ಏಷ್ಯಾ ಕಪ್ ಟೂರ್ನಿಗೂ ಮುನ್ನ ಭರ್ಜರಿ ಫಾರ್ಮ್‌ಗೆ ಮರಳಿದ ಸಂಜು ಸ್ಯಾಮ್ಸನ್!
2025ರ ಏಷ್ಯಾ ಕಪ್ ಟೂರ್ನಿಯ ಭಾರತ ತಂಡವನ್ನು ಪ್ರಕಟವಾಗುವ ಮೊದಲೇ ಕೇರಳ ಬ್ಯಾಟರ್ ಸಂಜು ಸ್ಯಾಮ್ಸನ್ ಕೆಸಿಎ ಕಾರ್ಯದರ್ಶಿ XI ಪರ ಅದ್ಭುತ ಇನಿಂಗ್ಸ್ ಆಡಿ ಆಯ್ಕೆ ಸಮಿತಿಯ ಗಮನವನ್ನು ಸೆಳೆದಿದ್ದಾರೆ. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 54 ರನ್ ಬಾರಿಸಿದ್ದಾರೆ.

ಕೆಸಿಎ ಅಧ್ಯಕ್ಷರ ಇಲೆವೆನ್ ವಿರುದ್ದ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್.

ನವದೆಹಲಿ: ಮುಂಬರುವ ಏಷ್ಯಾ ಕಪ್ Asia Cup 2025) ಟೂರ್ನಿಯ ಭಾರತ ತಂಡಕ್ಕೆ ಆರಂಭಿಕ ಆಟಗಾರರ ಆಯ್ಕೆ ಮಾಡುವುದು ಬಹುದೊಡ್ಡ ಸವಾಲಾಗಿದೆ. ಏಕೆಂದರೆ ಆಯ್ಕೆ ಸಮಿತಿ ಮುಂದೆ ಹಲವು ಆಯ್ಕೆಗಳಿವೆ. ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ನಡುವೆ ಆರಂಭಿಕ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಆಯ್ಕೆ ಸಮಿತಿ ಏಕೆ ಗೊಂದಲದಲ್ಲಿದೆ ಎಂದರೆ, ಅಭಿಷೇಕ್ ಮತ್ತು ಜೈಸ್ವಾಲ್ ಅವರ ಸ್ಪೋಟಕ ಇನಿಂಗ್ಸ್ ಆರಂಭ, ಸಂಜು ಸ್ಯಾಮ್ಸನ್ (Sanju Samson) ಅವರ ಚಮತ್ಕಾರಿ ವಿಕೆಟ್ ಕೀಪಿಂಗ್, ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಸ್ಥಿರತೆಯುಳ್ಳ ಬ್ಯಾಟಿಂಗ್ ಇವಿಷ್ಟು ಮಾನದಂಡಗಳನ್ನಿಟ್ಟುಕೊಂಡು ಯಾರಿಗೆ ಮಣೆ ಹಾಕಬೇಕೆಂಬುದನ್ನು ತೀರ್ಮಾನಿಸಲು ಹೈಕಮಾಂಡ್ ಗೊಂದಲದಲ್ಲಿದೆ.
ಆಗಸ್ಟ್ 19 ಅಥವಾ 20 ರಂದು ಬಿಸಿಸಿಐ ಮುಂಬೈನಲ್ಲಿ ಏಷ್ಯಾ ಕಪ್ ಟೂರ್ನಿಗೆ ತಂಡವನ್ನು ಘೋಷಿಸುವುದರ ಮೂಲಕ ಗೊಂದಲಗಳಿಗೆ ತೆರೆ ಎಳೆಯಲಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಆಯ್ಕೆ ಸಮಿತಿ ಆರಂಭಿಕ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅವರ ಕಡೆ ನೋಡಿದರೆ, ಅವರು ಉತ್ತಮ ಲಯದಲ್ಲಿದ್ದಾರೆ. ಆಗಸ್ಟ್ 15ರಂದು ಕೆಸಿಎ ಅಧ್ಯಕ್ಷರ ಇಲೆವೆನ್ ವಿರುದ್ಧ ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನೂ ಈ ಪಂದ್ಯದಲ್ಲಿ ಕೆಸಿಎ ಕಾರ್ಯದರ್ಶಿ ಇಲೆವೆನ್ ತಂಡದ ಪರ ಆಡಿದ ಸ್ಯಾಮ್ಸನ್ 36 ಎಸೆತಗಳಲ್ಲಿ 54 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಸಂಜು-ಅಭಿಷೇಕ್ ಓಪನರ್ಸ್! ಏಷ್ಯಾ ಕಪ್‌ಗೆ ಭಾರತ ತಂಡವನ್ನು ಕಟ್ಟಿದ ಮೊಹಮ್ಮದ್ ಕೈಫ್!
