ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಹೌದು! ನಿಮಗೆ ಕುಟುಂಬದ ಅಗತ್ಯವಿದೆ ಆದರೆ...ʼ: ವಿರಾಟ್‌ ಕೊಹ್ಲಿ ಹೇಳಿಕೆಗೆ ಕಪಿಲ್‌ ದೇವ್‌ ಪ್ರತಿಕ್ರಿಯೆ!

ಕ್ರಿಕೆಟಿಗರು ತಮ್ಮ ಕುಟುಂಬಗಳನ್ನು ವಿದೇಶ ಪ್ರವಾಸಗಳಿಗೆ ಕರೆದೊಯ್ಯುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಬೆಂಬಲಿಸಿದ್ದಾರೆ. ಭಾರತ ತಂಡದ ಪ್ರವಾಸ 45ಕ್ಕೂ ಅಧಿಕವಾಗಿದ್ದರೆ, ಆಗ ಆರಂಭಿಕ ಎರಡು ವಾರಗಳ ಕಾಲ ಆಟಗಾರರು ತಮ್ಮ ಕುಟುಂಬಗಳ ಜೊತೆ ಇರಲು ಬಿಸಿಸಿಐ ನಿಯಮ ಜಾರಿ ಮಾಡಿದೆ. ಈ ಬಗ್ಗೆ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಭಾರತದ ಮಾಜಿ ನಾಯಕ ಕಪಿಲ್‌ ದೇವ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ʻಕುಟುಂಬದ ಜೊತೆಗೆ ತಂಡ ಕೂಡ ಮುಖ್ಯʼ: ಕಪಿಲ್‌ ದೇವ್‌!

ತಂಡದ ಜೊತೆ ಕುಟುಂಬದ ಸದಸ್ಯರು ಇರಬೇಕೆಂದ ವಿರಾಟ್‌ ಕೊಹ್ಲಿ ಹೇಳಿಕೆಗೆ ಕಪಿಲ್‌ ದೇವ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

Profile Ramesh Kote Mar 18, 2025 7:18 PM

ನವದೆಹಲಿ: ಆಟಗಾರರು ತಮ್ಮ ಕುಟುಂಬಗಳೊಂದಿಗೆ ವಿದೇಶಿ ಪ್ರವಾಸಕ್ಕೆ ಹೋಗುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ (Kapil Dev) ಬೆಂಬಲಿಸಿದ್ದಾರೆ. ಆದರೆ ಈ ವಿವಾದಾತ್ಮಕ ವಿಷಯವನ್ನು ನಿಭಾಯಿಸುವಲ್ಲಿ ಬಿಸಿಸಿಐ ಸಮತೋಲಿತ ವಿಧಾನವನ್ನು ಕೂಡ ಅನುಸರಿಸಬೇಕೆಂದು ಅವರು ಕರೆ ನೀಡಿದ್ದಾರೆ. ಈ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 1-3 ಅಂತರದಲ್ಲಿ (IND vs AUS) ಟೆಸ್ಟ್ ಸರಣಿ ಸೋಲಿನ ನಂತರ ಬಿಸಿಸಿಐ (BCCI) ತನ್ನ ನಿಯಮಗಳನ್ನು ಬದಲಿಸಿಕೊಂಡಿದೆ. ಅದೇನೆಂದರೆ ವಿದೇಶಿ ಪ್ರವಾಸ 45 ದಿನಗಳಿಗಿಂತ ಅಧಿಕವಾಗಿದ್ದರೆ, ಆಟಗಾರರ ಎರಡು ವಾರಗಳ ಕಾಲ ತಮ್ಮ ಕುಟುಂಬದ ಸದಸ್ಯರ ಜೊತೆ ಸಮಯ ಕಳೆಯಬಹುದು.

ಬಿಸಿಸಿಐನ ಹೊಸ ನಿಯಮದ ಪ್ರಕಾರ ಆಟಗಾರರು ತಮ್ಮ ಕುಟುಂಬಗಳ ಜೊತೆ ಗರಿಷ್ಠ 14 ದಿನಗಳು ಮಾತ್ರ ಇರಬಹುದು. ಕಡಿಮೆ ಅವಧಿಯ ಪ್ರವಾಸಗಳಲ್ಲಿ ಆಟಗಾರರು ತಮ್ಮ ಕುಟುಂಬದ ಸಮಸ್ಯರನ್ನು ಗರಿಷ್ಠ ಒಂದು ವಾರದವರೆಗೆ ಕರೆತರಬಹುದು. ಆಟಗಾರರಿಗೆ ಕುಟುಂಬ ಅಗತ್ಯ, ಆದರೆ ತಂಡ ಕೂಡ ಮುಖ್ಯ ಎಂಬುದನ್ನು ಕಪಿಲ್ ದೇವ್ ಬಲವಾಗಿ ಪ್ರತಿಪಾದಿಸಿದ್ದಾರೆ.

"ನನಗೆ ಗೊತ್ತಿಲ್ಲ, ಅದು ವೈಯಕ್ತಿಕ ವಿಷಯ. ಇದು ಕ್ರಿಕೆಟ್ ಮಂಡಳಿಯ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಇದರರ್ಥ ಕುಟುಂಬವನ್ನು ತನ್ನೊಂದಿಗೆ ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದು ಆಟಗಾರನಿಗೆ ಬಿಟ್ಟದ್ದು. ಆದರೆ ಅಂತಿಮ ನಿರ್ಧಾರವನ್ನು ಕ್ರಿಕೆಟ್ ಮಂಡಳಿ ಮಾತ್ರ ತೆಗೆದುಕೊಳ್ಳುತ್ತದೆ," ಎಂದು 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ಕಪಿಲ್‌ ದೇವ್‌ ಹೇಳಿದ್ದಾರೆ.

