ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ (IND vs WI) ನಡುವಣ ಎರಡನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಅಂತಿಮ ಹಂತಕ್ಕೆ ತಲುಪಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ಅಂದ ಹಾಗೆ ಪಂದ್ಯದ ವೇಳೆ ಟೀಮ್ ಇಂಡಿಯಾ (India) ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ (Sai Sudarshan) ಅವರ ವಿಡಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರು ಬೌಂಡರಿ ಲೈನ್ ಬಳಿ ಕುಳಿತು ಸ್ಯಾಂಡ್ ವಿಚ್ ತಿನ್ನುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪಂದ್ಯದ ಎರಡನೇ ದಿನ ಜಾನ್ ಕ್ಯಾಂಪ್‌ಬೆಲ್ ಅವರ ಕ್ಯಾಚ್ ಅನ್ನು ಶಾರ್ಟ್ ಲೆಗ್‌ನಲ್ಲಿ ಸಾಯಿ ಸುದರ್ಶನ್ ಅದ್ಭುತವಾಗಿ ಪಡೆದಿದ್ದರು. ಇದಾದ ಬಳಿಕ ಶಾರ್ಟ್ ಲೆಗ್‌ನಲ್ಲಿ ಅವರು ಸಣ್ಣ ಗಾಯಕ್ಕೆ ತುತ್ತಾಗಿದ್ದರು ಹಾಗೂ ತದನಂತರ ಅವರು ಮೈದಾನಕ್ಕೆ ಆಗಮಿಸಿರಲಿಲ್ಲ. ನಂತರ ಡ್ರೆಸ್ಸಿಂಗ್ ರೂಂನಲ್ಲಿಯೇ ಸಮಯವನ್ನು ಕಳೆಯುವಂತಾಗುತ್ತು ಹಾಗೂ ಇವರ ಬದಲು ದೇವದತ್ ಪಡಿಕ್ಕಲ್ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದರು.
IND vs WI: ಇದೇ ಮೊದಲ ಬಾರಿ 100 ರನ್ ಕೊಟ್ಟು ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಕುಲ್ದೀಪ್ ಯಾದವ್!
ಸಾಯಿ ಸುದರ್ಶನ್ ಅವರು ನಂತರ ಬೌಂಡರಿ ಲೈನ್ ಬಳಿ ಕುಳಿತಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಅವರು ಬೌಂಡರಿ ಲೈನ್ ಪಕ್ಕ ಪಿಚ್ ಮೇಲೆ ಹೊದಿಸುವುದು ಪ್ಲಾಸ್ಟಿಕ್ ಕವರ್ ಮುಂದೆ ಕುಳಿತಿದ್ದರು ಹಾಗೂ ಸ್ಯಾಂಡ್‌ವಿಚ್ ತಿನ್ನುತ್ತಾ ತಮ್ಮ ಸಮಯವನನು ಆನಂದಿಸುತ್ತಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಒಬ್ಬ ಅಭಿಮಾನಿಯೊಬ್ಬ, ಸಾಯಿ ಸುದರ್ಶನ್‌ಗೆ ನೀವು ಗುಜರಾತ್ ಟೈಟನ್ಸ್ ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಡಿ ಎಂದು ಹೇಳುತ್ತಿದ್ದರು. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೆಸ್ಟ್ ಇಂಡೀಸ್ 390ಕ್ಕೆ ಆಲ್‌ಔಟ್
ವೆಸ್ಟ್ ಇಂಡೀಸ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿ 390 ರನ್‌ಗಳನ್ನು ಕಲೆ ಹಾಕಿತು. ಆದರೂ ಪ್ರಥಮ ಇನಿಂಗ್ಸ್‌ನಲ್ಲಿನ ಭಾರಿ ಹಿನ್ನಡೆಯ ಕಾರಣ ಭಾರತಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡಬೇಕಾಯಿತು. ವಿಂಡೀಸ್ ಪರ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಅವರು ತಲಾ ಶತಕಗಳನ್ನು ಬಾರಿಸಿದರು. ಜಸ್ಟಿನ್ ಗ್ರೀವ್ಸ್ 50 ರನ್ ಹಾಗೂ ಜೇಡನ್ ಸೀಲ್ಸ್ 32 ರನ್‌ಗಳನ್ನು ಕಲೆ ಹಾಕಿದರು.
IND vs WI: ವಿಂಡೀಸ್ 390ಕ್ಕೆ ಆಲ್‌ಔಟ್, ಎರಡನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ ತಂಡ!
ಗೆಲುವಿನ ಸನಿಹದಲ್ಲಿ ಟೀಮ್ ಇಂಡಿಯಾ
121 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ನಾಲ್ಕನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 63 ರನ್‌ಗಳನ್ನು ಕಲೆ ಹಾಕಿದೆ. ಭಾರತ ತಂಡಕ್ಕೆ ಇನ್ನೂ 58 ರನ್‌ಗಳ ಅಗತ್ಯವಿದೆ. ಕೆಎಲ್ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ಅವರು ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೊದಲನೇ ಪಂದ್ಯವನ್ನು ಗೆದ್ದಿರುವ ಭಾರತ ತಂಡ, ಇದೀಗ ಎರಡನೇ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ.