ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ENG vs PAK: ಅರ್ಧಶತಕ ಬಾರಿಸಿ ಮಿಸ್ಬಾ ಉಲ್‌ ಹಕ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಬಾಬರ್‌ ಆಝಮ್!

ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 76 ರನ್‌ಗಳ ಅಮೋಘ ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಮ್‌, ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಅವರೊಂದಿಗೆ ವಿಶೇಷ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

‌ ಮಿಸ್ಬಾ ಉಲ್‌ ಹಕ್‌ ಒಳಗೊಂಡ ಎಲೈಟ್‌ ಲಿಸ್ಟ್‌ ಸೇರಿದ ಬಾಬರ್‌ ಆಝಮ್‌!

ಮಿಸ್ಬಾ ಉಲ್‌ ಹಕ್‌ ದಾಖಲೆ ಸರಿಗಟ್ಟಿದ ಬಾಬರ್‌ ಆಝಮ್‌. -

Profile
Ramesh Kote Sep 12, 2026 3:28 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದ (ENG vs PAK) ದ್ವಿತೀಯ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಝಮ್‌ (Babar Azam) ಕೊನೆಗೂ 10 ರನ್‌ಗಳ ಗಡಿ ದಾಟಿದರು. ಇಲಿನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಪಾಕಿಸ್ತಾನದ ನಾಯಕ 103 ಎಸೆತಗಳಲ್ಲಿ 76 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಈ ಭರ್ಜರಿ ಇನಿಂಗ್ಸ್‌ ವೇಳೆ ಆಝಮ್‌, ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000 ರನ್‌ಗಳನ್ನು ಗಳಿಸಿದ ಪಾಕಿಸ್ತಾನದ ನಾಯಕರ ಪಟ್ಟಿಗೆ ಇದೀಗ ಬಾಬರ್‌ ಆಝಮ್‌ ಸೇರ್ಪಡೆಯಾದರು. ಈ ದಾಖಲೆ ಬರೆದ ಪಾಕಿಸ್ತಾನದ ಕೇವಲ ಎರಡನೇ ನಾಯಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಈ ಹಿಂದೆ ಮಾಜಿ ನಾಯಕ ಮಿಸ್ಬಾ-ಉಲ್-ಹಕ್ ಮಾತ್ರ ಇದ್ದರು.

ರನ್‌ ನೀಡದೆ 3 ವಿಕೆಟ್‌ ಕಿತ್ತು ಕೌಂಟಿ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ ಮಾನವ್‌ ಸುತಾರ್‌!

ಮಿಸ್ಬಾ ದಾಖಲೆ ಮುರಿಯುವತ್ತ ಬಾಬರ್ ಆಝಮ್‌

ಬಾಬರ್ ಆಝಮ್‌ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7,000 ರನ್‌ಗಳನ್ನು 47.30ರ ಸರಾಸರಿಯಲ್ಲಿ ಪೂರ್ಣಗೊಳಿಸಿದ್ದಾರೆ. ಮಿಸ್ಬಾ-ಉಲ್-ಹಕ್ ತಮ್ಮ ನಾಯಕತ್ವದ ವೃತ್ತಿಜೀವನದಲ್ಲಿ ಒಟ್ಟು 7,392 ರನ್ ಗಳಿಸಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿರುವ ಬಾಬರ್, ಮಿಸ್ಬಾ ದಾಖಲೆಯನ್ನು ಹಿಂದಿಕ್ಕುವ ಹಂತದಲ್ಲಿದ್ದಾರೆ. ಮುಂದಿನ ಸರಣಿಯಲ್ಲೇ ಅವರು ಮಿಸ್ಬಾ ಅವರನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

