ್ರಿಕೆಟ್ ಸಂಸ್ಕೃತಿಯನ್ನು ಮತ್ತೆ ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ. ಕ್ಲಬ್ ಕ್ರಿಕೆಟ್ ಮೂಲಕವೇ ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬಹುದು. ಇದರಿಂದ ಪಾಕಿಸ್ತಾನ್ ಸೂಪರ್ ಲೀಗ್‌ (PSL)ಗೆ ಪ್ರತಿಭೆಗಳ ಪೂರೈಕೆ ಹೆಚ್ಚುವುದರ ಜೊತೆಗೆ, ಒಟ್ಟಾರೆ ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಸುಧಾರಣೆ ಬೇಕಾದರೆ ಕ್ಲಬ್ ಕ್ರಿಕೆಟ್ ಅನ್ನು ಮತ್ತೆ ಪುನರುಜ್ಜೀವನಗೊಳಿಸಬೇಕು. ಪ್ರತಿಭೆಗಳು ಕ್ಲಬ್ ಕ್ರಿಕೆಟ್‌ನಿಂದಲೇ ಬರುತ್ತವೆ. ಆದ್ದರಿಂದ ಪಿಸಿಬಿ ಕರಾಚಿ ಮತ್ತು ಲಾಹೋರ್‌ಗೆ ತಲಾ 100 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ಖರ್ಚು ಮಾಡಬೇಕು,” ಎಂದು ಅಕ್ರಂ ಹೇಳಿದ್ದಾರೆ.