ಬೆಂಗಳೂರು: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2206) ಆರಂಭವಾದ ಬಳಿಕ ಸಾಕಷ್ಟು ಬಡ ಪ್ರತಿಭೆಗಳು ಬೆಳಕೆಗೆ ಬಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್‌ಪ್ರೀತ್ ಬುಮ್ರಾ ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಅವರು ಕೂಡ ಐಪಿಎಲ್ ಟೂರ್ನಿಯ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಾಗಿದ್ದಾರೆ. ಇದೀಗ ಇವರ ಸಾಲಿಗೆ ಸೇರ್ಪಡೆಯಾಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಯುವ ವೇಗದ ಬೌಲರ್ ಮಂಗೇಶ್ ಯಾದವ್ ಎದುರು ನೋಡುತ್ತಿದ್ದಾರೆ. ಅಂದ ಹಾಗೆ ಮಂಗೇಶ್ ಯಾದವ್ ಅವರು ಬಡ ಕುಟುಂಬದ ಹಿನ್ನಲೆಯಿಂದ ಬಂದಿರುವ ಆಟಗಾರ. ಇವರ ಐಪಿಎಲ್ ಪಯಣದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 5.20 ಕೋಟಿ ರು ಗಳಿಗೆ ಮಂಗೇಶ್ ಯಾದವ್ ಅವರನ್ನು ಖರೀದಿಸಿತ್ತು. ಮಧ್ಯ ಪ್ರದೇಶದ ಹಳ್ಳಿಯವರಾದ ಮಂಗೇಶ ಯಾದವ್ ಅವರ ತಂದೆ ಹೆಸರು ರಾಮ್ ಆವಾದ್ ಯಾದವ್ ಹಾಗೂ ಇವರು ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ರಾಮ್ ಆವಾದ್ ಯಾದವ್ ಅವರು, ತಮ್ಮ ಪುತ್ರನ ಕ್ರಿಕೆಟ್ ಕನಸಿಗೆ ನೀರೆರಿದಿದ್ದಾರೆ. ಕ್ರಿಕೆಟ್ ಕೋಚಿಂಗ್, ಕ್ರಿಕೆಟ್ ಸಾಮಗ್ರಿಗಳು ಸೇರಿದಂತೆ ತಮ್ಮ ಮಗನ ಕ್ರಿಕೆಟ್ ಖರ್ಚು ವೆಚ್ಚಗಳಿಗೆ ಲೋನ್ ಪಡೆದಿದ್ದಾರೆ. ಮಂಗೇಶ ಯಾದವ್ ಅವರ ಕುಟುಂಬ ಈಗಲೂ ಚಿಂದಾವರ್ ನಗರದಿಂದ 75 ಕಿಮೀ ದೂರದಲ್ಲಿರುವ ಬೋರ್ಗಾಂವ್ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ.
IPL 2026: ರಿಂಕು ಸಿಂಗ್‌ಗೆ ಪ್ರಾದೇಶಿಕ ಕ್ರೀಡಾಧಿಕಾರಿ ಹುದ್ದೆಯನ್ನು ನೀಡಿದ ಉತ್ತರ ಪ್ರದೇಶ ಸರ್ಕಾರ!
ಕೆಲವೊಮ್ಮೆ ರಾತ್ರಿ ನಿದ್ರೆಯೇ ಮಾಡುತ್ತಿರಲಿಲ್ಲ
“ನಾನು ಹಣಕ್ಕಾಗಿ ತುಂಬಾ ಕಷ್ಟಪಡಬೇಕಾಯಿತು. ತನ್ನ ಪುತ್ರನ ಕ್ರಿಕೆಟ್ ಖರ್ಚಿಗೆ ಹಣವನ್ನು ಹೇಗೆ ಭರಿಸಬೇಕೆಂಬ ಚಿಂತೆಯಲ್ಲಿ ಕೆಲವೊಮ್ಮೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಟ್ರಕ್ ಚಾಲಕರ ಜೀವನ, ಜೀವನವೇ ಅಲ್ಲ. ಊಟ ಮಾಡಲು ಅಥವಾ ಸ್ನಾನ ಮಾಡಲು ಸಮಯವೂ ಇರಲ್ಲ. ಟ್ರಕ್ ತುಂಬಿದ್ದಾಗ ಅನ್‌ಲೋಡ್ ಮಾಡುವ ಚಿಂತೆ, ಖಾಲಿಯಾಗಿದ್ದಾಗ ಭರ್ತಿ ಮಾಡಬೇಕೆಂಬ ಚಿಂತೆ,” ಎಂದು ಮಂಗೇಶ ಯಾದವ್ ತಂದೆ ರಾಮ್ ಆವಾದ್ ಹೇಳಿದ್ದಾರೆ.
ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಮಂಗೇಶ ಯಾದವ್
ಲೆದರ್ ಬಾಲ್ ಕ್ರಿಕೆಟ್‌ಗೆ ಪ್ರವೇಶಿಸುವುದಕ್ಕೂ ಮುನ್ನ ಮಂಗೇಶ್ ಯಾದವ್ ಟೆನಿಸ್ ಬಾಲ್ ಟೂರ್ನಿಗಳಲ್ಲಿ ಭಾಗವಹಿಸಿ ಜೀವನ ಸಾಗಿಸುತ್ತಿದ್ದರು. ಹೆಚ್ಚಿನಷ್ಟು ಸಮಯ, ಅವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಪ್ರದೇಶಗಳಿಗೆ ಉಚಿತ ರೈಲ್ವೆ ಕೋಚ್‌ಗಳಲ್ಲಿ ಮತ್ತು ರಾಜ್ಯ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದರು. ತಂದೆಯನ್ನು ಅವಲಂಬಿಸದೆ ತಾನೇ ಹಣವನ್ನು ದುಡಿದು ಜೀವಿಸುವುದಾಗಿತ್ತು.
