ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಕನ್ನಡಿಗ ನಾಗರಾಜ್‌ ಹೆಗಡೆ ಯಾರು? ಇಲ್ಲಿದೆ ಮಾಹಿತಿ!

ಕ್ರಿಕೆಟ್‌ ಲೋಕದ ಕಿಂಗ್‌ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಹತ್ತಿರದಿಂದ ಕಾಣಲು ಕೋಟ್ಯಂತರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೋಗಿರುವಾಗ ವಿರಾಟ್‌ ಕೊಹ್ಲಿಯನ್ನು ಭೇಟಿಯಾಗುವುದಲ್ಲ ಅವರೊಂದಿಗೆ ನೆಟ್ಸ್‌ನಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುವ ಅವಕಾಶವನ್ನೂ ಕೂಡ ಕನ್ನಡಿಗ ನಾಗರಾಜ ಹೆಗಡೆ ಗಿಟ್ಟಿಸಿಕೊಂಡು ಗಮನ ಸೆಳೆದಿದ್ದಾರೆ.

ವಿರಾಟ್‌ ಕೊಹ್ಲಿ ಜೊತೆ ನಾಗರಾಜ ಹೆಗಡೆ

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ಲೇ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್‌ ಹೆಗಡೆ ನೆಟ್ಸ್‌ನಲ್ಲಿ ಕಿಂಗ್ ಕೊಹ್ಲಿ ಎದುರು ಬೌಲಿಂಗ್‌ ಮೂಲಕ ಗಮನ ಸೆಳೆಸಿದ್ದಾರೆ.

ಯಾರು ಈ ನಾಗರಾಜ ಹೆಗಡೆ?

ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರು. ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸಿಸುತ್ತಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಪುತ್ರ. ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಾಲ್ಯದಿಂದಲೆ ವಾಲಿಬಾಲ್, ಬ್ಯಾಡ್ಮಿಟನ್, ಕ್ರಿಕೆಟ್‌ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗರಾಜ ಹೆಗಡೆ ನಾಲ್ಕು ಐದು ವರ್ಷಗಳಿಂದ ಶಿಕ್ಷಣದ ಜತೆ ಜತೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ನಲ್ಲಿ ಕ್ರಿಕೆಟ್ ತರಬೇತಿ ಮಾಡುತ್ತಿದ್ದಾರೆ.

Virat Kohli 9000 Runs: ಐಪಿಎಲ್‌ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಹೇಗೆ?

ಸದ್ಯ ಇವರು ಆಡುತ್ತಿರುವ ಕ್ಲಬ್‌ಗೆ ಜಾಹೀರಾತು ಆಫರ್ ಬಂದಿದ್ದು 30 ಜನರಲ್ಲಿ ಇವರು ಆಯ್ಕೆಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಂಪಾದಿಸಿದ್ದಾರೆ.

Virat Kohli: 'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್‌ ಕೊಹ್ಲಿ

ಇನ್‌ಸ್ಟಾ ವಾಲ್‌ ಮೇಲೆ ಬರೆದುಕೊಂಡ ನಾಗರಾಜ್‌

"ಇದು ನಿಜ ಅಂತ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ, ಆ ಕ್ಷಣದ ಕೆಲವು ನೆನಪುಗಳು ಇಲ್ಲಿವೆ. ಅವರನ್ನು ನೋಡುತ್ತಾ ಬೆಳೆದ ನಾನು, ಇಂದು ವಿರಾಟ್ ಕೊಹ್ಲಿ ಅವರ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ನೋಡಿದರೆ, ಜೀವನವು ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಅಚ್ಚರಿಗಳನ್ನು ತಂದುಕೊಡುತ್ತದೆ ಎಂದನಿಸುತ್ತದೆ," ಎಂದು ನಾಗರಾಜ ಹೆಗಡೆ ತಮ್ಮ ಸೋಷಿಯಲ್‌ ಮೀಡಿಯಾ ವಾಲ್‌ ಮೇಲೆ ಬರೆದುಕೊಂಡಿದ್ದಾರೆ.

