ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಕದಿನ ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವೆಸ್ಟ್‌ ಇಂಡೀಸ್‌ ಮತ್ತೊಮ್ಮೆ ವಿಫಲ!

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ವೆಸ್ಟ್‌ ಇಂಡೀಸ್‌ ತಂಡ ಮತ್ತೊಮ್ಮೆ ವಿಫಲವಾಗಿದೆ. ಐರ್ಲೆಂಡ್‌ ವಿರುದ್ಧ ಅಫ್ಘಾನಿಸ್ತಾನ ತಂಡ ಎರಡನೇ ಏಕದಿನ ಪಂದ್ಯವನ್ನು ಗೆದ್ದ ಬಳಿಕ ಈ ವಿಂಡೀಸ್‌ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಅರ್ಹತಾ ಸುತ್ತಿನ ಮೂಲಕ ವಿಂಡೀಸ್‌ ಏಕದಿನ ವಿಶ್ಕಪ್‌ ಟೂರ್ನಿಗೆ ಮರಳಬೇಕಾಗಿದೆ.

ಏಕದಿನ ವಿಶ್ವಕಪ್ ನೇರ ಅರ್ಹತೆಯಿಂದ ಹೊರಬಿದ್ದ ವೆಸ್ಟ್‌ ಇಂಡೀಸ್‌.

ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ (ICC ODI World Cup 2026) ಟೂರ್ನಿಗೆ ನೇರ ಅರ್ಹತೆ ಪಡೆಯುವ ವೆಸ್ಟ್‌ ಇಂಡೀಸ್‌ (West Indies) ತಂಡದ ಕನಸು ನುಚ್ಚು ನೂರಾಗಿದೆ. ಇದೀಗ ಎರಡು ಬಾರಿ ವಿಶ್ವ ಚಾಂಪಿಯನ್ಸ್‌ ತಂಡ, ಅರ್ಹತಾ ಸುತ್ತಿನ ಮೂಲಕ 50 ಓವರ್‌ಗಳ ಟೂರ್ನಿಗೆ ಅರ್ಹತೆ ಪಡೆಯಬೇಕಾಗಿದೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿಂಡೀಸ್‌ ತಂಡದ ವೈಫಲ್ಯ ಮುಂದುವರಿದಿದೆ.

ಐರ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಗೆಲುವು ಪಡೆದ ಬಳಿಕ ವೆಸ್ಟ್‌ ಇಂಡೀಸ್‌ ತಂಡದ ಒಡಿಐ ವಿಶ್ವಕಪ್‌ ನೇರ ಅರ್ಹತೆ ಪೆಟ್ಟು ಬಿದ್ದಿದೆ. ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲಿ ವಿಂಡೀಸ್‌ ತಂಡ ಈಗಾಗಲೇ ಅಗ್ರ 8 ರಿಂದ ಹೊರಗುಳಿದಿದೆ, ಇದೀಗ ಅಫ್ಘಾನಿಸ್ತಾನ ತಂಡದ ಜಯದಿಂದ ವಿಂಡೀಸ್‌ನ ನೇರ ಅರ್ಹತೆ ಅಡ್ಡಿಯಾಗಿದೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ನಿಯಮಿತವಾಗಿ ಅರ್ಹತೆ ಪಡೆದಿವೆ. ಇನ್ನುಳಿದ ಎಂಟು ಸ್ಥಾನಗಳಿಗೆ ಐಸಿಸಿ ಒಡಿಐ ಶ್ರೇಯಾಂಕದಲ್ಲಿ ನಿರ್ಧಾರವಾಗಲಿದೆ. ಇದೀಗ ವೆಸ್ಟ್‌ ಇಂಡೀಸ್‌ ತಂಡ 10ನೇ ಸ್ಥಾನಕ್ಕೆ ಕುಸಿದಿದೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ವಿಂಡೀಸ್‌ ಒಡಿಐ ಸರಣಿಯನ್ನು ಸೋತಿತ್ತು. ಬಾಂಗ್ಲಾದೇಶ ತಂಡ 9ನೇ ಸಾನದಲ್ಲಿದ್ದರೆ, ಅಫ್ಘಾನಿಸ್ತಾನ ತಂಡ 7ನೇ ಸ್ಥಾನದಲ್ಲಿದೆ.

IPL 2027: ಜಾಶ್‌ ಹೇಝಲ್‌ವಡ್‌ ಔಟ್‌, 20ನೇ ಆವೃತ್ತಿಯ ಟೂರ್ನಿಗೆ ಆಸೀಸ್‌ ಆಟಗಾರರು ಅಲಭ್ಯ?

