ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಪಿಎಲ್‌ ತೊರೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸೇರ್ಪಡೆಯಾದ ಮುಸ್ತಾಫಿಝುರ್‌ ರೆಹಮಾನ್‌!

Mustafizur Rahman joins PSL:ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಕೋಲ್ಕತ ನೈಟ್‌ ರೈಡರ್ಸ್‌ ತಂಡ ಕೈ ಬಿಟ್ಟ ಬೆನ್ನಲ್ಲೆ ಬಾಂಗ್ಲಾದೇಶ ತಂಡದ ವೇಗದ ಬೌಲರ್‌ ಮುಸ್ತಾಫಿಝುರ್‌ ರೆಹಮಾನ್‌ ಅವರು ಪಾಕಿಸ್ತಾನ ಸೂಪರ್‌ ಲೀಗ್‌ಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಬಿಸಿಸಿಐಗೆ ಬಾಂಗ್ಲಾ ವೇಗಿ ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಸೂಪರ್‌ ಲೀಗ್‌ಗೆ ಮುಸ್ತಾಫಿಝುರ್‌ ರೆಹಮಾನ್‌ ಸೇರ್ಪಡೆ!

ಪಾಕಿಸ್ತಾನ ಸೂಪರ್‌ ಲೀಗ್‌ ಆಡಲಿರುವ ಮುಸ್ತಾಫಿಝುರ್‌ ರೆಹಮಾನ್‌. -

Profile
Ramesh Kote Jan 7, 2026 4:09 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026) ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡ ಬಾಂಗ್ಲಾದೇಶ ಹಿರಿಯ ವೇಗಿ ಮುಸ್ತಾಫಿಝುರ್‌ ರೆಹಮಾನ್‌ (Mustafizur Rahman) ಅವರನ್ನು ಕೈ ಬಿಟ್ಟಿದೆ. ಇದರ ಬೆನ್ನಲ್ಲೆ ಬಾಂಗ್ಲಾ ವೇಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರು ಭಾರತದ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ ಆಡಲು ಸಜ್ಜಾಗುತ್ತಿದ್ದಾರೆ. ಆ ಮೂಲಕ ಬಿಸಿಸಿಐಗೆ ಮುಸ್ತಾಪಿಝುರ್‌ ರೆಹಮಾನ್‌ ಬಿಸಿಸಿಐಗೆ ತಿರುಗೇಟು ನೀಡಿದ್ದಾರೆ. ಅಂದ ಹಾಗೆ ರೆಹಮಾನ್‌ ಅವರನ್ನು ಐಪಿಎಲ್‌ನಿಂದ ಏಕೆ ಬಿಡುಗಡೆ ಮಾಡಲಾಗುತ್ತಿದೆ ಎಂಬುದಕ್ಕೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲ.

ಕಳೆದ ವರ್ಷ ಡಿಸೆಂಬರ್‌ 16 ರಂದು ಅಬುಧಾಬಿಯಲ್ಲಿ ನಡೆದಿದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಮಿನಿ ಹರಾಜಿನಲ್ಲಿ ಕೋಲ್ಕತಾ ಫ್ರಾಂಚೈಸಿಯು 9.20 ಕೋಟಿ ರು. ಗಳನ್ನು ನೀಡಿ ಮುಸ್ತಾಫಿಝುರ್‌ ರೆಹಮಾನ್‌ ಅವರನ್ನು ಖರೀದಿಸಿತ್ತು. ಆದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದಿಂದ ಬೇಸತ್ತ ಬಿಸಿಸಿಐ ಈ ನಿರ್ಧಾರವನ್ನು ತಗೆದುಕೊಂಡಿರಬೇಕೆಂದು ಅಂದಾಜಿಸಲಾಗುತ್ತದೆ.

