ಟೀಮ್ ಇಂಡಿಯಾಕ್ಕೆ ಪ್ರಿನ್ಸ್ ಯಾದವ್ ಪದಾರ್ಪಣೆ; ಬ್ಯಾಟಿಂಗ್‌ನಲ್ಲಿ ಜೈಸ್ವಾಲ್ ಫೇಲ್
IND vs AFG 2nd ODI: ಮುಂದಿನ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಸುಮಾರು ಒಂದು ಡಜನ್ ಪಂದ್ಯಗಳಲ್ಲಿ ಆಡುವ ಅವಕಾಶ ಇದೆ. ತಂಡ ಸಂಯೋಜನೆಯಲ್ಲಿ ಕೆಲವು ಪ್ರಯೋಗಗಳನ್ನು ಮಾಡುವತ್ತ ಚಿತ್ತ ನೆಟ್ಟಿರುವ ಕೋಚ್ ಗೌತಮ್ ಗಂಭೀರ್ ಯುವ ಆಟಗಾರರನ್ನು ಬೆಂಚ್ ಕಾಯಿಸುವ ಬದಲು ಅವಕಾಶ ನೀಡಲಾರಂಭಿಸಿದ್ದಾರೆ. ಇದೇ ಕಾರಣದಿಂದ ಪ್ರಿನ್ಸ್ ಯಾದವ್‌ಗೂ ಅವಕಾಶ ನೀಡಿದಂತಿದೆ.
Prince Yadav -
ಲಖನೌ, ಜೂ. 17: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ(IND vs AFG 2nd ODI) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪ್ರಿನ್ಸ್ ಯಾದವ್ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.
ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಭಾರತ, ಖಾಯಂ ಆರಂಭಕಾರ ಶುಭಮನ್ ಗಿಲ್ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಜೈಸ್ವಾಲ್‌ಗೆ ಬಿಟ್ಟುಕೊಟ್ಟರು. ಅದರಂತೆ ರೋಹಿತ್ ಶರ್ಮ ಜತೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. 9 ಎಸೆತಗಳಿಂದ ಕೇವಲ 4 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು.
ಎದುರಾಳಿ ಆಟಗಾರನಿಗೆ ತುಳಿದರೂ ರೆಡ್ ಕಾರ್ಡ್ ಪಡೆಯದ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್
ಆಲ್‌ರೌಂಡರ್ ನಿತೀಶ್ ಕುಮಾರ್ ಬದಲಿಗೆ ಜೈಸ್ವಾಲ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳಲಾಯಿತು. ಆದರೆ ಅವರು ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಹರ್ಷ್ ದುಬೆ 3 ವಿಕೆಟ್ ಕಿತ್ತಿದ್ದರೂ ಈ ಪಂದ್ಯದಿಂದ ಅವರನ್ನು ಕೈಬಿಟ್ಟು ಸ್ಥಳೀಯ ಹೀರೊ ಹಾಗೂ ಅನುಭವಿ ಕುಲ್‌ದೀಪ್ ಯಾದವ್‌ಗೆ ಅವಕಾಶ ನೀಡಲಾಯಿತು. ಇಲ್ಲಿನ ಪಿಚ್ ಕೂಡ ಸ್ಪಿನ್ ದಾಳಿಗೆ ನೆರವು ನೀಡುವ ಕಾರಣ ಪಂದ್ಯದ ಮಧ್ಯಮ ಹಂತದ ಓವರ್‌ಗಳಲ್ಲಿ ವಿಕೆಟ್ ಗಳಿಸುವ ಸಮರ್ಥ ಬೌಲರ್ ಆಗಿರುವ ಕಾರಣ ಅವರಿಗೆ ಅವಕಾಶ ನೀಡಿದಂತಿದೆ.
Precious moments ✨
— BCCI (@BCCI) June 17, 2026
Congratulations to Prince Yadav as he receives his #TeamIndia ODI debut cap from Vice-captain Shreyas Iyer 🥳👏
Updates ▶️ https://t.co/JYJ5l44iJ6#INDvAFG | @IDFCFIRSTBank pic.twitter.com/dX9JYubQFH
ಮುಂದಿನ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಸುಮಾರು ಒಂದು ಡಜನ್ ಪಂದ್ಯಗಳಲ್ಲಿ ಆಡುವ ಅವಕಾಶ ಇದೆ. ತಂಡ ಸಂಯೋಜನೆಯಲ್ಲಿ ಕೆಲವು ಪ್ರಯೋಗಗಳನ್ನು ಮಾಡುವತ್ತ ಚಿತ್ತ ನೆಟ್ಟಿರುವ ಕೋಚ್ ಗೌತಮ್ ಗಂಭೀರ್ ಯುವ ಆಟಗಾರರನ್ನು ಬೆಂಚ್ ಕಾಯಿಸುವ ಬದಲು ಅವಕಾಶ ನೀಡಲಾರಂಭಿಸಿದ್ದಾರೆ. ಇದೇ ಕಾರಣದಿಂದ ಪ್ರಿನ್ಸ್ ಯಾದವ್‌ಗೂ ಅವಕಾಶ ನೀಡಿದಂತಿದೆ.
24 ವರ್ಷದ ಪ್ರಿನ್ಸ್ ಯಾದವ್ 2024ರ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಪ್ರದರ್ಶನದ ಮೂಲಕ ಹೊಸ ಸಂಚಲನ ಮೂಡಿಸಿದ್ದರು. ಪುರಾನಿ ದಿಲ್ಲಿ ತಂಡದ ಪರ 10 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಅದು ಅವರಿಗೆ ದೆಹಲಿ ಪರ ವೈಟ್-ಬಾಲ್ ಚೊಚ್ಚಲ ಪ್ರವೇಶವನ್ನು ಗಳಿಸಿಕೊಟ್ಟಿದ್ದಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿಯೂ ಅವಕಾಶ ಸಿಕ್ಕುವಂತೆ ಮಾಡಿತು. ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಜೊತೆ 30 ಲಕ್ಷ ರೂ. ಒಪ್ಪಂದ ಮಾಡಿಕೊಂಡರು. ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ನಂಬಿಕಸ್ಥ ಬೌಲರ್ ಎನಿಸಿದರು. ಅದರಲ್ಲೂ ಕೊಹ್ಲಿಯನ್ನು ಶೂನ್ಯಕ್ಕೆ ಔಟ್ ಮಾಡಿದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚುವಂತೆ ಮಾಡಿತು.