ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

WPL 2027: ಮಿನಿ ಹರಾಜಿಗೆ ಐದೂ ಫ್ರಾಂಚೈಸಿಗಳು ಬಿಡುಗಡೆ ಮಾಡಿದ, ಉಳಿಸಿಕೊಂಡ ಆಟಗಾರ್ತಿಯರ ವಿವರ!

2027ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ತಂಡಗಳು ಈಗಗಾಲೇ ತಯಾರಿಯನ್ನು ಆರಂಭಿಸಿವೆ. ಇದೀಗ ಆರೂ ಫ್ರಾಂಚೈಸಿಗಳು ಅಕ್ಟೋಬರ್‌ 28 ರಂದು ಕೊಚ್ಚಿಯಲ್ಲಿ ನಡೆಯುವ ಮಿನಿ ಹರಾಜಿಗೆ ಎಲ್ಲಾ ಆರು ತಂಡಗಳು ತನ್ನ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ಕೆಲ ಆಟಗಾರ್ತಿಯರನ್ನು ರಿಲೀಸ್‌ ಮಾಡಿವೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

2027ರ ಡಬ್ಲ್ಯುಪಿಎಲ್‌ ಮಿನಿ ಹರಾಜಿಗೆ ಬಿಡುಗಡೆಯಾದ ಆಟಗಾರ್ತಿಯರ ವಿವರ.

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ (WPL) 2027ನೇ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ ಮರಳಲಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2026ರ ಆವೃತ್ತಿಯಿಂದ ಹೊರಗುಳಿದಿದ್ದ ಪೆರ್ರಿ, ಮುಂಬರುವ ಐದನೇ ಆವೃತ್ತಿಯಲ್ಲಿ ಕಣಕ್ಕಿಳಿಯಲು ಲಭ್ಯವಿರುವುದಾಗಿ ಆರ್‌ಸಿಬಿ ಖಚಿತಪಡಿಸಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ, 2027ರ ಆವೃತ್ತಿಗೆ ಪೆರ್ರಿ ಸೇರಿದಂತೆ ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಮುಂದಿನ ವರ್ಷದ ಜನವರಿ 14ರಿಂದ ಫೆಬ್ರವರಿ 7ರವರೆಗೆ ಐದನೇ ಆವೃತ್ತಿಯ ಟೂರ್ನಿ ನಡೆಯಲಿದೆ.

ಮೂರು ಆವೃತ್ತಿಗಳಲ್ಲಿ ಸತತವಾಗಿ ಕೊನೆಯ ಸ್ಥಾನ ಪಡೆದಿರುವ ಯುಪಿ ವಾರಿಯರ್ಸ್, ಆಟಗಾರ್ತಿಯರ ಬಿಡುಗಡೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡವು ಒಟ್ಟು ಒಂಬತ್ತು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್‌ನ ಅನುಭವಿ ಕ್ರಿಕೆಟರ್ ಡಿಯಾಂಡ್ರಾ ಡಾಟಿನ್ ಹಾಗೂ ಭಾರತದ ಪ್ರಮುಖ ಆಟಗಾರ್ತಿಯರಾದ ಕಿರಣ್ ನವಗಿರೆ, ಆಶಾ ಶೋಭನಾ ಮತ್ತು ಶ್ವೇತಾ ಸೆಹ್ರಾವತ್ ಕೂಡ ಬಿಡುಗಡೆಯಾದವರ ಪಟ್ಟಿಯಲ್ಲಿದ್ದಾರೆ.

WPL 2027 Auction: 13 ಆಟಗಾರ್ತಿಯರನ್ನು ಉಳಿಸಿ, ನಾಲ್ವರನ್ನು ರಿಲೀಸ್‌ ಮಾಡಿದ ಆರ್‌ಸಿಬಿ!