ವೆಸ್ಟ್‌ ಇಂಡೀಸ್‌ ತಂಡಕ್ಕೆ ಈ ಪರಿಸ್ಥಿತಿ ಹೊಸದೇನಲ್ಲ. 2019ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿದ್ದ ವೆಸ್ಟ್‌ ಇಂಡೀಸ್‌, ಟೂರ್ನಿಯಲ್ಲಿ ಸ್ಥಾನ ಪಡೆಯಲು ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಾಗಿತ್ತು. ಇದೀಗ ಮತ್ತೊಮ್ಮೆ ಇದೇ ರೀತಿಯ ಅರ್ಹತಾ ಸವಾಲು ವೆಸ್ಟ್‌ ಇಂಡೀಸ್‌ ತಂಡದ ಮುಂದಿದೆ.

ಆದರೆ, ನಾಲ್ಕು ವರ್ಷಗಳ ಬಳಿಕ ವೆಸ್ಟ್‌ ಇಂಡೀಸ್‌ ತಂಡಕ್ಕೆ ಇನ್ನೂ ದೊಡ್ಡ ಹಿನ್ನಡೆ ಎದುರಾಯಿತು. 2023ರ ಏಕದಿನ ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ಅರ್ಹತೆ ಪಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಜಿಂಬಾಬ್ವೆಯಲ್ಲಿ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಸೋಲು ಅನುಭವಿಸಿದ ಬಳಿಕ ತಂಡದ ವಿಶ್ವಕಪ್‌ ಕನಸು ಭಗ್ನಗೊಂಡಿತ್ತು.

ಸೂಪರ್‌ ಸಿಕ್ಸ್‌ ಹಂತದಲ್ಲಿ ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್‌ ವಿರುದ್ಧ ಸೋಲು ಅನುಭವಿಸಿದ್ದರಿಂದ ವೆಸ್ಟ್‌ ಇಂಡೀಸ್‌ ತಂಡದ ಅಭಿಯಾನ ಅಂತ್ಯಗೊಂಡಿತು. ಬಳಿಕ ಸ್ಕಾಟ್ಲೆಂಡ್‌ ವಿರುದ್ಧದ ಸೋಲು ಕೆರಿಬಿಯನ್‌ ತಂಡವನ್ನು ವಿಶ್ವಕಪ್‌ನಿಂದ ಹೊರಗಿಟ್ಟಿರುವುದನ್ನು ಅಧಿಕೃತವಾಗಿ ಖಚಿತಪಡಿಸಿತು. ಇದರೊಂದಿಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಇತಿಹಾಸದಲ್ಲೇ ಮೊದಲ ಬಾರಿ ಏಕದಿನ ವಿಶ್ವಕಪ್‌ ಟೂರ್ನಿಯಿಂದ ಹೊರಗುಳಿಯುವ ಕಹಿ ಅನುಭವ ಎದುರಿಸಿತ್ತು.

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಅಫ್ಘಾನಿಸ್ತಾನ ಮತ್ತು ಐರ್ಲೆಂಡ್‌ ನಡುವಿನ ಸರಣಿಯ ಫಲಿತಾಂಶ ವೆಸ್ಟ್‌ ಇಂಡೀಸ್‌ನ ನೇರ ವಿಶ್ವಕಪ್‌ ಅರ್ಹತಾ ಅವಕಾಶಗಳಿಗೆ ನಿರ್ಣಾಯಕವಾಗಿತ್ತು. ನೇರ ಅರ್ಹತೆಯ ರೇಸ್‌ನಲ್ಲಿ ಉಳಿಯಬೇಕಾದರೆ ಐರ್ಲೆಂಡ್‌ 5-0 ಅಂತರದಲ್ಲಿ ಏಕದಿನ ಸರಣಿಯನ್ನು ಗೆಲ್ಲಬೇಕಾದ ಅಗತ್ಯವಿತ್ತು. ಆದರೆ, ಬ್ರೆಡಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದ ಪರಿಣಾಮ, ಅಗತ್ಯವಾದ ಮುನ್ನಡೆ ಸಾಧಿಸುವ ಐರ್ಲೆಂಡ್‌ನ ಅವಕಾಶ ಅಂತ್ಯಗೊಂಡಿತು.

ಬಳಿಕ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 92 ರನ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 299 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಐರ್ಲೆಂಡ್‌ ತಂಡ 207 ರನ್‌ಗಳಿಗೆ ಆಲೌಟ್‌ ಆಯಿತು. ಅಫ್ಘಾನಿಸ್ತಾನದ ಗೆಲುವಿನಲ್ಲಿ ರಶೀದ್‌ ಖಾನ್‌ 34 ರನ್‌ ನೀಡಿ 6 ವಿಕೆಟ್‌ ಕಬಳಿಸಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದರು. ಈ ಫಲಿತಾಂಶವು ಅಫ್ಘಾನಿಸ್ತಾನದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವೆಸ್ಟ್‌ ಇಂಡೀಸ್‌ ನೇರ ಅರ್ಹತೆ ಪಡೆಯುವ ಸಾಧ್ಯತೆಯನ್ನು ಬಹುತೇಕ ಅಂತ್ಯಗೊಳಿಸಿತು.