WPL 2027 Auction: 13 ಆಟಗಾರ್ತಿಯರನ್ನು ಉಳಿಸಿಮ ನಾಲ್ವರನ್ನು ರಿಲೀಸ್ ಮಾಡಿದ ಆರ್‌ಸಿಬಿ!
2027ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜು ಅಕ್ಟೋಬರ್ 28 ರಂದು ಕೇರಳದಲ್ಲಿ ನಡೆಯಲಿದೆ. ಆಸಿಬಿ ಮಹಿಳಾ ತಂಡ ಒಟ್ಟು 13 ಮಂದಿ ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, ನಾಲ್ವರು ಆಟಗಾರ್ತಿಯರನ್ನು ರಿಲೀಸ್ ಮಾಡಿದೆ. 2027ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯು ಮುಂದಿನ ವರ್ಷ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ.
WPL 2027ರ ಹರಾಜಕಿಗೆ 4 ಆಟಗಾರ್ತಿಯರನ್ನು ರಿಲೀಸ್ ಮಾಡಿದ ಆರ್‌ಸಿಬಿ. -
ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2027ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಗೆ ತಂಡವನ್ನು ಸಜ್ಜುಗೊಳಿಸುತ್ತಿದ್ದು, ಒಟ್ಟು 13 ಆಟಗಾರ್ತಿಯರನ್ನು ಉಳಿಸಿಕೊಂಡು ನಾಲ್ವರನ್ನು ಬಿಡುಗಡೆ ಮಾಡಿದೆ. 2026ರ ಸೀಸನ್‌ನಲ್ಲಿ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ ನೀಡಿ ಎರಡನೇ ಬಾರಿ ಡಬ್ಯುಪಿಎಲ್ ಚಾಂಪಿಯನ್ ಆಗಿತ್ತು. ಫೆಬ್ರವರಿ 5ರಂದು ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತ್ತು. 204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಡಬ್ಲ್ಯುಪಿಎಲ್ ಫೈನಲ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ರನ್ ಚೇಸ್ ದಾಖಲಿಸಿತ್ತು.
ತಂಡದ ಪ್ರಮುಖ ಆಟಗಾರ್ತಿಯರಾದ ಸ್ಮೃತಿ ಮಂಧಾನಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಕೆ. ಪ್ರತ್ಯೂಷಾ, ಸಯಾಲಿ ಸತ್ಘರೆ, ಪೂಜಾ ವಸ್ತ್ರಾಕರ್ ಮತ್ತು ಜಾರ್ಜಿಯಾ ವೋಲ್ ಅವರನ್ನು ಆರ್‌ಸಿಬಿ ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ಒಟ್ಟು 9 ಭಾರತೀಯರು ಮತ್ತು 4 ವಿದೇಶಿ ಆಟಗಾರ್ತಿಯರಿದ್ದಾರೆ.
IND vs WI: ತಿರುವನಂತಪುರಂನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ವಿಶೇಷವೆಂದರೆ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ ಕೂಡ 2027ರ ಡಬ್ಲ್ಯುಪಿಎಲ್‌ಗೆ ಲಭ್ಯವಿರುವುದಾಗಿ ಖಚಿತಪಡಿಸಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡಕ್ಕೆ ಮತ್ತಷ್ಟು ಆಯ್ಕೆಗಳು ಲಭ್ಯವಾಗಿವೆ. ಪೆರ್ರಿ 2026ರ ಚಾಂಪಿಯನ್‌ಶಿಪ್ ಅಭಿಯಾನದಲ್ಲಿ ವೈಯಕ್ತಿಕ ಕಾರಣಗಳಿಂದ ಆಡಿರಲಿಲ್ಲ.
ನಾಲ್ವರು ಆಟಗಾರ್ತಿಯರಿಗೆ ಬಿಡುಗಡೆ
ಆರ್‌ಸಿಬಿ ಮಹಿಳಾ ತಂಡ, ದಯಾಳನ್ ಹೇಮಲತಾ, ಗೌತಮಿ ನಾಯಕ್, ಲಿನ್ಸಿ ಸ್ಮಿತ್ ಮತ್ತು ಗ್ರೇಸ್ ಹ್ಯಾರಿಸ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ತಂಡದ ಮುಖ್ಯ ಆಟಗಾರ್ತಿಯರನ್ನು ಅನ್ನು ಉಳಿಸಿಕೊಂಡಿರುವ ಆರ್‌ಸಿಬಿ, ಮುಂದಿನ ಹರಾಜಿನ ಮೂಲಕ ಅಗತ್ಯ ಆಟಗಾರ್ತಿಯರನ್ನು ಸೇರಿಸಿಕೊಳ್ಳಲಿದೆ.
🚨 𝐖𝐏𝐋 𝐑𝐄𝐓𝐄𝐍𝐓𝐈𝐎𝐍𝐒 𝐀𝐍𝐍𝐎𝐔𝐍𝐂𝐄𝐌𝐄𝐍𝐓 🚨
— Royal Challengers Bengaluru (@RCBTweets) September 28, 2026
Malo: “𝘞𝘦’𝘷𝘦 𝘩𝘢𝘥 𝘵𝘩𝘦 𝘣𝘦𝘯𝘦𝘧𝘪𝘵 𝘢𝘯𝘥 𝘵𝘩𝘦 𝘱𝘳𝘪𝘷𝘪𝘭𝘦𝘨𝘦 𝘵𝘰 𝘣𝘦 𝘢𝘣𝘭𝘦 𝘵𝘰 𝘳𝘦𝘵𝘢𝘪𝘯 𝘢 𝘮𝘢𝘫𝘰𝘳 𝘤𝘰𝘳𝘦 𝘰𝘧 𝘰𝘶𝘳 𝘴𝘲𝘶𝘢𝘥.” ❤️
1️⃣3️⃣ Royal Challengers retained. 9️⃣ Indians. 4️⃣… pic.twitter.com/PVXtlBenTZ
2027ರ ಡಬ್ಲ್ಯುಪಿಎಲ್ ಹರಾಜು ಯಾವಾಗ?
2027ರ ಮಹಿಳಾ ಪ್ರೀಮಿಯರ್ ಲೀಗ್ ಐದನೇ ಆವೃತ್ತಿ 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿದೆ. ಆಟಗಾರ್ತಿಯರ ಹರಾಜು 2026ರ ಅಕ್ಟೋಬರ್ 28ರಂದು ಕೊಚ್ಚಿಯ ಗ್ರ್ಯಾಂಡ್ ಹಯಾತ್‌ನಲ್ಲಿ ನಡೆಯಲಿದೆ.
2026ರ ಫೈನಲ್‌ನಲ್ಲಿ ನಾಯಕಿ ಸ್ಮೃತಿ ಮಂಧಾಮಾ 41 ಎಸೆತಗಳಲ್ಲಿ 87 ರನ್ ಸಿಡಿಸಿದರೆ, ಜಾರ್ಜಿಯಾ ವೋಲ್ 79 ರನ್ ಗಳಿಸಿ ಆರ್‌ಸಿಬಿಯ 204 ರನ್‌ಗಳ ಯಶಸ್ವಿ ಚೇಸ್‌ಗೆ ಪ್ರಮುಖ ಕೊಡುಗೆ ನೀಡಿದ್ದರು. ಹೀಗಾಗಿ, ಚಾಂಪಿಯನ್ ತಂಡದ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿರುವ ಆರ್‌ಸಿಬಿ ಇದೀಗ ಹರಾಜಿನಲ್ಲಿ ತನ್ನ ತಂಡವನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸಲಿದೆ.