ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

WPL 2026: ಉದ್ಘಾಟನಾ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ರಂಜಿಸಲಿರುವ ಯೋ ಯೋ ಹನಿ ಸಿಂಗ್‌, ಜಾಕ್ವೆಲಿನ್‌ ಫರ್ನಾಂಡಿಸ್‌!

2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್‌ ಸ್ಟಾರ್‌ಗಳಾದ ಯೋ ಯೋ ಹನಿ ಸಿಂಗ್‌ ಹಾಗೂ ನಟಿ ಜಾಕ್ವೆಲಿನ್‌ ಫರ್ನಾಡಿಸ್‌ ಭಾಗವಹಿಸಲಿದ್ದು, ಸಂಗೀತ ಮತ್ತು ನೃತ್ಯದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಜನವರಿ 9 ರಂದು ಶುಕ್ರವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

ಡಬ್ಲ್ಯುಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಯೋ ಯೋ ಹನಿ ಸಿಂಗ್‌, ಜಾಕ್ವೆಲಿನ್‌ ಫರ್ನಾಂಡಿಸ್‌ ಭಾಗಿ.

ನವದೆಹಲಿ: ಬಹುನಿರೀಕ್ಷಿತ 2026ರ ಮಹಿಳಾ ಪ್ರೀಮಿಯರ್‌ ಲೀಗ್‌(WPL 2026) ಟೂರ್ನಿಯು ಜನವರಿ 9 ರಂದು ಶುಕ್ರವಾರ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್‌ (MI) ತಂಡಗಳು ಕಾದಾಟ ನಡೆಸುವ ಮೂಲಕ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್‌ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್‌ ಮತ್ತು ಬಾಲಿವುಡ್‌ ಸ್ಟಾರ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ನವ ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್‌ ಅವರು ಉದ್ಘಾಟನಾ ಪಂದ್ಯಕ್ಕೂ ಮುನನ ತಮ್ಮ ಗಾಯನದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಇದಾದ ಬಳಿಕ ಆರ್‌ಸಿಬಿ ಹಾಗೂ ಎಂಐ ತಂಡಗಳು ಕಾದಾಟ ನಡೆಸಲಿವೆ. ಹನಿ ಸಿಂಗ್‌ ಅವರು ಪಂಜಾಬ್‌ ಪಾಪ್‌, ಇಂಡಿಯನ್‌ ಹಿಪ್‌ ಹಾಪ್‌ ಹಾಡುಗಳಾದ ಬ್ರೌನ್‌ ರಂಗ್‌, ಅಗ್ರೇಜಿ ಬೀಟ್‌ ಹಾಗೂ ಲುಂಗಿ ಡ್ಯಾನ್ಸ್‌ ಸೇರಿದಂತೆ 2010ರಲ್ಲಿ ಖ್ಯಾತಿ ಗಳಿಸಿದ್ದ ಹಾಡುಗಳನ್ನು ಹಾಡಬಹುದು.

ಇನ್ನು ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ವಿಶೇಷ ಕಾರ್ಯಕ್ರಮವನ್ನು ಕೊಡಲಿದ್ದಾರೆ. ಇವರು ತಮ್ಮ ಡ್ಯಾನ್ಸ್‌ ಮೂಲಕ ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಈ ಇಬ್ಬರು ಸ್ಟಾರ್‌ಗಳ ಕಾರ್ಯಕ್ರಮದ ಮೂಲಕ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಅದ್ದೂರಿಯಾಗಿ ಆರಂಭಿಸಲು ಬಿಸಿಸಿಐ ಎದುರು ನೋಡುತ್ತಿದೆ.

ಐಪಿಎಲ್‌ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್‌ ರೆಹಮಾನ್‌!

ಜನವರಿ 9 ರಿಂದ ಫೆಬ್ರವರಿ 5 ರವರೆಗೆ ನವ ಮುಂಬೈ ಮತ್ತು ವಡೋದರಾದಲ್ಲಿ ನಡೆಯುವ ಈ ಟೂರ್ನಿಯಲ್ಲಿ ಡಬ್ಲ್ಯುಪಿಎಲ್‌ ಅತ್ಯಂತ ಸ್ಪರ್ಧಾತ್ಮಕ ಆವೃತ್ತಿಗೆ ಸಜ್ಜಾಗಿದೆ. ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜಯಂಟ್ಸ್‌ ಮತ್ತು ಯುಪಿ ವಾರಿಯರ್ಸ್‌ ಸೇರಿ ಒಟ್ಟು 5 ತಂಡಗಳು ಟೂರ್ನಿಯಲ್ಲಿ ಕಾದಾಟ ನಡೆಸಲಿವೆ. ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ತಂಡಗಳು ಕಾದಾಟ ನಡೆಸಲಿವೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಫೈನಲ್‌ಗೆ ನೇರವಾಗಿ ತಲುಪಲಿದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಫೆಬ್ರವರಿ 3 ರಂದು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗುತ್ತವೆ.

ನವದೆಹಲಿಯಲ್ಲಿ ನಡೆದಿದ್ದ ಮೆಗಾ ಹರಾಜಿನ ನಂತರ ತಂಡಗಳನ್ನು ಗಮನಾರ್ಹವಾಗಿ ಮರುರೂಪಿಸಲಾಗಿದೆ. ಸಾಬೀತಾಗಿರುವ ಅಂತಾರಾಷ್ಟ್ರೀಯ ತಾರೆಗಳನ್ನು ಉದಯೋನ್ಮುಖ ಭಾರತೀಯ ಪ್ರತಿಭೆಗಳೊಂದಿಗೆ ಸಂಯೋಜಿಸಲಾಗಿದೆ ಮತ್ತು ನಿಕಟ ಸ್ಪರ್ಧೆಗಳು ಮತ್ತು ಆಳವಾದ ಯುದ್ಧತಂತ್ರದ ಯುದ್ಧಗಳ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಲೀಗ್‌ನ ವಿಸ್ತರಿಸುತ್ತಿರುವ ವಾಣಿಜ್ಯ ಹೆಜ್ಜೆಗುರುತು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ತ್ವರಿತ ಏರಿಕೆಯನ್ನು ಮತ್ತಷ್ಟು ಒತ್ತಿ ಹೇಳುತ್ತದೆ.

ʻದೇಶ ನನಗೆ ಮೊದಲುʼ-ಬಿಪಿಎಲ್‌ನಿಂದ ಹೊರ ನಡೆದ ಬಗ್ಗೆ ನಿರೂಪಕಿ ರಿಧಿಮಾ ಪಠಾಕ್‌ ಸ್ಪಷ್ಟನೆ!

ಅಂತಾರಾಷ್ಟ್ರೀಯ ಸ್ಟಾರ್‌ ಆಟಗಾರ್ತಿಯರಾದ ಸ್ಮೃತಿ ಮಂಧಾನಾ, ಹರ್ಮನ್‌ಪ್ರೀತ್‌ ಕೌರ್‌, ಮೆಗ್‌ ಲ್ಯಾನಿಂಗ್‌ ಹಾಗೂ ಜೆಮಿಮಾ ರೊಡ್ರಿಗಸ್‌ ಅವರು ತಮ್ಮ-ತಮ್ಮ ತಂಡಗಳನ್ನು ಮುನ್ನಡೆಲಿದ್ದಾರೆ.

ವಿದೇಶಿ ಆಟಗಾರ್ತಿಯರು ಮತ್ತು ಹೊಸ ತಲೆಮಾರಿನ ಭಾರತೀಯ ಕ್ರಿಕೆಟಿಗರು ತಮ್ಮ ಛಾಪು ಮೂಡಿಸಲು ಸಿದ್ಧರಿದ್ದು, 2026ರ ಡಬ್ಲ್ಯುಪಿಎಲ್‌, ಪವರ್-ಹಿಟ್ಟಿಂಗ್, ಸ್ಮಾರ್ಟ್ ಬೌಲಿಂಗ್ ಮತ್ತು ಹೈ-ಪ್ರೆಶರ್ ಟಿ20 ಹೈಡ್ರಾಮಾ ಆಕರ್ಷಕ ಮಿಶ್ರಣದ ಭರವಸೆಯನ್ನು ನೀಡುತ್ತದೆ. 2026ರ ಟಿ20 ವಿಶ್ವಕಪ್‌ಗೂ ಮುಂಚಿತವಾಗಿ ಆಯ್ಕೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.