Women's World Cup final: 3 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ!
Shafali verma Scored Fifty: ದಕ್ಷಿಣ ಆಫ್ರಿಕಾ ವಿರುದ್ದ 2025ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 87 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕವನ್ನು ಬಾರಿಸಿದರು. 2022ರಲ್ಲಿ ಅವರು ಕೊನೆಯ ಬಾರಿ ಅರ್ಧಶತಕವನ್ನು ಗಳಿಸಿದ್ದರು.
ಮೂರು ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ. -
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ದ 2025ರ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಫೈನಲ್‌ನಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಅರ್ಧಶತಕವನ್ನು ಸಿಡಿಸುವ ಮೂಲಕ ಭಾರತ ಮಹಿಳಾ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆದಾರರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಶಫಾಲಿ, 49 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡಕ್ಕೆ (India women team) ಭರ್ಜರಿ ಆರಂಭವನ್ನು ತಂದುಕೊಟ್ಟರು.
ಅಂದ ಹಾಗೆ ಶಫಾಲಿ ವರ್ಮಾ ಅವರು ಮಹಿಳಾ ಏಕದಿನ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಇನ್‌ಫಾರ್ಮ್ ಬ್ಯಾಟರ್ ಪ್ರತೀಕಾ ರಾವಲ್ ಅವರು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ನಡೆದಿದ್ದರು. ಈ ಹಿನ್ನೆಲೆಯಲ್ಲಿ ಶಫಾಲಿ ವರ್ಮಾ ಅನಿರೀಕ್ಷಿತವಾಗಿ ಅದ್ಭುತ ಅವಕಾಶ ಲಭಿಸಿತು. ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದ ಶಫಾಲಿ ವರ್ಮಾ 5 ಎಸೆತಗಳಲ್ಲಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹಾಗಾಗಿ ನವೆಂಬರ್ 2 ರಂದು ಫೈನಲ್‌ನಲ್ಲಿ ಶಫಾಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು.
IND vs AUS- ಅರ್ಷದೀಪ್, ವಾಷಿಂಗ್ಟನ್ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!
ಈ ಪಂದ್ಯದ ಮೊದಲನೇ ಓವರ್ ಮೇಡಿನ್ ನೀಡುವ ಮೂಲಕ ಭಾರತ ತಂಡ ನಿಧಾನಗತಿಯ ಆರಂಭವನ್ನು ಪಡೆದಿತ್ತು. ಆದರೆ, ಶಫಾಲಿ ವರ್ಮಾ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಭಾರತಕ್ಕೆ ಆಸರೆಯಾದರು. ಎರಡನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅದ್ಭುತ ಲಯದಲ್ಲಿರುವ ರೀತಿ ಕಂಡು ಬಂದರು. ಮೂರನೇ ಓವರ್‌ನಲ್ಲಿ ಮತ್ತೊಂದು ಫೋರ್ ಅನ್ನು ಹೊಡೆದರು. ನಂತರ, ಡೆಲ್ಲಿ ಕ್ಯಾಪಿಟಲ್ಸ್ ಸಹ ಆಟಗಾರ್ತಿ ಮಾರಿಜಾನ್ ಕಪ್ ಅವರಿಗೆ ಎರಡು ಬೌಂಡರಿಗಳನ್ನು ಸಿಡಿಸಿದರು. ಅವರು ಸ್ಮೃತಿ ಮಂಧಾನಾ ಜೊತೆ 104 ರನ್‌ಗಳ ಜೊತೆಯಾಟವನ್ನು ಆಡಿದರು.
Packing a punch 👊
— BCCI Women (@BCCIWomen) November 2, 2025
An excellent FIFTY from Shafali Verma 👌
1⃣0⃣0⃣ up for #TeamIndia
Updates ▶ https://t.co/TIbbeE5t8m#WomenInBlue | #CWC25 | #INDvSA | #Final | @TheShafaliVerma pic.twitter.com/F0NUgDOknn
ಮೂರು ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ
ಒಟ್ಟಾರೆ ಶಫಾಲಿ ವರ್ಮಾ ಅವರು 78 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಏಳು ಬೌಂಡರಿಗಳೊಂದಿಗೆ 87 ರನ್‌ಗಳನ್ನು ಕಲೆ ಹಾಕಿ ಶತಕದಂಚಿನಲ್ಲಿ ಆಯಾಬಾಂಗಾ ಖಾಕ ಅವರಿಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಭಾರತ ತಂಡಕ್ಕೆ ಭರ್ಜರಿ ತಂದುಕೊಟ್ಟು ವಿಕೆಟ್ ಒಪ್ಪಿಸಿದರು. ಆ ಮೂಲಕ ಮೂರು ವರ್ಷಗಳ ಬಳಿಕ ಶಫಾಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕವನ್ನು ಬಾರಿಸಿದರು. ಇವರು 2022ರ ಜಲೈನಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಅರ್ಧಶತಕವನ್ನು ಗಳಿಸಿದ್ದರು. ಇದೀಗ ತಮ್ಮ ಮೂರು ವರ್ಷಗಳ ಅರ್ಧಶತಕದ ಬರವನ್ನು ಶಫಾಲಿ ನೀಗಿಸಿದ್ದಾರೆ.
Innings Break!
— BCCI Women (@BCCIWomen) November 2, 2025
A flourish from Deepti Sharma and Richa Ghosh propels #TeamIndia to 2⃣9⃣8⃣/7 after 50 overs 🤜🤛
Over to our bowlers now! 👍
Scorecard ▶ https://t.co/TIbbeE4ViO#WomenInBlue | #CWC25 | #INDvSA | #Final pic.twitter.com/eFNztfR0xQ
298 ರನ್ ಕಲೆ ಹಾಕಿದ ಭಾರತ
ಶಫಾಲಿ ವರ್ಮಾ (87) ಹಾಗೂ ದೀಪ್ತಿ ಶರ್ಮಾ (58) ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡ, 50 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 297 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 299 ರನ್‌ಗಳ ಗುರಿಯನ್ನು ನೀಡಿತು. ಪ್ರವಾಸಿ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದ ಆಯಾಬಾಂಗ ಖಾಕ ಮೂರು ವಿಕೆಟ್‌ಗಳನ್ನು ಕಬಳಿಸಿದರು.