ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ʻಟ್ರಂಪ್‌ ಸಾಯಲಿ...ʼ ವಿಮಾನದೊಳಗೆ ಜೋರಾಗಿ ಕಿರುಚಾಡಿದ ಭಾರತೀಯ- ಏನಿದು ಘಟನೆ?

ವಿಮಾನದಲ್ಲಿ ಟ್ರಂಪ್ ಗೆ ಸಾವು, ಅಮೆರಿಕಕ್ಕೆ ಸಾವು, ಅಲ್ಲಾಹು ಅಕ್ಬರ್ ಎಂದು ಕೂಗಿದ ಭಾರತೀಯ ಮೂಲದ ವ್ಯಕ್ತಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಅಭಯ್ ನಾಯಕ್ ಎಂದು ಗುರುತಿಸಲಾಗಿದ್ದು, ಆತ ಲಂಡನ್ ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೋಗುವ ವಿಮಾನದಲ್ಲಿ ಈ ರೀತಿಯ ಘೋಷಣೆಗಳನ್ನು ಕೂಗಿದ್ದ ಎನ್ನಲಾಗಿದೆ.

ʻಟ್ರಂಪ್‌ ಸಾಯಲಿ...ʼ ವಿಮಾನದೊಳಗೆ ಜೋರಾಗಿ ಕಿರುಚಾಡಿದ ಭಾರತೀಯ

ಲಂಡನ್: ಲುಟನ್ ವಿಮಾನ ನಿಲ್ದಾಣದಿಂದ ಗ್ಲ್ಯಾಸ್ಗೋಗೆ ಹೋಗುವ ವಿಮಾನದಲ್ಲಿ ಟ್ರಂಪ್ ಗೆ ಸಾವು (Death To Trump), ಅಮೆರಿಕಕ್ಕೆ ಸಾವು (Death to America), ಅಲ್ಲಾಹು ಅಕ್ಬರ್ (Allahu Akbar) ಎಂದು ಕೂಗಿದ ಭಾರತೀಯ ಮೂಲದ ವ್ಯಕ್ತಿಯನ್ನು (Indian origin man) ಗ್ಲ್ಯಾಸ್ಗೋದಲ್ಲಿ (Glasgow Luton airport) ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಅಭಯ್ ನಾಯಕ್ ಎಂದು ಗುರುತಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಯುಕೆ ವಾಯು ಸಂಚಾರ (UK Air Navigation) ಆದೇಶದ ಹಿನ್ನೆಲೆಯಲ್ಲಿ 41 ವರ್ಷದ ಅಭಯ್ ನಾಯಕ್‌ನನ್ನು ಸ್ಕಾಟಿಷ್ ಪೊಲೀಸ್ ಅಧಿಕಾರಿಗಳು ಅರೆಸ್ಟ್‌ ಮಾಡಿದ್ದಾರೆ.

ಲಂಡನ್ ನ ಲುಟನ್ ವಿಮಾನ ನಿಲ್ದಾಣದಿಂದ ಕಳೆದ ಭಾನುವಾರ ಗ್ಲ್ಯಾಸ್ಗೋಗೆ ತೆರಳುತ್ತಿದ್ದ ವಿಮಾನದಲ್ಲಿ ಬೆಡ್‌ಫೋರ್ಡ್‌ಶೈರ್‌ನಲ್ಲಿರುವ ಲುಟನ್ ನಿವಾಸಿ ಭಾರತೀಯ ಮೂಲದ ಅಭಯ್ ನಾಯಕ್ ಬೆದರಿಕೆ ಘೋಷಣೆಗಳನ್ನು ಕೂಗಿ ಪ್ರಯಾಣಿಕರು, ವಿಮಾನ ಸಿಬ್ಬಂದಿಗಳಲ್ಲಿ ಆತಂಕ ಉಂಟು ಮಾಡಿದ್ದ. ಆತ ವಿಮಾನದಲ್ಲಿ ಗಲಾಟೆ ಉಂಟು ಮಾಡಿದ್ದರಿಂದ ವಿಮಾನದ ಸುರಕ್ಷತೆಗೆ ಅಪಾಯ ತಂದೊಡ್ಡಿದ ಆರೋಪದಲ್ಲಿ ಬಂಧಿಸಲಾಗಿದೆ.

ಮೊದಲು ಆತ ವಿಮಾನಕ್ಕೆ "ಬಾಂಬ್" ಹಾಕುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಅಮೆರಿಕಕ್ಕೆ ಸಾವು, ಟ್ರಂಪ್‌ಗೆ ಸಾವು, ಅಲ್ಲಾಹು ಅಕ್ಬರ್, ದೇವರು ಶ್ರೇಷ್ಠ ಸೇರಿದಂತೆ ಹಲವು ಅರೇಬಿಕ್ ಘೋಷಣೆಗಳನ್ನು ಕೂಗಿದ್ದಾನೆ. ಇದು ಪ್ರಯಾಣಿಕರಲ್ಲಿ ಮತ್ತು ವಿಮಾನ ಸಿಬ್ಬಂದಿಗಳಲ್ಲಿ ಆತಂಕ ಉಂಟು ಮಾಡಿತ್ತು. ಆಗ ಇಬ್ಬರು ಪ್ರಯಾಣಿಕರು ಆತನನ್ನು ಹಿಡಿದರು.



ಇದರಿಂದ ಪೈಲಟ್‌ಗಳು ವಿಮಾನವನ್ನು ಗ್ಲ್ಯಾಸ್ಗೋದಲ್ಲಿ ತುರ್ತು ಲ್ಯಾಂಡ್ ಮಾಡಿದ್ದು, ಅಲ್ಲಿ ಸ್ಕಾಟಿಷ್ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Killer BMTC: ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಹಿರಿಯ ಜೀವ ಬಲಿ

ಜುಲೈ 27 ರ ಭಾನುವಾರ ಬೆಳಗ್ಗೆ 8.20 ರ ಸುಮಾರಿಗೆ ಗ್ಲ್ಯಾಸ್ಗೋಗೆ ಆಗಮಿಸುತ್ತಿದ್ದ ವಿಮಾನದಲ್ಲಿಈ ಘಟನೆ ನಡೆದಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಇದರ ಕುರಿತು ಭಯೋತ್ಪಾದನಾ ನಿಗ್ರಹ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಕಾಟ್ಲೆಂಡ್ ಪೊಲೀಸ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಭಯ್ ನಾಯಕ್ ನನ್ನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಮುಂದಿನ ವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.