ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ಎರಡನೇ ಒಡಿಐ ಪಂದ್ಯದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಆಡದೇ ಇರಲು ಕಾರಣವೇನು?

IND vs AFG 2nd ODI: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಎರಡನೇ ಏಕದಿನ ಪಂದ್ಯ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆಯನ್ನು ತರಲಾಗಿದೆ. ಹರ್ಷ್‌ ದುಬೇ ಹಾಗೂ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಕೈ ಬಿಡಲಾಗಿದೆ. ಅವರ ಬದಲಿಗೆ ಕ್ರಮವಾಗಿ ಪ್ರಿನ್ಸ್‌ ಯಾದವ್‌ ಮತ್ತು ಯಶಸ್ವಿ ಜೈಸ್ವಾಲ್‌ಗೆ ಸ್ಥಾನವನ್ನು ನೀಡಲಾಗಿದೆ.

ಎರಡನೇ ಏಕದಿನ ಪಂದ್ಯಕ್ಕೆ ನಿತೀಶ್‌ ರೆಡ್ಡಿ ಅಲಭ್ಯ.

ನವದೆಹಲಿ: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು (IND vs AFG) ಲಖನೌದ ಏಕನಾ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ಆಫ್ಘನ್‌ ತಂಡ, ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಆ ಮೂಲಕ ಎದುರಾಳಿ ಭಾರತ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಅಂದ ಹಾಗೆ ಟೀಮ್‌ ಇಂಡಿಯಾದ (India's Playing XI) ಪ್ಲೇಯಿಂಗ್‌ XIನಲ್ಲಿ ಮೂರು ಬದಲಾವಣೆಯನ್ನು ತರಲಾಗಿದೆ. ಈ ಬಗ್ಗೆ ಟಾಸ್‌ ವೇಳೆ ನಾಯಕ ಶುಭಮನ್‌ ಗಿಲ್‌ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದರೂ ನಿತೀಶ್‌ ಕುಮಾರ್‌ ರೆಡ್ಡಿ (Nitish Kumar Reddy) ಅವರನ್ನು ಕೈ ಬಿಡಲಾಗಿದೆ.

ಅಂದಹಾಗೆ ಎರಡನೇ ಏಕದಿನ ಪಂದ್ಯದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿಲ್ಲ. ಎಡಗೈ ಮೊಣ ಕಾಲಿನ ಗಾಯಕ್ಕೆ ತುತ್ತಾಗಿರುವ ಕಾರಣ ನಿತೀಶ್‌ ರೆಡ್ಡಿ ಅವರಿಗೆ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. "ಎಡಗೈ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಕಾರಣ ನಿತೀಶ್‌ ಕುಮಾರ್‌ ರೆಡ್ಡಿ ಅವರು ಎರಡನೇ ಏಕದಿನ ಪಂದ್ಯದ ಪ್ಲೇಯಿಂಗ್‌ XIಗೆ ಅಲಭ್ಯರಾಗಿದ್ದಾರೆ," ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡನೇ ಏಕದಿನದಲ್ಲಿ ಟಾಸ್‌ ಗೆದ್ದ ಆಫ್ಘಾನ್‌; ಭಾರತ ಪರ ಪ್ರಿನ್ಸ್‌ ಯಾದವ್‌ ಪದಾರ್ಪಣೆ

ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಮೂರು ಬದಲಾವಣೆಯನ್ನು ತರಲಾಗಿದೆ. ಎರಡನೇ ಪಂದ್ಯಕ್ಕೆ ನಿತೀಶ್‌ ರೆಡ್ಡಿ ಅಲಭ್ಯರಾಗಿದ್ದಾರೆ. ಹಾಗಾಗಿ ಹೆಚ್ಚುವರಿ ವೇಗಿಯಾಗಿ ಪ್ರಿನ್ಸ್‌ ಯಾದವ್‌ ಅವರನ್ನು ಪ್ಲೇಯಿಂಗ್‌ XIನಲ್ಲಿ ಸೇರಿಸಲಾಗಿದೆ. ಆ ಮೂಲಕ ಪ್ರಿನ್ಸ್‌ ಯಾದವ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಹರ್ಷ್‌ ದುಬೇ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಆಡುವ ಬಳಗಕ್ಕೆ ಬಂದಿದ್ದಾರೆ.



ಒಟ್ಟಾರೆ ಭಾರತ ತಂಡ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಹಾಗೂ ನಾಲ್ವರು ಪೂರ್ಣ ಪ್ರಮಾಣದ ಬೌಲರ್‌ಗಳು ಆಡುತ್ತಿದ್ದಾರೆ. ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ಪ್ರಮುಖ ಬದಲಾವಣೆಯಲ್ಲಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮಹತ್ತರ ಪಾತ್ರವನ್ನು ವಹಿಸಿದ್ದಾರೆ.



ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ xi

ಯಶಸ್ವಿ ಜೈಸ್ವಾಲ್‌, ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ (ನಾಯಕ), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌ ಯಾದವ್‌, ಗುರ್ನೂರ್‌ ಬ್ರಾರ್‌, ಅರ್ಷದೀಪ್‌ ಸಿಂಗ್‌, ಪ್ರಿನ್ಸ್‌ ಯಾದವ್‌

ಟೀಮ್‌ ಇಂಡಿಯಾಕ್ಕೆ ಪ್ರಿನ್ಸ್‌ ಯಾದವ್‌ ಪದಾರ್ಪಣೆ; ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌ ಫೇಲ್‌

ಭಾರತ ಏಕದಿನ ತಂಡ: ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ಇಶಾನ್ ಕಿಶನ್(ವಿಕೆಟ್‌ ಕೀಪರ್‌), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿಧ್‌ ಕೃಷ್ಣ, ಯಶಸ್ವಿ ಜೈಸ್ವಾಲ್, ಪ್ರಿನ್ಸ್ ಯಾದವ್, ಕುಲ್‌ದೀಪ್ ಯಾದವ್