ಕೆಸಿಎ ಅಧ್ಯಕ್ಷರ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ ಸವಾಲಿನ ಮೊತ್ತದ ಗುರಿ ನೀಡಿತು. ಈ ಮೊತ್ತದಲ್ಲಿ ಅಭಿಷೇಕ್ ಜೆ ನಾಯರ್ (19) ಮೊಹಮ್ಮದ್ ಅಝರುದ್ದೀನ್ (1) ಮತ್ತು ನಾಯಕ ಸಚಿನ್ ಬೇಬಿ ಶೂನ್ಯಕೆ ಔಟಾಗಿ ಪೆವಿಲಿಯನ್ ಕಡೆ ಸಾಗಿದರು. ಇದಾದ ಬಳಿಕ ಇನಿಂಗ್ಸ್ ಕಟ್ಟಲು ಮೈದಾನಕ್ಕೆ ಬಂದ ರೋಹನ್ ಕುನ್ನುಮ್ಮಲ್ ಕೇವಲ 29 ಎಸೆತಗಳಲ್ಲಿ 60 ರನ್ ಸಿಡಿಸಿದರು. ನಂತರ ವಿಜಿ ಅಭಿಜಿತ್ ಪ್ರವೀಣ್ 18 ಎಸೆತಗಳಲ್ಲಿ 47 ರನ್ ಸಿಡಿಸಿ, ಎಂ ಡಿ ನಿಧೀಶ್‌ರವರ 22 ಎಸೆತಗಳಲ್ಲಿ 29 ರನ್‌ಗಳ ಆಕರ್ಷಕ ಕೊಡುಗೆ ಕೂಡಿತ್ತು. ಇದಕ್ಕೆ ಪ್ರತಿಯಾಗಿ, ಕಾರ್ಯದರ್ಶಿ XI ಪರ ವಿಷ್ಣು ವಿನೋದ್ ಕೇವಲ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ 69 ರನ್ ಗಳಿಸಿದರು. ನಾಯಕ ಸಂಜು ಸ್ಯಾಮ್ಸನ್ ಕೂಡ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 54 ರನ್ ಗಳಿಸಿ ಉತ್ತಮ ಇನಿಂಗ್ಸ್ ಆಡಿ ಇನ್ನು ಎರಡು ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿದರು.
Asia Cup 2025: ಭಾರತ ತಂಡದ ರೇಸ್‌ನಿಂದ ಇಬ್ಬರು ಸ್ಟಾರ್ ಆಟಗಾರರು ಔಟ್!
ಹರ್ಭಜನ್ ಸಿಂಗ್ ಕಟ್ಟಿದ ಏಷ್ಯಾ ಕಪ್ ತಂಡದಲ್ಲಿ ಸಂಜು ಇಲ್ಲ
ಏಷ್ಯಾ ಕಪ್ ಟೂರ್ನಿಯ ಆಯೋಜನೆಗೆ ದುಬೈ ಮತ್ತು ಅಬುಧಾಬಿ ಸಜ್ಜಾಗುತ್ತಿದೆ. ಈ ಟೂರ್ನಿಗೆ ಸೆಪ್ಟೆಂಬರ್ 9ರಂದು ಅಧಿಕೃತ ಚಾಲನೆ ದೊರಕಲಿದೆ. ಭಾರತ ತಂಡ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲನೇ ಪಂದ್ಯವನ್ನು ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ತಮ್ಮ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಅವರ ಸಂಭಾವ್ಯ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಬದಲಿಗಿ ಶುಭ್‌ಮನ್ ಗಿಲ್ ಅವರಿಗೆ ಸ್ಥಾನ ನೀಡಿದ್ದಾರೆ.
Asia Cup 2025: ಏಷ್ಯಾಕಪ್ ತಂಡದಿಂದ ಶುಭಮನ್ ಗಿಲ್ ಹೊರಗುಳಿಯುವ ಸಾಧ್ಯತೆ
ತಮ್ಮ ಹನ್ನೊಂದರ ಬಳಗದ ಕುರಿತು ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್,"ಎಂದು ಹೇಳಿದ್ದಾರೆ.
ಇನ್ನು ಭಾರತದ ಪರ 42 ಟಿ20ಐ ಪಂದ್ಯಗಳನ್ನು ಆಡಿರುವ ಸ್ಯಾಮ್ಸನ್, 25.32ರ ಸರಾಸರಿಯಲ್ಲಿ 861 ರನ್ ಮತ್ತು 152.38 ಸ್ಟ್ರೈಕ್ ರೇಟ್ ಹೊಂದಿದ್ದು, ಎರಡು ಅರ್ಧಶತಕ ಮತ್ತು ಮೂರು ಶತಕಗಳನ್ನು ಬಾರಿಸಿದ್ದಾರೆ.