ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್‌ ಅಶ್ವಿನ್‌!

ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಸೈಮನ್‌ ಹಾರ್ಮರ್‌ ಸ್ಪಿನ್‌ ಮೋಡಿಯ ಪರಿಣಾಮವಾಗಿ ಕೋಲ್ಕತಾ ಮತ್ತು ಗುವಾಹಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಿದ್ದರು. ದಕ್ಷಿಣ ಆಫ್ರಿಕಾ ನಿರಂತರವಾಗಿ ಭಾರತ ತಂಡದ ಮೇಲೆ ಒತ್ತಡ ಹೇರಿತು. ಮುಖ್ಯವಾಗಿ ಭಾರತ ತಂಡದ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾದ ಸ್ಪಿನ್‌ ಬೌಲಿಂಗ್‌ ಸಮರ್ಥವಾಗಿ ಎದುರಿಸದ ಪರಿಣಾಮ ಭಾರತ ಸರಣಿ ಕಳೆದುಕೊಂಡಿತು ಎಂದು ಹೇಳಿದ್ದಾರೆ.

ಭಾರತ ಬ್ಯಾಟ್ಸ್‌ಮನ್‌ಗಳ ಸ್ಪಿನ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಅಶ್ವಿನ್‌!

ಭಾರತ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕುಟುಕಿದ ಆರ್‌ ಅಶ್ವಿನ್‌. -

Profile
Ramesh Kote Nov 27, 2025 11:39 AM

ಮಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ (IND vs SA) ಭಾರತ ತಂಡದ ಕಳಪೆ ಪ್ರದರ್ಶನ ಮಾಜಿ ಆಟಗಾರರ ಅಸಮಧಾನಕ್ಕೆ ಕಾರಣವಾಗಿದೆ. ಬ್ಯಾಟಿಂಗ್‌ ಸ್ನೇಹಿಯಾಗಿದ್ದ ಗುಹವಾಟಿ ಪಿಚ್‌ನಲ್ಲಿ ಟೀಮ್‌ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದ ಪರಿಣಾಮ ಆತಿಥೇಯ ತಂಡ ತವರಿನಲ್ಲಿ ವೈಟ್‌ವಾಷ್‌ ಮುಜುಗರ ಅನುಭವಿಸಿತು. 408 ರನ್‌ಗಳ ಭಾರಿ ಅಂತರದಲ್ಲಿ ಭಾರತ ತಂಡ ಸೋಲು ಕಂಡ ಬಳಿಕ ಸ್ಪಿನ್‌ ದಂತಕಥೆ ಆರ್‌ ಅಶ್ವಿನ್‌ (R Ashwin) ಬ್ಯಾಟರ್‌ಗಳ ಪ್ರದರ್ಶನದ ಕುರಿತು ಬೇಸರ ಹೊರ ಹಾಕಿದ್ದಾರೆ. ಸ್ಪಿನ್ನರ್‌ ಸೈಮನ್‌ ಹಾರ್ಮರ್‌ (Simon Harmer) ಸ್ಪಿನ್‌ ಮೋಡಿಯ ಪರಿಣಾಮವಾಗಿ ಕೊಲ್ಕತ್ತಾ ಮತ್ತು ಗುವಾಹಟಿಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಪರದಾಡಿದ್ದರು. ಅವರಿಗೆ ಸಾಥ್‌ ನೀಡಿದ ಕೇಶವ್‌ ಮಹರಾಜ್‌ ಆರು ವಿಕೆಟ್‌ ಪಡೆದರು.

ಈ ಕುರಿತು ಆಶ್ ಕಿ ಬಾತ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ಸ್ಪಿನ್ನರ್ ಆರ್‌ ಅಶ್ವಿನ್‌, "ವಿಶ್ವದಲ್ಲೇ ಸ್ಪಿನ್‌ ಬೌಲಿಂಗ್‌ಗೆ ಆಡುವ ಅತ್ಯಂತ ಕಳಪೆ ಪ್ರದರ್ಶನ ನೀಡುವ ಬ್ಯಾಟಿಂಗ್‌ ಘಟಕಗಳಲ್ಲಿ ನಮ್ಮದು ಒಂದಾಗಿರಬಹುದು. ಇದು ಹೇಗೆ ಸಂಭವಿಸಿತು? ಇದಕ್ಕೆ ಒಂದು ಕಾರಣವಿದೆ-ನಾವು ಇದರ ಬಗ್ಗೆ ಮೊದಲೇ ಮಾತನಾಡಿದ್ದೇವೆ. ನಮ್ಮ ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಪ್ರತಿಯೊಂದು ಸ್ಥಳದಲ್ಲೂ ತಟಸ್ಥ ಕ್ಯುರೇಟರ್‌ಗಳು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ. ತಟಸ್ಥ ಕ್ಯುರೇಟರ್‌ಗಳು ನಿಜವಾಗಿಯೂ ಕೆಟ್ಟ ವಿಕೆಟ್‌ಗಳನ್ನು ಸಿದ್ಧಪಡಿಸುವುದನ್ನು ತಡೆಯುವುದೇ ಇದಕ್ಕೆ ಕಾರಣ. ಆದರೆ ಅದು ಭಾರತವನ್ನು ವೇಗವಾಗಿ ಆಡಲು ಮತ್ತು ಸೀಮ್ ಬೌಲಿಂಗ್ ಅನ್ನು ಉತ್ತಮವಾಗಿ ಆಡಲು ಸಹಾಯ ಮಾಡುವ ಪ್ರಯತ್ನದ ಜೊತೆಗೆ ನಮ್ಮ ಸ್ಪಿನ್ ಬ್ಯಾಟಿಂಗ್ ಕೌಶಲವನ್ನು ದುರ್ಬಲಗೊಳಿಸಿದೆ. ಉದ್ದೇಶ ಒಳ್ಳೆಯದಾಗಿತ್ತು ಮತ್ತು ಅದಕ್ಕಾಗಿಯೇ ನಾವು ಈಗ ವಿದೇಶದಲ್ಲಿ ಉತ್ತಮವಾಗಿ ಆಡುತ್ತೇವೆ. ಆದರೆ ತವರು ಪರಿಸ್ಥಿತಿಯಲ್ಲಿ ನೀವು ಸ್ಪಿನ್‌ಗೆ ಚೆನ್ನಾಗಿ ಆಡಬೇಕು," ಎಂದು ಅಶ್ವಿನ್ ಹೇಳಿದ್ದಾರೆ.

