WPL 2026: ಟೂರ್ನಿಯ ಆರಂಭಕ್ಕೆ ಕ್ಷಣಗಣನೆ, ಮುಂಬೈ ಇಂಡಿಯನ್ಸ್‌ಗೆ ರಾಯಲ್ ಚಾಲೆಂಜರ್ಸ್ ಸವಾಲು!
RCBW vs MIW Match Preview: 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ ಇದೆ. ಶುಕ್ರವಾರ ನವ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಕಾದಾಟ ನಡೆಯಲಿದೆ.
2026ರ ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ. -
ನವದೆಹಲಿ: ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಜನವರಿ 9 ರಂದು ಶುಕ್ರವಾರ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (MIW) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ತಂಡಗಳು ಕಾದಾಟ ನಡೆಸಲಿದವೆ. ಈ ಪಂದ್ಯಕ್ಕೆ ನವ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. ಈ ಪಂದ್ಯಕ್ಕೂ ಮುನ್ನ ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ತಮ್ಮ ಹಾಡುಗಳ ಮೂಲಕ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ನೃತ್ಯದ ಮೂಲಕ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಲಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಹಾಲಿ ಚಾಂಪಿಯನ್ಸ್ ಆಗಿ ಈ ಬಾರಿ ಟೂರ್ನಿಗೆ ಕಣಕ್ಕೆ ಇಳಿಯುತ್ತಿದೆ. 2025ರ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಮುಂಬೈ ಇಂಡಿಯನ್ಸ್ ಎರಡು ಬಾರಿ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸೀವರ್ ಬ್ರಂಟ್, ಅಮನ್‌ಜೋತ್ ಕೌರ್ ಹಾಗೂ ಸೈಕಾ ಇಶಾಖ್ ಅವರನ್ನು ಒಳಗೊಂಡ ಮುಂಬೈ ಬಲಿಷ್ಠವಾಗಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 2024ರಲ್ಲಿ ಚಾಂಪಿಯನ್ ಆಗಿತ್ತು ಹಾಗೂ ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರಿತ್ತು. ಸ್ಮೃತಿ ಮಂಧಾನಾ ಅವರ ನಾಯಕತ್ವದಲ್ಲಿ ರಿಚಾ ಘೋಷ್, ನಡಿನ್ ಡಿ ಕ್ಲಾರ್ಕ್, ಶ್ರೇಯಾಂಕ ಪಾಟೀಲ್ ಹಾಗೂ ಅರುಂಧತಿ ರೆಡ್ಡಿ ಉತ್ತಮ ಆಟಗಾರ್ತಿಯರು ಇದ್ದಾರ. ಇದೀಗ ಎರಡನೇ ಬಾರಿ ಟ್ರೋಫಿಯನ್ನು ಗೆಲ್ಲಲು ಆರ್‌ಸಿಬಿ ಬಯಸುತ್ತಿದೆ. ಆದರೆ, ಈ ಟೂರ್ನಿಯಿಂದ ಕೀ ಆಟಗಾರ್ತಿ ಎಲಿಸ್ ಪೆರಿ ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಇದು ಸ್ಮೃತಿ ಮಂಧಾನಾ ಪಡೆಗೆ ಭಾರಿ ಹಿನ್ನಡೆಯನ್ನು ತಂದಿದೆ.
ಪಂದ್ಯದ ವಿವರ
2026ರ ಮಹಿಳಾ ಪ್ರೀಮಿಯರ್ ಲೀಗ್
ಮೊದಲನೇ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಮುಂಬೈ ಇಂಡಿಯನ್ಸ್
ದಿನಾಂಕ: ಜನವರಿ 9, 2026
ಸಮಯ: ಸಂಜೆ 07: 30ಕ್ಕೆ
ಸ್ಥಳ: ಡಿ ವೈ ಪಾಟೀಲ್ ಸ್ಟೇಡಿಯಂ, ನವ ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
WPL 2026: ಯಶಸ್ಸಿನ ಓಟ ಮುಂದುವರಿಸಲು ಸಜ್ಜಾದ ಮುಂಬೈ ಇಂಡಿಯನ್ಸ್ ವನಿತೆಯರು!