"ಓಕ್ಲೇ ಮೆಟಾ AI ಗ್ಲಾಸಸ್‌ ಪ್ರಚಾರಕ್ಕೆ ಈ ಚಿತ್ರೀಕರಣ ನಡೆದಿದ್ದು, ಇದರ ಭಾಗವಾಗಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಸದಾ ಗೌರವದಿಂದ ಕಾಣುವ ವ್ಯಕ್ತಿಯೊಂದಿಗೆ ಮಾತನಾಡಿದ್ದು, ಈ ಎಲ್ಲದಕ್ಕೂ ನಾನು ಚಿರಋಣಿ. ಈ ಕ್ಷಣದಲ್ಲಿ ನನಗೆ ವಿಶೇಷವಾಗಿ ಅನ್ನಿಸಿದ್ದು ಅವರ ಸಾಧನೆಯಲ್ಲ, ಬದಲಾಗಿ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಅವರು ತೋರುವ ಆ ನಮ್ರತೆ ಮತ್ತು ಅವರ ಸರಳ ವ್ಯಕ್ತಿತ್ವ.

ಇದು ನಾನು ಯಾವಾಗಲೂ ಹತ್ತಿರವಾಗಿ ಇಟ್ಟುಕೊಳ್ಳುವ ನೆನಪುಗಳಲ್ಲಿ ಒಂದು. ಕೆಲವೊಮ್ಮೆ ಕೇವಲ ಮೆಚ್ಚುಗೆಯಾಗಿ ಆರಂಭವಾಗಿದ್ದು ಹೇಗೆ ವಾಸ್ತವವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ನೆನಪಿನ ಬುತ್ತಿ," ಎಂದು ತಮ್ಮ ವಿಶೇಷ ಅನುಭವವನ್ನು ವಿವರಿಸಿದ್ದಾರೆ.

RCB vs LSG: ಟಾಸ್‌ ಗೆದ್ದು ಚೇಸಿಂಗ್‌ ಆರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಆರ್‌ಸಿಬಿ ಪರ ಮಿಂಚುತ್ತಿರುವ ಕೊಹ್ಲಿ

ಅಂತಾರಾಟ್ರೀಯ ಟಿ20 ಕ್ರಿಕೆಟ್‌ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ, ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರವೇ ಟೀಮ್ ಇಂಡಿಯಾ ಪರ ಸೇವೆ ಮುಂದುವರಿಸಿದ್ದಾರೆ. ಜೊತೆಗೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಕೆರಿಯರ್‌ ಮುಂದುವರಿಸಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 2026ರ ಆವೃತ್ತಿಯಲ್ಲೂ ಟಾಪ್‌ ಸ್ಕೋರರ್‌ ಆಗಿದ್ದಾರೆ. ಐಪಿಎಲ್‌ 2026 ಟೂರ್ನಿಯಲ್ಲಿ ಆರ್‌ಸಿಬಿ ಪರ ಈವರೆಗೆ ಆಡಿದ 9 ಪಂದ್ಯಗಳಲ್ಲಿ ವಿರಾಟ್‌, 165.50ರ ಸ್ಟ್ರೈಕ್‌ರೇಟ್‌ನಲ್ಲಿ 379 ರನ್‌ಗಳನ್ನು ಬಾರಿಸಿದ್ದಾರೆ.

ಸದ್ಯ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಡಿಫೆಂಡಿಂಗ್‌ ಚಾಂಪಿಯನ್ಸ್‌ ಆರ್‌ಸಿಬಿ, ತನ್ನ ಪಾಲಿನ ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆದ್ದರೂ ಪ್ಲೇ-ಆಫ್ಸ್‌ನಲ್ಲಿ ಸ್ಥಾನ ಬಹುತೇಕ ಖಾತ್ರಿಯಾಗಲಿದೆ. ಆದರೆ, ಅಗ್ರ 2ರಲ್ಲಿ ಸ್ಥಾನ ಪಡೆಯಲ,ು ಎದುರು ನೋಡುತ್ತಿರುವ ರಜತ್‌ ಪಾಟಿದಾರ್‌ ಪಡೆ 5ರಲ್ಲಿ 4 ಪಂದ್ಯಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕೊಂಡಿದೆ. ಮೇ 7ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಆತಿಥೇಯ ಲಖನೌ ಸೂಪರ್‌ ಜಯಂಟ್ಸ್‌ ಎದುರು ಆರ್‌ಸಿಬಿ ಪೈಪೋಟಿ ನಡೆಸಲಿದೆ.