ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ ತಂಡಕ್ಕೆ ಮುಂದಿನ ಚೀಫ್‌ ಸೆಲೆಕ್ಟರ್‌ ಸ್ಥಾನಕ್ಕೆ ಪ್ರಜ್ಞಾನ್‌ ಓಜಾರನ್ನು ಪರಿಗಣಿಸಲು ಕಾರಣವೇನು?

ಅಜಿತ್‌ ಅಗರ್ಕರ್‌ ಅವರು ಭಾರತ ಪುರುಷರ ಹಿರಿಯ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆದಾರ ಹುದ್ದೆಯಿಂದ ಕಳೆಗೆ ಇಳಿದ ಬಳಿಕ ಈ ಸ್ಥಾನಕ್ಕೆ ಬಿಸಿಸಿಐ ಸೂಕ್ತ ಅಭ್ಯರ್ಥಿಯನ್ನು ಹುಡುಕುತ್ತಿದೆ. ಇದರ ನಡುವೆ ಭಾರತ ಟೆಸ್ಟ್‌ ತಂಡದ ಮಾಜಿ ಸ್ಪಿನ್ನರ್‌ ಪ್ರಜ್ಞಾನ್‌ ಓಜಾ ಅವರನ್ನು ಬಿಸಿಸಿಐಗೆ ಚೀಫ್‌ ಸೆಲೆಕ್ಟರ್‌ ಆಗಿ ಆಯ್ಕೆಯಾಗಲಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಇನ್ನೂ ಬಿಸಿಸಿಐ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಚೀಫ್‌ ಸೆಲೆಕ್ಟರ್‌ ಹುದ್ದೆಗೆ ಪ್ರಜ್ಞಾನ್‌ ಓಜಾರನ್ನು ಪರಿಗಣಿಸಲು ಕಾರಣವೇನು?

ಮುಂದಿನ ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಪ್ರಗ್ಞಾನ್‌ ಓಜಾ. -

Profile
Ramesh Kote Sep 30, 2026 3:37 PM

ನವದೆಹಲಿ: ಅಜಿತ್‌ ಅಗರ್ಕರ್‌ ಅವರ ನಿರ್ಗಮನದಿಂದ ತೆರವಾಗಿದ್ದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI) ಮುಖ್ಯ ಆಯ್ಕೆದಾರ ಹುದ್ದೆಗೆ ಟೆಸ್ಟ್‌ ತಂಡದ ಮಾಜಿ ಸ್ಪಿನ್ನರ್‌ ಪ್ರಜ್ಞಾನ್‌ ಓಜಾ (Pragyan Ojha) ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 39ರ ವಯಸ್ಸಿನ ಓಜಾ ಅವರು ಪ್ರಸ್ತುತ, ಭಾರತ ತಂಡದ 4 ಸದಸ್ಯರ ಆಯ್ಕೆ ಸಮಿತಿಯಲ್ಲಿ ಹಂಗಾಮಿ ಚೀಫ್‌ ಸೆಲೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರನ್ನೇ ಪೂರ್ಣ ಪ್ರಮಾಣದ ಚೀಫ್‌ ಸೆಲೆಕ್ಟರ್‌ ಆಗಿ ಮುಂದುವರಿಸಲು ಬಿಸಿಸಿಐ ಬಯಸುತ್ತಿದೆ ಎಂದು ಹೇಳಲಾಗುತ್ತಿದೆ.

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಏಕದಿನ ಪಂದ್ಯಕ್ಕೂ ಒಂದು ದಿನದ ಮುನ್ನ ಪ್ರಗ್ಞಾನ್‌ ಓಜಾ ಸೇರಿ ನಾಲ್ವರು ಸೆಲೆಕ್ಟರ್‌ಗಳು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಜೊತೆ ಚರ್ಚೆ ನಡೆಸುತ್ತಿದ್ದರು. ಶಿವ ಸುಂದರ್‌ ದಾಸ್‌, ಅಜಯ್‌ ರಾತ್ರಾ ಹಾಗೂ ಆರ್‌ಪಿ ಸಿಂ ಅವರು ಕೂಡ ಉಪಸ್ಥಿತರಿದ್ದರು. ಆದರೆ, ನಿರ್ಗಮಿತ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ಕಾಣಿಸಿಕೊಂಡಿರಲಿಲ್ಲ.

IND vs WI: ಎರಡನೇ ಒಡಿಐನಲ್ಲಿ ಮೊಹಮ್ಮದ್‌ ಸಿರಾಜ್‌ ಆಡದೇ ಇರಲು ಕಾರಣವೇನು? ಇಲ್ಲಿದೆ 2 ಕಾರಣ!

ಮಂಗಳವಾರ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ ಪ್ರಾಕ್ಟೀಸ್‌ ನಡೆಸುತ್ತಿದ್ದ ವೇಳೆ, ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹಾಗೂ ಬಿಸಿಸಿಐ ಸೆಲೆಕ್ಟರ್‌ಗಳ ನಡುವೆ ಮೀಟಿಂಗ್‌ ನಡೆದಿತ್ತು. ಅಂದ ಹಾಗೆ ಶುಭಮನ್‌ ಗಿಲ್‌ ಸಾರಥ್ಯದ ಭಾರತ ತಂಡ, ತಿರುವನಂತಪುರನಿಂದ ಗುವಾಹಟಿಗೆ ಪ್ರಯಾಣ ಬೆಳೆಸಿದ್ದರಿಂದ ಬರ್ಸಪರ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿರಲಿಲ್ಲ.