ಡಿ ವೈ ಪಾಟೀಲ್ ಕ್ರೀಡಾಂಗಣದ ಪಿಚ್ ರಿಪೋರ್ಟ್
ಡಿವೈ ಪಾಟೀಲ್ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ವುಮೆನ್‌ಗಳ ಸ್ನೇಹಿಯಾಗಿದೆ. ಚೇಸಿಂಗ್ ತಂಡಗಳಿಗೆ ಇಲ್ಲಿನ ಪಿಚ್‌ನಲ್ಲಿ ಲಾಭವಾಗಲಿದೆ. ಏಕೆಂದರೆ, ಎರಡನೇ ಇನಿಂಗ್ಸ್ ಇಬ್ಬನಿ ಇರುವ ಕಾರಣ ಚೆಂಡಿನ ಮೇಲೆ ಹಿಡಿತ ಸಾಧಿಸಲು ಬೌಲರ್‌ಗಳಿಗೆ ಕಷ್ಟವಾಗುತ್ತದೆ ಹಾಗೂ ಬ್ಯಾಟರ್‌ಗಳು ಇದರ ಲಾಭವನ್ನು ಪಡೆಯಬಹುದು. ಇಲ್ಲಿ ಪ್ರಥಮ ಇನಿಂಗ್ಸ್‌ನ ಸರಾಸರಿ ಮೊತ್ತ 160 ರಿಂದ 160 ರನ್‌ಗಳಾಗಿದ್ದು, ಬ್ಯಾಟರ್‌ಗಳು ಕ್ರೀಸ್‌ನಲ್ಲಿ ನೆಲೆ ಕಂಡುಕೊಂಡರೆ, ಈ ಮೊತ್ತವನ್ನು ಚೇಸ್ ಮಾಡಬಹುದು. ಇನ್ನು ಬೌಲರ್‌ಗಳು ನಿಯಮಿತವಾಗಿ ಲೈನ್ ಅಂಡ್ ಲೆನ್ತ್ ಕಾಯ್ದುಕೊಂಡರೆ ಬ್ಯಾಟರ್ ಮೇಲೆ ಒತ್ತಡವನ್ನು ಹೇರಬಹುದು.
ಮುಂಬೈ vs ಬೆಂಗಳೂರು ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 07
ಮುಂಬೈ ಇಂಡಿಯನ್ಸ್‌ಗೆ ಜಯ: 04
ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ: 03
Navi Mumbai is #TATAWPL ready 🙌
— Women's Premier League (WPL) (@wplt20) January 8, 2026
Which fixture from the first leg of the season are you most excited for? 🤔
Follow TATA WPL 2026 from TOMORROW on https://t.co/rG3cQadgHN 💻 #KhelEmotionKa pic.twitter.com/iSDf28G4A5
ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ XI
ಹೇಯ್ಲಿ ಮ್ಯಾಥ್ಯೂಸ್, ನ್ಯಾಟ್ ಸೀವರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕ), ಅಮನ್‌ಜೋತ್ ಕೌರ್, ಆಮೇಲಿಯಾ ಕೆರ್, ಗಿ ಕಮಲಿನಿ (ವಿಕೆಟ್ ಕೀಪರ್), ಶಬ್ನಿಮ್ ಇಸ್ಮಾಯಿಲ್, ಶೈಕಾ ಇಶಾಖ್, ಸಜೀವನ್ ಸಜಾನಾ, ಸಂಸ್ಕೃತಿ ಗುಪ್ತಾ, ಪೂನಮ್ ಖೆಮ್ನರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI
ಸ್ಮೃತಿ ಮಂಧಾನಾ (ನಾಯಕ), ನದಿನ್ ಡಿ ಕ್ಲಾರ್ಕ್, ಶ್ರೇಯಾಂಕ ಪಾಟೀಲ್, ಪೂಜಾ ವಸ್ತ್ರಾಕರ್, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಜಾರ್ಜಿಯಾ ವಾಲ್, ಲೌರೆನ್ ಬೆಲ್, ಗೌತಮಿ ನಾಯಕ್, ಲಿನ್ಸೆ ಸ್ಮಿತ್