ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SA) ಸೋಲು ಅನುಭವಿಸುವ ಮೂಲಕ ಭಾರತ ವೈಟ್‌ವಾಷ್ ಆಘಾತ ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC Poits Table) ನೂತನ ಅಂಕ ಪಟ್ಟಿ ಬಿಡುಗಡೆಯಾಗಿದೆ. ಈ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ (India) ಭಾರಿ ಕುಸಿತ ಕಂಡಿದ್ದು, ಪಾಕಿಸ್ತಾನಕ್ಕಿಂತಲೂ ಕೆಳಗಿನ ಐದನೇ ಸ್ಥಾನಕ್ಕೆ ಇಳಿದಿದೆ. ಇನ್ನು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹೊಸ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸಿದೆ. 25 ವರ್ಷಗಳ ಬಳಿಕ ಭಾರತದಲ್ಲಿ ಐತಿಹಾಸಿಕ ಜಯ ಗಳಿಸಿದ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಸ್ಥಾನಕ್ಕೇರಿದೆ. 4 ಟೆಸ್ಟ್ ಪಂದ್ಯಗಳನ್ನಾಡಿರುವ ಹರಿಣ ಪಡೆ 3 ಪಂದ್ಯಗಳಲ್ಲಿ ಗೆದ್ದು 75ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಇನ್ನು ತೃತೀಯ ಸ್ಥಾನದಲ್ಲಿ ಶೇಕಡಾ 66.67ರ ಗೆಲುವಿನ ಸರಾಸರಿ ಹೊಂದಿರುವ ಶ್ರೀಲಂಕಾ ತಂಡವಿದೆ.
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಸೋಲು ಅನುಭವಿಸಿದ ಬಳಿಕ ಈ ಬಾರಿ ಪಾಕಿಸ್ತಾನ ತಂಡ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಪಾಕ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಶೇಕಡಾ 50ರಷ್ಟು ಗೆಲುವಿನ ಸರಾಸರಿಯನ್ನು ಹೊಂದಿದೆ. ಇನ್ನು ಭಾರತ ತಂಡ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಗೆಲುವು, ಒಂದು ಡ್ರಾ, ಮತ್ತು 4 ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಆರನೇ ಸ್ಥಾನದಲ್ಲಿ ಶೇಕಡಾ 36.1ರ ಸರಾಸರಿಯೊಂದಿಗೆ ಇಂಗ್ಲೆಂಡ್ ತಂಡ, ಶೇಕಡಾ 16.67 ಅಂಕಗಳೊಂದಿಗೆ ಬಾಂಗ್ಲಾದೇಶ ಏಳನೇ ಸ್ಥಾನ ಪಡೆದರೆ, ಎಂಟನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಮತ್ತು ಕೊನೆಯದಾಗಿ ನ್ಯೂಜಿಲೆಂಡ್ ತಂಡ ಇನ್ನೂ ಅಂಕಪಟ್ಟಿಯಲ್ಲಿ ಖಾತೆ ತೆರೆದಿಲ್ಲ.
IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್ ಅಶ್ವಿನ್!
5ನೇ ಸ್ಥಾನಕ್ಕೆ ಕುಸಿದ ಟೀಮ್ ಇಂಡಿಯಾ
ಕಳೆದ ಜೂನ್ ತಿಂಗಳಲ್ಲಿ ಶುಭಮನ್ ಗಿಲ್ ಅವರ ನಾಯಕತ್ವದೊಂದಿಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನ ಪ್ರಾರಂಭಿಸಿತ್ತು. ಇಂಗ್ಲೆಂಡ್ ಸರಣಿ ಸಮಬಲಗೊಂಡ ಬಳಿಕ ಭಾರತ ತಂಡ ಇದುವರೆಗೂ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಗೆಲುವು, ಒಂದು ಡ್ರಾ ಮತ್ತು ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ಈ ಕಾರಣದಿಂದಾಗಿ ಭಾರತ ತಂಡ 52ರ ಗೆಲುವಿನ ಸರಾಸರಿ ಮೂಲಕ ಐದನೇ ಸ್ಥಾನಕ್ಕೆ ಇಳಿಸಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸರಣಿ ಆರಂಭವಾಗುವ ಮುನ್ನ ಭಾರತ, ಮೂರನೇ ಸ್ಥಾನದಲ್ಲಿತ್ತು. ಆದರೆ, ಕೊಲ್ಕತಾದಲ್ಲಿ ಮೊದಲ ಪಂದ್ಯದಲ್ಲಿ ಸೋತ ಬಳಿಕ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಎರಡನೇ ಪಂದ್ಯವನ್ನು 408 ರನ್‌ಗಳ ಅಂತರದಿಂದ ಸೋತು ಸರಣಿಯನ್ನು ವೈಟ್‌ವಾಷ್ ಆಘಾತ ಅನುಭವಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ
- ಆಸ್ಟ್ರೇಲಿಯಾ
- ದಕ್ಷಿಣ ಆಫ್ರಿಕಾ
- ಶ್ರೀಲಂಕಾ
- ಪಾಕಿಸ್ತಾನ
- ಭಾರತ
- ಇಂಗ್ಲೆಂಡ್
- ಬಾಂಗ್ಲಾದೇಶ8. ವೆಸ್ಟ್ ಇಂಡೀಸ್
- ನ್ಯೂಜಿಲೆಂಡ್