ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ರಿಂಕು ಸಿಂಗ್‌ಗೆ ಪ್ರಾದೇಶಿಕ ಕ್ರೀಡಾಧಿಕಾರಿ ಹುದ್ದೆಯನ್ನು ನೀಡಿದ ಉತ್ತರ ಪ್ರದೇಶ ಸರ್ಕಾರ!

ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ರೀಡಾಧಿಕಾರಿ ಹುದ್ದೆಗೆ ನೇಮಕವಾದ ಬೆನ್ನಲ್ಲೆ ಭಾರತೀಯ ಕ್ರಿಕೆಟಿಗ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ರಿಂಕು ಸಿಂಗ್‌ ಅವರು ಬುಧವಾರ ಉತ್ತರ ಪ್ರದೇಶ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಿಂಕು ಸಿಂಗ್‌ಗೆ ಪ್ರಾದೇಶಿಕ ಕ್ರೀಡಾಧಿಕಾರಿ ಹುದ್ದೆಯನ್ನು ನೀಡಿದ ಯುಪಿ!

ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ರೀಡಾಧಿಕಾರಿಯಾಗಿ ರಿಂಕು ಸಿಂಗ್‌ ನೇಮಕ. -

Profile
Ramesh Kote Mar 26, 2026 2:03 PM

ನವದೆಹಲಿ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್‌ (Rinku Singh) ಅವರು ರಾಜ್ಯದ ಕ್ರೀಡಾ ಕೋಟಾ ಯೋಜನೆಯಡಿ ಪ್ರಾದೇಶಿಕ ಕ್ರೀಡಾ ಅಧಿಕಾರಿ ಹುದ್ದೆಗೆ ನೇಮಕವಾದ ಬಳಿಕ ಬುಧವಾರ ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಎಡಗೈ ಬ್ಯಾಟ್ಸ್‌ಮನ್, ಈ ನೇಮಕಾತಿಗಾಗಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ, ಅವರಿಗೆ ನೀಡಲಾದ 3 ಕೋಟಿ ರು ಆರ್ಥಿಕ ನೆರವಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

“ನನ್ನನ್ನು ಪ್ರಾದೇಶಿಕ ಕ್ರೀಡಾ ಅಧಿಕಾರಿ ಹುದ್ದೆಗೆ ನೇಮಕ ಮಾಡಿದ ಉತ್ತರ ಪ್ರದೇಶ ಸರ್ಕಾರ ಮತ್ತು ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ,” ಎಂದು ರಿಂಕು ಸಿಂಗ್ ಹೇಳಿದ್ದಾರೆ.

26ರ ವಯಸ್ಸಿನ ಅವರು ಮಂಗಳವಾರ ನಡೆದಿದ್ದ ನೇಮಕಾತಿ ಪತ್ರ ವಿತರಣೆ ಸಮಾರಂಭಕ್ಕೆ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಜೊತೆಗಿನ ಕರ್ತವ್ಯದ ಕಾರಣದಿಂದ ಹಾಜರಾಗಲು ಸಾಧ್ಯವಾಗಲಿಲ್ಲ ಎಂದರು. ಆದರೆ, ಶೀಘ್ರದಲ್ಲೇ ಲಖನೌಗೆ ಭೇಟಿ ನೀಡಿ ನೇಮಕಾತಿ ಪತ್ರವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದಾರೆ.

IPL 2026: ಅಜಿಂಕ್ಯ ರಹಾನೆ ನಾಯಕ, ಕೋಲ್ಕತಾ ನೈಟ್‌ ರೈಡರ್ಸ್‌ಗೆ ರಿಂಕು ಸಿಂಗ್‌ ಉಪನಾಯಕ!

ರಿಂಕು ಸಿಂಗ್ ಅವರ ನೇಮಕಾತಿ ರಾಜ್ಯ ಸರ್ಕಾರದ ವಿಶಾಲ ಯೋಜನೆಯ ಒಂದು ಭಾಗವಾಗಿದೆ. ಈ ಯೋಜನೆಯಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಲಾಗುತ್ತಿದೆ.