ಜಿ ಕಮಲಿನಿಯನ್ನು ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ತಂಡವೂ ಅಚ್ಚರಿಯ ನಿರ್ಧಾರ ಕೈಗೊಂಡಿದ್ದು, ಯುವ ಆಟಗಾರ್ತಿ ಜಿ. ಕಮಲಿನಿಯನ್ನು ಬಿಡುಗಡೆ ಮಾಡಿದೆ. ಕಿರಿಯ ವಯಸ್ಸಿನಲ್ಲೇ ಗಮನ ಸೆಳೆದಿದ್ದ ಕಮಲಿನಿಯನ್ನು ತಂಡದಿಂದ ಕೈಬಿಟ್ಟಿರುವುದು ಮುಂಬರುವ ಹರಾಜಿನ ಹಿನ್ನೆಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಅಕ್ಟೋಬರ್‌ 28 ರಂದು ಕೇರಳದ ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ.

2027ರ ಡಬ್ಲ್ಯುಪಿಎಲ್‌ ನಿಮಿತ್ತ ಉಳಿಸಿಕೊಂಡ, ರಿಲೀಸ್‌ ಮಾಡಿದ ಆಟಗಾರ್ತಿಯರು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಉಳಿಸಿಕೊಂಡ ಆಟಗಾರ್ತಿಯರು: ಸ್ಮೃತಿ ಮಂಧಾನಾ (ನಾಯಕಿ), ರಿಚಾ ಘೋಷ್‌, ಎಲಿಸ್‌ ಪೆರಿ, ಶ್ರೇಯಾಂಕ ಪಾಟೀಲ್‌, ಜಾರ್ಜಿಯಾ ವಾಲ್‌, ನಡಿನ್‌ ಡಿ ಕ್ಲಾರ್ಕ್‌, ರಾಧಾ ಯಾದವ್‌, ಲಾರೆನ್‌ ವಾಲ್‌, ಪ್ರೇಮಾ ರಾವತ್‌, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್‌, ಪ್ರತ್ಯೋಶಾ ಕುಮಾರ್‌

ರಿಲೀಸ್‌ ಮಾಡಿದ ಆಟಗಾರ್ತಿಯರು: ಗ್ರೇಸ್‌ ಹ್ಯಾರಿಸ್‌, ಲನ್ಸೀ ಸ್ಮಿತ್‌, ಗೌತಮಿ ನಾಯಕ್‌, ಡಯಾಲನ ಹೇಮಲತಾ

ಮುಂಬೈ ಇಂಡಿಯನ್ಸ್‌

ಉಳಿಸಿಕೊಂಡ ಆಟಗಾರ್ತಿಯರು: ಅಮನ್‌ಜೋರ್‌ ಕೌರ್‌, ಅಮೇಲಿಯಾ ಕೌರ್‌, ಹರ್ಮನ್‌ಪ್ರೀತ್‌ ಕೌರ್‌, ಹೀಲೀ ಮ್ಯಾಥ್ಯೂಸ್‌, ನಥಾಲಿಯಾ ಸೀವರ್‌, ನಿಕೋಲಾ ಕೇರಿ, ರಹಿಲಾ ಫರ್ದೌಸ್‌, ಎಸ್‌ ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್‌ ಇಸ್ಮಾಯಿಲ್‌, ವೈಷ್ಣವಿ ಶರ್ಮಾ

ಬಿಡುಗಡೆಯಾದ ಆಟಗಾರ್ತಿಯರು: ಜಿ ಕಮಲಿನಿ, ನಲ್ಲಾ ರೆಡ್ಡಿ, ಪೂನಮ್‌ ಖೆಮ್ನರ್‌, ಸೈಕಾ ಇಶಾಕ್‌, ತ್ರಿವೇಣಿ, ವಸಿಷ್ಠ

ಡೆಲ್ಲಿ ಕ್ಯಾಪಿಟಲ್ಸ್‌

ಉಳಿಸಿಕೊಂಡ ಆಟಗಾರ್ತಿಯರು: ಅನ್ನಾಬೆಲ್‌ ಸುಥರ್‌ಲ್ಯಾಂಡ್‌, ಚಿನೆಲ್‌ ಹೆನ್ರಿ, ದೀಯಾ ಯಾದವ್‌, ಜೆಮಿಮಿ ರೊಡ್ರಿಗಸ್‌, ಲಾರ್‌ ವಾರ್ಲ್ವಾರ್ಟ್‌, ಲುಸಿ ಹ್ಯಾಮಿಲ್ಟನ್‌, ಮಮತಾ ಮಡಿವಾಳ, ಮಾರಿಝಾನೆ ಕಾಪ್‌, ಮಿನ್ನು ಮಣಿ, ನಂದಿನಿ ಶರ್ಮಾ, ನಿಕಿ ಪ್ರಸಾದ್‌, ಶಫಾಲಿ ವರ್ಮಾ, ಶ್ರೀ ಚರಣಿ

