ಗುವಾಹಟಿ: ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ (IND vs WI) ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ವಿಂಡೀಸ್ ತಂಡದ ಆರಂಭಿಕ ಜಾನ್ ಕ್ಯಾಂಬೆಲ್ (John Campbell) ಅವರು 65 ಎಸೆತಗಳಲ್ಲಿ ಭರ್ಜರಿ ಶತಕವನ್ನು ಬಾರಿಸಿದರು ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಐದನೇ ವೇಗದ ಶತಕ ಹಾಗೂ ಭಾರತದ ಎದುರು ವಿಂಡೀಸ್ ಪರ ಮೂಡಿಬಂದ ಅತ್ಯಂತ ವೇಗದ ಶತಕವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ವೆಸ್ಟ್ ಇಂಡೀಸ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಜಾನ್ ಕ್ಯಾಂಬೆಲ್‌ಗೆ ಕೀಸಿ ಕಾರ್ಟಿ ಬೇಗ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಆದರೂ ತಲೆ ಕೆಡಿಸಿಕೊಳ್ಳದ ಜಾನ್ ಕ್ಯಾಂಬೆಲ್, ಭಾರತ ತಂಡದ ವೇಗದ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಪವರ್‌ಪ್ಲೇನಲ್ಲಿ ಪ್ರಸಿಧ್ ಕೃಷ್ಣ ಹಾಗೂ ಡಬ್ಯೂಟಂಟ್ ಆಕಿಬ್ ನಬಿ ಎಸೆತಗಳಲ್ಲಿ ಕ್ಯಾಬೆಲ್, ಅಂಗಣದ ಎಲ್ಲಾ ಕಡೆ ಚೆಂಡನ್ನು ಕಳುಹಿಸಿದರು. ಅವರು ಕೇವಲ 29 ಎಸೆತಗಳಲ್ಲಿಯೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಭಾರತದ ಎದುರು ವಿಂಡೀಸ್ ಪರ ಮೂಡಿಬಂದ ವೇಗದ ಅರ್ಧಶತಕ ಇದಾಗಿದೆ.
IND vs WI: ಎರಡನೇ ಒಡಿಐನಲ್ಲಿ ಮೊಹಮ್ಮದ್ ಸಿರಾಜ್ ಆಡದೇ ಇರಲು ಕಾರಣವೇನು? ಇಲ್ಲಿದೆ 2 ಕಾರಣ!
ರಿಕಾರ್ಡೊ ಪೊವೆಲ್ ದಾಖಲೆ ಮುರಿದ ಕ್ಯಾಂಬೆಲ್
ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಅವರಿಗೆ ತಲಾ ಸಿಕ್ಸರ್‌ಗಳನ್ನು ಬಾರಿಸಿದ ಇವರು, ಪಂದ್ಯದ 18ನೇ ಓವರ್‌ನಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತದ ಎದುರು ಅತ್ಯಂತ ವೇಗದ ಒಡಿಐ ಶತಕ ಬಾರಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆ ಮೂಲಕ ರಿಕಾರ್ಡೊ ಪೊವೆಲ್ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಜಾನ್ ಕ್ಯಾಂಬೆಲ್ ಯಾರು?
ಜಾನ್ ಕ್ಯಾಂಬೆಲ್ ಅವರು ಜಮೈಕಾ ಮೂಲದವರು. ಅವರನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಿದ್ದು, ಅವರ ತಾತ. ತಮ್ಮ ತಾತನ ಗರಡಿಯಲ್ಲಿಯೇ ಆರಂಭದಲ್ಲಿ ಕ್ಯಾಂಬೆಲ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು ಹಾಗೂ ತಮ್ಮ ಕ್ರಿಕೆಟಿಂಗ್ ಕೌಶಲದಲ್ಲಿ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದರು. ಇಲ್ಲಿಯವರೆಗೆ ಜಾನ್ ಕ್ಯಾಂಚೆಲ್‌ಗೆ ಅವರ ತಾತ ದೊಡ್ಡ ಅಭಿಮಾನಿಯಾಗಿದ್ದಾರೆ.
ಭಾರತ ತಂಡಕ್ಕೆ ಮುಂದಿನ ಚೀಫ್ ಸೆಲೆಕ್ಟರ್ ಸ್ಥಾನಕ್ಕೆ ಪ್ರಜ್ಞಾನ್ ಓಜಾರನ್ನು ಪರಿಗಣಿಸಲು ಕಾರಣವೇನು?
ವೆಸ್ಟ್ ಇಂಡೀಸ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ದೇಶಿ ಕ್ರಿಕೆಟ್‌ನಲ್ಲಿ ಎಡಗೈ ಬ್ಯಾಟ್ಸ್‌ಮನ್ ತಮ್ಮ ಬ್ಯಾಟಿಂಗ್ ಕೌಶಲದಲ್ಲಿ ಮಿಂಚಿದ್ದರು. 2019ರಲ್ಲಿ ಇಂಗ್ಲೆಂಡ್ ಎದುರು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. "ಜಾನ್ ಕ್ಯಾಂಬೆಲ್ ಮುಂದಿನ ಕ್ರಿಸ್ ಗೇಲ್" ಎಂದು ಸ್ವತಃ ಕ್ರಿಸ್ ಗೇಲ್ ಅವರೇ ದೊಡ್ಡ ಭವಿಷ್ಯವನ್ನು ನುಡಿದಿದ್ದರು.
22 ತಿಂಗಳು ಬ್ಯಾನ್ ಆಗಿದ್ದ ಕ್ಯಾಂಬೆಲ್
2022ರ ಏಪ್ರಿಲ್‌ನಲ್ಲಿ ಜಮೈಕಾದ ಆಂಟಿ ಡೋಪಿಂಗ್ ಆಯೋಗ (JADCO) ಜೊತೆಗಿನ ಘಟನೆಯಿಂದ ಜಾನ್ ಕ್ಯಾಂಬೆಲ್ ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ತಮ್ಮ ನಿವಾಸದಲ್ಲಿ ನಿಗದಿತ ರಕ್ತದ ಮಾದರಿ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಡೋಪಿಂಗ್ ನಿಯಮ ಉಲ್ಲಂಘನೆಯ ಆರೋಪ ಹೊರಿಸಲಾಗಿತು. ಆರಂಭದಲ್ಲಿ ಅವರಿಗೆ ನಾಲ್ಕು ವರ್ಷಗಳ ನಿಷೇಧವನ್ನೂ ವಿಧಿಸಲಾಗಿತ್ತು.