ಭಾರತದಿಂದ ಟಿ20 ವಿಶ್ವಕಪ್ ಪಂದ್ಯ ಸ್ಥಳಾಂತರಿಸುವ ಬಾಂಗ್ಲಾದ ಮನವಿ ತಿರಸ್ಕರಿಸಿದ ಐಸಿಸಿ

ಐಪಿಎಲ್‌ನಿಂದ ಹೊರನಡೆದ ಬೆನ್ನಲ್ಲೆ ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದ ಮೂಲಕ ಮುಸ್ತಾಫಿಝುರ್ ರೆಹಮಾನ್‌ ಮುಂದಿನ ಆವೃತ್ತಿಯ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ದೃಢಪಡಿಸಿತು. ಆದರೆ, ಪಿಎಸ್‌ಎಲ್ ಡ್ರಾಫ್ಟ್ ಇನ್ನೂ ನಡೆಯುವುದು ಬಾಕಿ ಇದೆ. ಜನವರಿ 21 ರಂದು ಪಿಎಸ್‌ಎಲ್‌ ಡ್ರಾಫ್ಟ್‌ ನಡೆಯಲಿದ್ದು, ಎಂಟು ವರ್ಷಗಳ ಬಳಿಕ ಮುಸ್ತಾಫೀಝುರ್‌ ರೆಹಮಾನ್‌ ಪಾಕಿಸ್ತಾನ ಸೂಪರ್‌ ಲೀಗ್‌ಗೆ ಮರಳುತ್ತಿದ್ದಾರೆ. ಕೊನೆಯ ಬಾರಿ ಈ ಟೂರ್ನಿಯಲ್ಲಿ ಅವರು ಕ್ವಾಲೆಂಡರ್ಸ್‌ ಪರ ಆಡಿದ್ದರು.

ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಭಾವಹಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಪರಿಸ್ಥಿತಿ ಈ ರೀತಿ ಇದ್ದರೂ ಮುಸ್ತಾಫಿಝುರ್‌ ರೆಹಮಾನ್‌ ಅವರು ಪಿಎಸ್‌ಎಲ್‌ ಆಡಲು ನಿರ್ಧರಿಸಿದ್ದಾರೆ. ಐಸಿಸಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಆನ್‌ಲೈನ್‌ ಮೀಟಿಂಗ್‌ನಲ್ಲಿ ಚರ್ಚೆ ನಡೆಸಿದ್ದವು. ಆದರೂ ಬಾಂಗ್ಲಾ ತಂಡದ ಭಾಗವಹಿಸುವಿಕೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಕೆಕೆಆರ್‌ನಿಂದ ರಿಲೀಸ್‌ ಆದ 9 ಕೋಟಿ ರು ಬೆಲೆಯ ಮುಸ್ತಾಫಿಝುರ್‌ ರೆಹಮಾನ್‌ಗೆ ಪರಿಹಾರ ಸಿಗುತ್ತಾ?

ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ವಿಶ್ವಕಪ್ ಗ್ರೂಪ್ ಹಂತದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಔಪಚಾರಿಕವಾಗಿ ವಿನಂತಿಸಿದೆ. ಬಾಂಗ್ಲಾದೇಶ ಪ್ರಸ್ತುತ ಕೋಲ್ಕತ್ತಾದಲ್ಲಿ ಮೂರು ಪಂದ್ಯಗಳನ್ನು ಆಡಲಿದ್ದು, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಸೇರಿದಂತೆ, ನೇಪಾಳ ವಿರುದ್ಧದ ಮತ್ತೊಂದು ಪಂದ್ಯವನ್ನು ಮುಂಬೈನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಕ್ಕೆ ಸ್ಥಳಾಂತರಿಸುವುದರಿಂದ ಹಿಡಿದು, ಭಾರತಕ್ಕೆ ಭೇಟಿ ನೀಡಿ ಭದ್ರತಾ ಪರಿಸ್ಥಿತಿಯನ್ನು ನಿರ್ಣಯಿಸಲು ಬಿಸಿಬಿ ನಿಯೋಗವನ್ನು ಕೇಳುವವರೆಗೆ ಐಸಿಸಿ ಈಗ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಇನ್ನೂ ಅಸಂಭವವಾಗಿದ್ದರೂ, ಯಾವುದೇ ಒಪ್ಪಂದಕ್ಕೆ ಬರದಿದ್ದರೆ ಬಾಂಗ್ಲಾದೇಶವನ್ನು ಟೂರ್ನಿಯಿಂದ ಹಿಂತೆಗೆದುಕೊಳ್ಳಲಾಗುವುದು ಎಂಬುದಕ್ಕೆ ಇದು ಒಂದು ದೊಡ್ಡ ಕಾರಣವಾಗಿದೆ.