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾಗುತ್ತಾ? ಸುಳಿವು ನೀಡಿದ ಹೊಸ ಮಾಲೀಕರು!
ಆದರೆ ಅವರ ಲೆದರ್ ಬಾಲ್ ಕ್ರಿಕೆಟ್ ಪ್ರಯಾಣ 16ರ ವಯಸ್ಸಿನಲ್ಲಿ ಪ್ರಾರಂಭವಾಯಿತು, ಸ್ಥಳೀಯ ಟೂರ್ನಿಯೊಂದರಲ್ಲಿ ವಿಶಿಷ್ಟ ಪ್ರದರ್ಶನ ನೀಡಿದ ನಂತರ, ಕುಟುಂಬದ ಸ್ನೇಹಿತರು ಅವರನ್ನು ನೊಯ್ಡಾಕ್ಕೆ ಕಳುಹಿಸಲು ಸಹಾಯ ಮಾಡಿದರು. ವಾಂಡರ್ ಕ್ರಿಕೆಟ್ ಕ್ಲಬ್‌ನಲ್ಲಿ ಕೋಚ್ ಫೂಲ್‌ಚಂದ್ ಶರ್ಮಾ, ಮಂಗೇಶ್ ಯಾದವ್ ಅವರ ಪ್ರತಿಭೆಯನ್ನು ಗುರುತಿಸಿ, ಹಾಸ್ಟೆಲ್ ಶುಲ್ಕವನ್ನು ಮೂರು ವರ್ಷಗಳ ಕಾಲ ಪಡೆದಿರಲಿಲ್ಲ. ಫೂಲ್‌ಚಂದ್ ಶರ್ಮಾ ಅವರ ಬೆಂಬಲವಿಲ್ಲದೆ, ಮಂಗೇಶ್ ಯಾದವ್ ಕ್ರಿಕೆಟ್‌ನಲ್ಲಿ ಇಲ್ಲಿಯ ತನಕ ಬಡುತ್ತಿರಲಿಲ್ಲ. ಇದನ್ನು ಸ್ವತಃ ಮಂಗೇಶ್ ಒಪ್ಪಿಕೊಂಡಿದ್ದಾರೆ.
ಕೋಚ್ ಫೂಲ್‌ಚಂದ್ ಶರ್ಮಾ ಬಗ್ಗೆ ಮಂಗೇಶ ಯಾದವ್ ಹೇಳಿಕೆ
“ನಾನು ಇಂದು ಕ್ರಿಕೆಟ್ ಆಡುತ್ತಿರುವುದಾದರೆ ಅದಕ್ಕೆ ಕಾರಣ ಫೂಲ್‌ಚಂದ್ ಶರ್ಮಾ ಸರ್. ನಾನು ದೆಹಲಿಗೆ ಹೋಗುವಾಗ, ನನ್ನ ತಂದೆ ತುಂಬಾ ಕಷ್ಟಪಟ್ಟು ನನಗೆ 24,000 ಹಣ ನೀಡಿದ್ದರು. ಆ ಹಣ ಮೊದಲ ತಿಂಗಳಲ್ಲಿ ಹೇಗೆ ಅಂತ್ಯವಾಯಿತು ಎಂದು ನನಗೆ ಗೊತ್ತಿಲ್ಲ,” ಎಂದು ಮಂಗೇಶ್ ಯಾದವ್ ಹೇಳಿದ್ದಾರೆ.
IPL 2026: ಟಿ20 ಕ್ರಿಕೆಟ್‌ನಲ್ಲಿ ಸಕ್ಸಸ್ ಆಗಲು ರಿಷಭ್ ಪಂತ್‌ಗೆ ಡುಪ್ಲೆಸಿಸ್ ಮಹತ್ವದ ಸಲಹೆ!
ಮಂಗೇಶ ಯಾದವ್ ಉತ್ತಮ ಆಟಗಾರ
“ಮಂಗೇಶ್ ದೆಹಲಿಯಲ್ಲಿ ಯಾರೋ ಒಬ್ಬರ ಮನೆಯಲ್ಲಿ ಇದ್ದರು. ನಾನು ನೋಡಿದಾಗ ಅವರು ಉತ್ತಮ ಬೌಲರ್, ಆದರೆ ಊಟಕ್ಕೆ ಹಣ ಇರಲಿಲ್ಲ. ನಾನು ಅವಇಗೆ ಹಾಸ್ಟೆಲ್‌ನಲ್ಲಿ ಬರುವಂತೆ ಮತ್ತು ವಾಸಿಸುವಂತೆ ಹೇಳಿದ್ದೆ. ಅಲ್ಲಿ ಅವರ ಕ್ರಿಕೆಟ್ ಪ್ರಯಾಣವು ನಿಜವಾಗಿ ಪ್ರಾರಂಭವಾಯಿತು. ಯಾರಿಗೆ ಹಣವಿದೆ ಅಥವಾ ಇಲ್ಲ ಎನ್ನುವುದನ್ನು ನಾನು ಪರಿಗಣಿಸುವುದಿಲ್ಲ. ಆಟಗಾರನು ಉತ್ತಮನಾಗಿದ್ದರೆ, ಅವರು ಬಂದು ಊಟ ಮಾಡಬಹುದು, ವಾಸಿಸಬಹುದು ಮತ್ತು ಅಭ್ಯಾಸ ಮಾಡಬಹುದು,” ಎಂದು ಫೂಲ್‌ಚಂದ್ ಶರ್ಮಾ ತಿಳಿಸಿದ್ದಾರೆ.