'ಈ ಸಲ ಕಪ್‌ ನಮ್ದೆ' ಎಂದು ಕರೆಯಬೇಡಿ ಎಂದು ವಿರಾಟ್‌ ಕೊಹ್ಲಿ ನನಗೆ ಹೇಳಿದ್ದಾರೆ: ಎಬಿಡಿ!

ತಂಡಕ್ಕೆ ಮೊದಲ ಆದ್ಯತೆ: ಕಪಿಲ್ ದೇವ್

"ನಿಮಗೆ ಕುಟುಂಬದ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ಆದರೆ, ಇದೇ ಸಮಯದಲ್ಲಿ ನಿಮಗೆ ಎಲ್ಲಾ ಸಮಯದಲ್ಲಿಯೂ ತಂಡದ ಅಗತ್ಯವಿದೆ," ಎಂದು ಕಪಿಲ್‌ ದೇವ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಮಯದಲ್ಲಿ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಂತಹ ಆಟಗಾರರು ದುಬೈನಲ್ಲಿ ತಮ್ಮ-ತಮ್ಮ ಕುಟುಂಬಗಳ ಜೊತೆ ಪ್ರತ್ಯೇಕವಾಗಿ ಉಳಿದುಕೊಂಡಿದ್ದರು. ಆದರೆ ಅವರು ತಂಡದ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿಲ್ಲ. ಅವರ ಎಲ್ಲಾ ವೆಚ್ಚವನ್ನು ಬಿಸಿಸಿಐ ಭರಿಸುತ್ತಿರಲಿಲ್ಲ, ಬದಲಾಗಿ ಆಟಗಾರರೇ ಭರಿಸಿದ್ದರು.

ಕ್ರಿಕೆಟ್ ಮೊದಲು - ಕಪಿಲ್ ದೇವ್

"ನಮ್ಮ ಕಾಲದಲ್ಲಿ ಪ್ರವಾಸದ ಮೊದಲ ಭಾಗ ಕ್ರಿಕೆಟ್‌ ಕಡೆಗೆ ಹೆಚ್ಚು ಗಮನ ಕೊಡಬೇಕೇ ಹೊರತು ಕ್ರಿಕೆಟ್ ಮಂಡಳಿಗಲ್ಲ ಎಂದು ನಮಗೆ ನಾವೇ ಹೇಳಿಕೊಳ್ಳುತ್ತಿದ್ದೆವು," ಎಂದ ಕಪಿಲ್ ದೇವ್‌, ಎರಡನೇ ಭಾಗದಲ್ಲಿ ಕುಟುಂಬ ಇಲ್ಲಿಗೆ ಬರಬಹುದಿತ್ತು ಹಾಗೂ ಪ್ರವಾಸವನ್ನು ಆನಂದಿಸಬೇಕಿತ್ತು. ಅಂದರೆ ಕುಟುಂಬ ಮತ್ತು ಕ್ರಿಕೆಟ್‌ ಎರಡೂ ಮಿಶ್ರಣವಾಗಿರಬೇಕು. ಮೊದಲು ಕ್ರಿಕೆಟ್‌ನತ್ತ ಗಮನಹರಿಸಿ, ನಂತರ ಕುಟುಂಬದೊಂದಿಗೆ ಸಮಯ ಕಳೆಯಿರಿ ಎಂದರ್ಥ," ಎಂದು ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

IPL 2025: ತಾನು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಹೆಸರಿಸಿದ ವಿರಾಟ್‌ ಕೊಹ್ಲಿ!

ಕುಟುಂಬದ ಸದಸ್ಯರ ಉಪಸ್ಥಿತಿಯನ್ನು ಬೆಂಬಲಿಸಿದ ಕೊಹ್ಲಿ

ಪ್ರವಾಸದ ಸಮಯದಲ್ಲಿ ಆಟಗಾರರು ತಮ್ಮ ಕುಟುಂಬಗಳೊಂದಿಗೆ ಇರಬೇಕೆಂಬ ಕಲ್ಪನೆಯನ್ನು ವಿರಾಟ್ ಕೊಹ್ಲಿ ಕೂಡ ಬೆಂಬಲಿಸಿದ್ದಾರೆ. ಹೋಟೆಲ್‌ನಲ್ಲಿ ಒಬ್ಬಂಟಿಯಾಗಿರುವುದಕ್ಕಿಂತ ಕಠಿಣ ಅವಧಿಯಲ್ಲಿ ತನ್ನ ಸುತ್ತಲೂ ವೈಯಕ್ತಿಕ ಬೆಂಬಲವಿರಲು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದರು. "ನನ್ನ ಹೋಟೆಲ್ ಕೋಣೆಯಲ್ಲಿ ಒಬ್ಬಂಟಿಯಾಗಿರುವುದಕ್ಕಿಂತ ಮೈದಾನದಲ್ಲಿ ಕಷ್ಟಕರ ಮತ್ತು ಒತ್ತಡದ ಸನ್ನಿವೇಶಗಳನ್ನು ಮೆಟ್ಟಿ ನಿಲ್ಲಲು ಕುಟುಂಬದ ಸದಸ್ಯರ ಉಪಸ್ಥಿತಿ ನೆರವು ನೀಡುತ್ತದೆ. ಹಾಗಾಗಿ ಪ್ರವಾಸದ ವೇಳೆ ಕುಟುಂಬದ ಸದ್ಯರ ಉಪಸ್ಥಿತಿ ಸಹಾಯವಾಗಲಿದೆ," ಎಂದು ವಿರಾಟ್‌ ಕೊಹ್ಲಿ ಹೇಳಿದ್ದರು.