ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 15 ಅಡಿ ಎತ್ತರದಿಂದ ದೊಪ್ಪೆಂದು ಬಿದ್ದ ಯುವಕ; ಎದೆ ಝಲ್ಲೆನಿಸುವ ವಿಡಿಯೊ ಇಲ್ಲಿದೆ

Maut Ka Kuan stunt: ಶ್ರಾವಣ ಮಾಸದ ಜಾತ್ರೆಯ ಅಂಗವಾಗಿ ನಡೆದ 'ಮರಣ ಬಾವಿ' (ಮೌತ್ ಕಾ ಕುವಾನ್) ಒಳಗೆ ಸಾಹಸ ಪ್ರದರ್ಶನ ನೀಡುತ್ತಿದ್ದ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಪಂಚಮುಖಿ ಶಿವ ದೇವಾಲಯ ಆವರಣದಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ.

15 ಅಡಿ ಎತ್ತರದಿಂದ ದೊಪ್ಪೆಂದು ಬಿದ್ದ ಯುವಕ- ಶಾಕಿಂಗ್‌ ವಿಡಿಯೊ ಇಲ್ಲಿದೆ

Priyanka P Priyanka P Jul 31, 2025 4:55 PM

ಮಹಾರಾಜಗಂಜ್: ಶ್ರಾವಣ ಮಾಸದ ಜಾತ್ರೆಯ ಅಂಗವಾಗಿ ನಡೆದ 'ಮರಣ ಬಾವಿ' (ಮೌತ್ ಕಾ ಕುವಾನ್) ಒಳಗೆ ಸಾಹಸ ಪ್ರದರ್ಶನ ನೀಡುತ್ತಿದ್ದ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಯುವಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡರೂ ಬೈಕ್ ಮಾತ್ರ ಓಡುತ್ತಲೇ ಇತ್ತು. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಪಂಚಮುಖಿ ಶಿವ ದೇವಾಲಯ ಆವರಣದಲ್ಲಿ ಸೋಮವಾರ ಸಂಜೆ ಈ ದುರ್ಘಟನೆ ನಡೆದಿದೆ. ಘಟನೆಯ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಶ್ರಾವಣ ಮಾಸದ ಜಾತ್ರೆಯ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮರಣ ಬಾವಿ (ಮೌತ್ ಕಾ ಕುವಾನ್) ಒಳಗೆ ಸಾಹಸ ಪ್ರದರ್ಶನ ನೀಡುತ್ತಿದ್ದ ಯುವಕ ತನ್ನ ಸಮತೋಲನ ಕಳೆದುಕೊಂಡು ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಅಚ್ಚರಿ ಎಂದರೆ, ಯುವಕ ಕೆಳಗೆ ಬಿದ್ದರೂ ಮೋಟಾರ್ ಸೈಕಲ್ ಮಾತ್ರ ಸುಮಾರು ಒಂದು ಗಂಟೆಗಳ ಕಾಲ ಚಾಲಕನಿಲ್ಲದೆ ಬಾವಿಯ ಲಂಬ ಗೋಡೆಗಳ ಮೇಲೆ ಅತಿ ವೇಗದಲ್ಲಿ ಸುತ್ತುತ್ತಲೇ ಇತ್ತು.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಬಾವಿಯ ಗೋಡೆಗಳ ಉದ್ದಕ್ಕೂ ಬೈಕ್ ಓಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಅಲ್ಲಿದ್ದ ಜನರು ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ. ವಿಡಿಯೊದಲ್ಲಿ ಎರಡು ಕಾರುಗಳು, ಒಂದು ಬೈಕ್ ಮತ್ತು ಬಾವಿಯೊಳಗೆ ಕೆಲವು ಜನರು ಇರುವುದನ್ನು ಸಹ ನೋಡಬಹುದು. ಅಪಘಾತದ ನಂತರ ಸ್ಟಂಟ್‌ ಮಾಡುತ್ತಿದ್ದ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ವಿಡಿಯೊ ವೀಕ್ಷಿಸಿ



ಮೌತ್ ಕಾ ಕುವಾನ್ ಎಂದರೇನು?

‘ಸಾವಿನ ಬಾವಿ’ ಅಥವಾ ‘ಸಾವಿನ ಗೋಡೆ’ ಎಂದೂ ಕರೆಯಲ್ಪಡುವ ‘ಮೌತ್ ಕಾ ಕುವಾನ್’, ಜಾತ್ರೆಗಳಲ್ಲಿ ಜನಪ್ರಿಯ ಮತ್ತು ರೋಮಾಂಚಕ ಆಕರ್ಷಣೆಯಾಗಿದೆ. ಈ ಧೈರ್ಯಶಾಲಿ ಸಾಹಸ ಪ್ರದರ್ಶನದಲ್ಲಿ, ಮೋಟಾರ್‌ಸೈಕ್ಲಿಸ್ಟ್‌ಗಳು ಮತ್ತು ಕೆಲವೊಮ್ಮೆ ಕಾರು ಚಾಲಕರು, ಬಾವಿಯಂತಿರುವ ದೊಡ್ಡ ಸಿಲಿಂಡರಾಕಾರದ ರಚನೆಯ ಲಂಬ ಗೋಡೆಗಳ ಉದ್ದಕ್ಕೂ ಹೆಚ್ಚಿನ ವೇಗದಲ್ಲಿ ಸವಾರಿ ಮಾಡುತ್ತಾರೆ.