IND vs SA: ʻಕುಳ್ಳʼ ಎಂದು ನಿಂದಿಸಿದ್ದ ಜಸ್‌ಪ್ರೀತ್‌ ಬುಮ್ರಾಗೆ ತಿರುಗೇಟು ಕೊಟ್ಟ ತೆಂಬಾ ಬವೂಮ!

ದಕ್ಷಿಣ ಆಫ್ರಿಕಾದ ಪ್ರದರ್ಶನಕ್ಕೆ ಅಶ್ವಿನ್‌ ಮೆಚ್ಚುಗೆ

ದಕ್ಷಿಣ ಆಫ್ರಿಕಾ ತಂಡದ ಪ್ರದರ್ಶನವನ್ನು ಶ್ಲಾಘಿಸಿದ ಆರ್‌ ಅಶ್ವಿನ್‌, "ನೀವು ಸ್ಪಿನ್‌ಗೆ ಆಡುವ ಬಗ್ಗೆ ಮಾತನಾಡುವಾಗ, ನೀವು ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಮೂಲಕ ಪ್ರಾರಂಭಿಸಬಾರದು. ದಕ್ಷಿಣ ಆಫ್ರಿಕಾ ಪ್ರತಿ ಸೆಷನ್‌ಗೆ 80 ರನ್ ಗಳಿಸಿ ಮತ್ತು ಅಂತಿಮ ಇನಿಂಗ್ಸ್‌ನಲ್ಲಿ ನಿಮಗೆ 500ಕ್ಕೂ ಹೆಚ್ಚಿನ ಗುರಿಯನ್ನು ನೀಡಿ, ನಿಮ್ಮನ್ನು ಆಕರ್ಷಕ ಟೆಸ್ಟ್‌ ಕ್ರಿಕೆಟ್‌ ವಿಧಾನದ ಮೂಲಕ ನಿಮ್ಮನ್ನು ಸೋಲಿಸಿದ್ದಾರೆ. ಭಾರತದಲ್ಲಿ ನೀವು ಈ ರೀತಿಯ ಕ್ರಿಕೆಟ್‌ ಆಡಬೇಕು," ಎಂದು ತಿಳಿಸಿದ್ದಾರೆ.

IND vs SA: ಎರಡನೇ ಟೆಸ್ಟ್‌ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ರಿಷಭ್‌ ಪಂತ್!‌ ವಿಡಿಯೊ

"ಆಕರ್ಷಕ ಟೆಸ್ಟ್‌ ಕ್ರಿಕೆಟ್‌. ನ್ಯೂಜಿಲೆಂಡ್‌ ತಂಡ ಕನಿಷ್ಠ ಕಾರ್ಯನಿರತವಾಗಿದ್ದು, ನಮ್ಮ ಮೇಲೆ ಒತ್ತಡವನ್ನು ಹೇರಿತ್ತು. ಆದರೆ, ದಕ್ಷಿಣ ಆಫ್ರಿಕಾ ತಂಡ ಈ ರೀತಿ ಮಾಡಲಿಲ್ಲ. ಅವರು ತುಂಬಾ ಆಕರ್ಷಕ ಟೆಸ್ಟ್‌ ಕ್ರಿಕೆಟ್‌ ಆಡಿದ್ದಾರೆ. ಒಂದು ಸೆಷನ್‌ನ 80 ರನ್‌, ಚೆಂಡಿನಲ್ಲಿ ಅಗ್ರ ದರ್ಜೆಯ ಒತ್ತಡವನ್ನು ಹೇರಿದ್ದಾರೆ, ಒಳ್ಳೆಯ ಫೀಲ್ಡ್‌ ಸೆಟ್‌ ಹಾಗೂ ಸ್ಪಿನ್ನರ್‌ಗಳಿಗೆ ದೀರ್ಘಾವಧಿ ಸ್ಪೆಲ್‌ ನೀಡಲಾಗಿದೆ," ಎಂದು ಆರ್‌ ಅಶ್ವಿನ್‌ ಗುಣಗಾನ ಮಾಡಿದ್ದಾರೆ.