ಈ ಪಟ್ಟಿಯಲ್ಲಿ ಮತ್ತೊಬ್ಬ ಪ್ರಮುಖ ಕ್ರೀಡಾಪಟುವಾದ ರಾಜಕುಮಾರ್‌ ಪಾಲ್ ಕೂಡ ಸೇರಿದ್ದಾರೆ. ‌2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚಿನ ಪದಕ ಗೆದ್ದ ಭಾರತದ ಹಾಕಿ ತಂಡದ ಸದಸ್ಯರಾಗಿರುವ ಅವರಿಗೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ (DSP) ಹುದ್ದೆಗೆ ನೇಮಕ ಮಾಡಲಾಗುತ್ತಿದೆ.



ಘಾಝಿಪುರ್‌ ಮೂಲದ ರಾಜಕುಮಾರ್ ಪಾಲ್, ಸರ್ಕಾರದಿಂದ ಮಾನ್ಯತೆ ಪಡೆಯುತ್ತಿರುವ ಆರು ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಪ್ಯಾರಾಲಿಂಪಿಕ್ ಹೈಜಂಪ್ ಚಿನ್ನದ ಪದಕ ವಿಜೇತ ಪ್ರವೀಣ್‌ ಕುಮಾರ್‌ ಅವರನ್ನು ಡಿಎಸ್ಪಿ ಹುದ್ದೆಗೆ ನೇಮಕ ಮಾಡಲಾಗುತ್ತದೆ. ಇದೇ ವೇಳೆ ಜಾವೆಲಿನ್ ಥ್ರೋ ಬೆಳ್ಳಿ ಪದಕ ವಿಜೇತ ಅಜಿತ್‌ ಸಿಂಗ್‌ ಮತ್ತು 200 ಮೀಟರ್ ಓಟದ ಕಂಚಿನ ಪದಕ ವಿಜೇತ ಸಿಮ್ರನ್‌ ಅವರಿಗೆ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ ಹುದ್ದೆ ನೀಡಲಾಗಿದೆ.

ಸಮಾರಂಭಕ್ಕೆ ಹಾಜರಾಗಲಾಗದಿದ್ದರೂ ರಿಂಕು ಸಿಂಗ್, ಧನ್ಯವಾದಗಳನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟರ್ ತಮ್ಮ ವೇಳಾಪಟ್ಟಿಗೆ ಅನುಗುಣವಾಗಿ ಲಖನೌದಲ್ಲಿ ಕ್ರೀಡಾ ನಿರ್ದೇಶನಾಲಯ ಕಚೇರಿಯಲ್ಲಿ ತಮ್ಮ ಕರ್ತವ್ಯ ಆರಂಭಿಸಲಿದ್ದಾರೆ ಎಂದು ಕ್ರೀಡಾ ನಿರ್ದೇಶಕ ಆರ್‌ಪಿ ಸಿಂಗ್‌ ಪಿಟಿಐಗೆ ತಿಳಿಸಿದ್ದಾರೆ.



ರಿಂಕು ಸಿಂಗ್‌ ಅವರಿಗೆ ತಮ್ಮ ಕರ್ತವ್ಯಗಳನ್ನು ಹೀಗಾಗಿ ನಿಯೋಜಿಸಲಾಗುತ್ತದೆ, ಇದರಿಂದ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಬಹುದು ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯನ್ನು ವಹಿಸಬಹುದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಿಂಕು ಸಿಂಗ್‌ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ವಿಜಯ ಅಭಿಯಾನದಲ್ಲಿ ಭಾಗಿಯಾಗಿದ್ದರು, ಇತ್ತೀಚಿನ ವರ್ಷಗಳಲ್ಲಿ ಅವರು ಸಾಕಷ್ಟು ಬೆಳೆದಿದ್ದಾರೆ. ಟೂರ್ನಿಯ ಸಮಯದಲ್ಲಿ ಅವರು ತಮ್ಮ ತಂದೆಯನ್ನು ಕಳೆದುಕೊಂಡು, ಶೀಘ್ರದಲ್ಲೇ ಅಲಿಗಢ್‌ನಲ್ಲಿ ನಡೆದಿದ್ದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು, ನಂತರ ಮತ್ತೆ ತಂಡಕ್ಕೆ ಸೇರ್ಪಡೆಯಾಗಿದ್ದರು.