ಬಾಬರ್ ಆಝಮ್ ಅವರ ನಾಯಕತ್ವದ ಪಯಣ

ಬಾಬರ್ ಆಝಮ್‌ 2019ರಲ್ಲಿ ಪಾಕಿಸ್ತಾನದ ಟಿ20ಐ ನಾಯಕತ್ವ ವಹಿಸಿಕೊಂಡಿದ್ದರು. 2020ರ ಮೇನಲ್ಲಿ ಅವರಿಗೆ ಏಕದಿನ ತಂಡದ ನಾಯಕತ್ವವೂ ದೊರೆಯಿತು. ಇದಾದ ಆರು ತಿಂಗಳ ಬಳಿಕ ಅವರು ಪಾಕಿಸ್ತಾನದ ಎಲ್ಲಾ ಮೂರು ಮಾದರಿಗಳ ನಾಯಕನಾದರು. ಆದರೆ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾದ ಬಳಿಕ ಬಾಬರ್ ಎಲ್ಲಾ ಮಾದರಿಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದರು.

ಅಫ್ಘಾನಿಸ್ತಾನ ಟಿ20 ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್‌ಗೆ ಗಾಯ

ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆಗಾರರು ಶಾಹೀನ್ ಅಫ್ರಿದಿ ಅವರನ್ನು ಕೇವಲ ಒಂದು ಸರಣಿಯ ಬಳಿಕ ಟಿ20ಐ ನಾಯಕತ್ವದಿಂದ ಕೆಳಗಿಳಿಸಿ, 2024ರ ಟಿ20 ವಿಶ್ವಕಪ್‌ಗೂ ಮುನ್ನ ಬಾಬರ್ ಆಝಮ್ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸಿದರು. ಆದರೆ ಬಾಬರ್ ನಾಯಕತ್ವದ ಪಾಕಿಸ್ತಾನ ತಂಡ ಅಮೆರಿಕ ವಿರುದ್ಧ ಸೋಲು ಅನುಭವಿಸಿತು. ಬಳಿಕ ಭಾರತ ವಿರುದ್ಧವೂ ಸೋತ ಪಾಕಿಸ್ತಾನ, ಟೂರ್ನಿಯ ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ವಿಫಲವಾಯಿತು. ವಿಶ್ವಕಪ್ ಬಳಿಕ ಆಝಮ್‌ ಮತ್ತೆ ನಾಯಕತ್ವದಿಂದ ಕೆಳಗಿಳಿದರು.

ಎರಡು ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಯ್ಕೆಗಾರರು ಬಾಬರ್ ಆಝಮ್‌ ಅವರನ್ನು ಮತ್ತೆ ಟೆಸ್ಟ್ ನಾಯಕನನ್ನಾಗಿ ನೇಮಿಸಿದರು. ಆದರೆ ಗಾಯದ ಕಾರಣ ಅವರು ಮೊದಲ ಪಂದ್ಯದಿಂದ ಹೊರಗುಳಿದರು. ಅವರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಸಲ್ಮಾನ್ ಆಘಾ ಅವರನ್ನು ಎರಡನೇ ಟೆಸ್ಟ್ ಬಳಿಕ ಇಂಗ್ಲೆಂಡ್‌ನಿಂದ ತವರಿಗೆ ಕಳುಹಿಸಲಾದ ಆಟಗಾರರ ಪಟ್ಟಿಗೆ ಸೇರಿಸಲಾಯಿತು.

ʻದೆಹಲಿ ಪರ ಮತ್ತೆ ಆಡಲಿದ್ದಾರೆʼ: ಕೊಹ್ಲಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದಿ ಡಿಡಿಸಿಎ ಚೀಫ್‌ ರೋಹನ್‌ ಜೇಟ್ಲಿ!

ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್

ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಅವರು ನಾಯಕನಾಗಿ ತಮ್ಮ ವೃತ್ತಿಜೀವನದಲ್ಲಿ 15,440 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 14,878 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 12,883 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರೂ, ಭಾರತ ತಂಡವನ್ನು ಮುನ್ನಡೆಸುತ್ತಿಲ್ಲ. ಅವರು ಟಿ20ಐ ಮತ್ತು ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. 2021-22ರ ಅವಧಿಯಲ್ಲಿ ಅವರನ್ನು ಏಕದಿನ ನಾಯಕತ್ವದಿಂದಲೂ ಕೆಳಗಿಳಿಸಲಾಗಿತ್ತು.