ಬಿಡುಗಡೆಯಾದ ಆಟಗಾರ್ತಿಯರು: ಲಿಝೆಲ್‌ ಲೀ, ಅಲಾನಾ ಕಿಂಗ್‌, ತನಿಯಾ ಭಾಟಿಯಾ, ಸ್ನೇಹಾ ರಾಣಾ, ಪ್ರಗತಿ ಸಿಂಗ್‌, ಎಡ್ಲಾ ಸೃಜಾನಾ

55ನೇ ಒಡಿಐ ಶತಕದೊಂದಿಗೆ ಸುನೀಲ್‌ ಗವಾಸ್ಕರ್‌ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ

ಯುಪಿ ವಾರಿಯರ್ಸ್‌

ಉಳಿಸಿಕೊಂಡ ಆಟಗಾರ್ತಿಯರು: ದೀಪ್ತಿ ಶರ್ಮಾ, ಹರ್ಲೀನ್‌ ಡಿಯೋಲ್‌, ಕ್ರಾಂತಿ ಗೌಡ್‌, ಮೆಗ್‌ ಲ್ಯಾನಿಂಗ್‌, ಫೋಬ್‌ ಲಿಚ್‌ಫೀಲ್ಡ್‌, ಪ್ರತೀಕಾ ರಾವಲ್‌, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರನ್‌ ಶೇಖ್‌, ಸೋಫಿಯಾ ಎಕ್ಸಲ್‌ಸ್ಟೋನ್‌, ತಾರಾ ನಾರಿಸ್‌

ಬಿಡುಗಡೆಯಾದ ಆಟಗಾರ್ತಿಯರು: ಕಿರಣ್‌ ನವಗಿರಿ, ಕ್ಲೋ ಟ್ರೈಯಾನ್‌, ಎಮಿ ಜೋನ್ಸ್‌, ಡಿಯಾಂದ್ರ ಡಾಟಿನ್‌, ಆಶಾ ಸೋಭಾನಾ, ಶ್ವೇತಾ ಸೆಹ್ರಾವತ್‌

ಗುಜರಾತ್‌ ಜಯಂಟ್ಸ್‌

ಉಳಿಸಿಕೊಂಡ ಆಟಗಾರ್ತಿಯರು: ಅನುಷ್ಕಾ ಶರ್ಮಾ, ಆಶ್ಲೆ ಗಾರ್ಡ್ನರ್‌, ಬೆಥ್‌ ಮೂನಿ, ಭಾರ್ತಿ ಫುಲ್ಮಾಲಿ, ಜಾರ್ಜಿಯಾ ವಾರಿಹ್ಯಾಮ್‌, ಹ್ಯಾಪಿ ಕುಮಾರಿ, ಜಿಂತಿಮಣಿ, ಕಾನಿಕಾ ಆಹುಜಾ, ಕೇಶ್ವೀ ಗೌತಮ್‌, ಕಿಮ್‌ ಗಾರ್ತ್‌ ರಾಜಶ್ವೇರಿ ಗಾಯಕ್ವಾಡ್‌, ರೇಣುಕಾ ಸಿಂಗ್‌, ಸೋಫಿ ಡಿವೈನ್‌, ತನುಜಾ ಕಾನೆವರ್‌, ಯಾಸ್ತಿಕಾ ಭಾಟಿಯಾ

ಬಿಡುಗಡೆಯಾದ ಆಟಗಾರ್ತಿಯರು: ಡಾನ್ನಿ ವ್ಯಾಟ್‌ ಹಾಡ್ಜ್‌, ಆಯುಷಿ ಸೋನಿ, ಟಿಟಾಸ್‌ ಸಧು, ಶಿವಾನಿ ಸಿಂಗ್‌