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳ ದ್ವಿಪಕ್ಷೀಯ ಸರಣಿಯ ಸಂದರ್ಭದಲ್ಲಿ ಆಯ್ಕೆ ಸಮಿತಿಯ ಎಲ್ಲ ಸದಸ್ಯರು ಒಟ್ಟಾಗಿ ಹಾಜರಾಗುವುದು ಸಾಮಾನ್ಯ ಸಂಗತಿಯಲ್ಲ. ಈ ಸಂದರ್ಭದಲ್ಲಿ ಭಾರತದ ಮುಂಬರುವ ನ್ಯೂಜಿಲೆಂಡ್ ಪ್ರವಾಸ ಹಾಗೂ ಆ ಸರಣಿಗೆ ಅಂತಿಮಗೊಳಿಸಬೇಕಾದ ತಂಡಗಳ ಆಯ್ಕೆ ಕುರಿತು ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಅಜಿತ್‌ ಅಗರ್ಕರ್‌ ಚೀಫ್‌ ಸೆಲೆಕ್ಟರ್‌ ಹುದ್ದೆಯನ್ನು ತೊರೆಯಲು ರೋಹಿತ್‌ ಶರ್ಮಾ, ವಿವಿಎಸ್‌ ಲಕ್ಷ್ಮಣ್‌ ಕಾರಣ?

ಪ್ರಜ್ಞಾನ್‌ ಓಜಾ ಯಾರು?

ಪ್ರಜ್ಞಾನ್‌ ಓಜಾ ಅವರು ಮೂಲತಃ ಒಡಿಶಾದ ಭುವನೇಶ್ವರ್‌ ಮೂಲದವರಾಗಿದ್ದು, ಅವರು ಈಗಿನ ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ಸ್ಥಳಾಂತರಗೊಂಡು ತಮ್ಮ ಕ್ರಿಕೆಟ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅವರು ಭಾರತ ಟೆಸ್ಟ್‌ ತಂಡದ ಪರ 24 ಪಂದ್ಯಗಳನ್ನು ಆಡಿದ್ದಾರೆ. ಅಜಿತ್‌ ಅಗರ್ಕರ್‌ ನಿರ್ಗಮನದ ಬಳಿಕ ಇದೀಗ ಅವರ ಪೂರ್ಣ ಪ್ರಮಾಣದ ಚೀಫ್‌ ಸೆಲೆಕ್ಟರ್‌ ಸ್ಥಾನವನ್ನು ತುಂಬಲು ಎದುರು ನೋಡುತ್ತಿದ್ದಾರೆ.

ಅಕ್ಟೋಬರ್‌ 22 ರಿಂದ ನವೆಂಬರ್‌ 27 ರವರೆಗೆ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಈ ಪೂರ್ಣ ಪ್ರಮಾಣದ ಪ್ರವಾಸದಲ್ಲಿ ಭಾರತ ತಂಡ, 5 ಪಂದ್ಯಗಳ ಟಿ20ಐ ಸರಣಿ, 5 ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಅಕ್ಟೋಬರ್‌ 24 ರಂದು ಆರಂಭವಾಗುವ ನ್ಯೂಜಿಲೆಂಡ್‌ ಪ್ರವಾಸದ ಮೂರು ಅನಧಿಕೃತ ಟೆಸ್ಟ್‌ ಪಂದ್ಯಗಳಿಗೆ ಬಿಸಿಸಿಐ ಸೆಲೆಕ್ಟರ್‌ಗಳು ಭಾರತ ಎ ತಂಡವನ್ನು ಆಯ್ಕೆ ಮಾಡಬೇಕಾಗಿದೆ.

ಅಜಿತ್‌ ಅಗರ್ಕರ್‌ಗೆ ಕೌಂಟರ್‌ ಕೊಟ್ರಾ ರೋಹಿತ್‌ ಶರ್ಮಾ? ಟೀ-ಶರ್ಟ್‌ ಮೇಲಿನ ಬರಹದ ರಹಸ್ಯವೇನು?

ಅಕ್ಟೋಬರ್‌ 22 ರಂದು ಟಿ20ಐ ಸರಣಿಯ ಆರಂಭದ ಮೂಲಕ ಭಾರತ ತಂಡದ ನ್ಯೂಜಿಲೆಂಡ್‌ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ಮೊದಲನೇ ಟಿ20ಐ ಪಂದ್ಯ ಕ್ರೈಸ್ಟ್‌ ಚರ್ಚ್‌ನಲ್ಲಿ ಅ 22 ರಂದು ನಡೆಯಲಿದೆ. ಟಿ20ಐ ಸರಣಿ ಮುಗಿದ ಬಳಿಕ ನವೆಂಬರ್‌ 4ರಂದು ಐದು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಇದಾದ ಬಳಿಕ ನವೆಂಬರ್‌ 19 ರಂದು ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ.