IND vs WI: ವಿಂಡೀಸ್ 390ಕ್ಕೆ ಆಲ್‌ಔಟ್, ಎರಡನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ ತಂಡ!
IND vs WI 2nd Test Day 4 Highlights: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ತಂಡ ಗೆಲುವಿನ ಸನಿಹದಲ್ಲಿದೆ. ವಿಂಡೀಸ್ ದ್ವಿತೀಯ ಇನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಭಾರತಕ್ಕೆ ಕೇವಲ 121 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ, ನಾಲ್ಕನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 63 ರನ್‌ಗಳನ್ನು ಗಳಿಸಿದೆ. ಆ ಮೂಲಕ ಐದನೇ ದಿನ ಗೆಲ್ಲಲು ಕೇವಲ 58 ರನ್‌ಗಳ ಅಗತ್ಯವಿದೆ.

ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಭಾರತ ತಂಡ. -

ನವದೆಹಲಿ: ಜಾನ್ ಕ್ಯಾಂಪ್‌ಬೆಲ್ (John Campbell) ಹಾಗೂ ಶೇಯ್ ಹೋಪ್ (Shai Hope) ಅವರ ಶತಕಗಳ ಬಲದಿಂದ ವೆಸ್ಟ್ ಇಂಡೀಸ್ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ (IND vs WI) ದೊಡ್ಡ ಮೊತ್ತವನ್ನು ಕಲೆ ಹಾಕಿದರೂ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಆ ಮೂಲಕ ಶುಭಮನ್ ಗಿಲ್ (Shubman Gill) ನಾಯಕತ್ವದ ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಗೆಲುವಿನ ಸನಿಹದಲ್ಲಿದೆ. ಸುಲಭ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ನಾಲ್ಕನೇ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ ಹಾಗೂ ಐದನೇ ದಿನ ಪಂದ್ಯವನ್ನು ಗೆಲ್ಲಲು ಆತಿಥೇಯರಿಗೆ ಕೇವಲ 58 ರನ್‌ಗಳ ಅಗತ್ಯವಿದೆ.
ವೆಸ್ಟ್ ಇಂಡೀಸ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಭಾರತಕ್ಕೆ ಕೇವಲ 121 ರನ್‌ಗಳ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡದ ಯಶಸ್ವಿ ಜೈಸ್ವಾಲ್ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಬಂದ ಸಾಯಿ ಸುದರ್ಶನ್ ಹಾಗೂ ಕೆಎಲ್ ರಾಹುಲ್ ಜೋಡಿ ಉತ್ತಮ ಆಟವನ್ನು ಆಡಿತು. ಸುದರ್ಶನ್ ಅಜೇಯ 30 ರನ್ ಗಳಿಸಿದರೆ, ಕೆಎಲ್ ರಾಹುಲ್ ಅಜೃಏಯ 25 ರನ್ ಗಳಿಸಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ, ಒಂದು ವಿಕೆಟ್ ನಷ್ಟಕ್ಕೆ 18 ಓವರ್‌ಗಳಿಗೆ 63 ರನ್‌ಗಳನ್ನು ಗಳಿಸಿದೆ. ಅಂದ ಹಾಗೆ ಐದನೇ ದಿನ ಮೊದಲ ಸೆಷನ್‌ನಲ್ಲಿ ಭಾರತ ತಂಡ, ಎರಡನೇ ಪಂದ್ಯವನ್ನು ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲಿದೆ.
IND vs WI: ಜೈಸ್ವಾಲ್ ಮೇಲೆ 'ಅಪಾಯಕಾರಿ' ಎಸೆತ; ಜೇಡನ್ ಸೀಲ್ಸ್‌ಗೆ ದಂಡ
390 ರನ್‌ಗಳನ್ನು ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಸೋಮವಾರ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಎರಡು ವಿಕೆಟ್ ನಷ್ಟಕ್ಕೆ 173 ರನ್‌ಗಳಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಮೊದಲನೇ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಅವರು ನಾಲ್ಕನೇ ತಮ್ಮ-ತಮ್ಮ ಶತಕಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ವಿಂಡೀಸ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 118.5 ಓವರ್‌ಗಳಿಗೆ 390 ರನ್‌ಗಳಿಗೆ ಆಲ್ಔಟ್ ಆಯಿತು. ಆದರೂ ಎದುರಾಳಿ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು. ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಜಸ್‌ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಿತ್ತರು.
That's Stumps on Day 4⃣
— BCCI (@BCCI) October 13, 2025
Sai Sudharsan and KL Rahul with a solid unbeaten stand🤝#TeamIndia inching closer to victory 👍
Scorecard ▶ https://t.co/GYLslRyLf8#INDvWI | @IDFCFIRSTBank pic.twitter.com/w0mlJUWemx
ಭರ್ಜರಿ ಶತಕ ಸಿಡಿಸಿದ್ದ ಕ್ಯಾಂಪ್‌ಬೆಲ್, ಹೋಪ್
ನಾಲ್ಕನೇ ದಿನ ಕ್ರೀಸ್‌ಗೆ ಆಗಮಿಸಿದ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಜೋಡಿ ಅದ್ಭುತ ಬ್ಯಾಟಿಂಗ್‌ದ ಪ್ರದರ್ಶನವನ್ನು ತೋರಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 177 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ವಿಂಡೀಸ್‌ಗೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಅದ್ಭುತ ಬ್ಯಾಟ್ ಮಾಡಿದ ಜಾನ್ ಕ್ಯಾಂಪ್ ಬೆಲ್ 214 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುತಿದ್ದ ಶೇಯ್ ಹೋಪ್ ಕೂಡ ಉತ್ತಮ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 214 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 103 ರನ್‌ಗಳನ್ನು ಗಳಿಸಿದರು. ನಂತರ ಅವರು ಮೊಹಮ್ಮದ್ ಸಿರಾಜ್‌ಗೆ ಕ್ಲೀನ್ ಬೌಲ್ಡ್ ಆದರು.
An important innings in the scope of the contest. #INDvWI | #MenInMaroon pic.twitter.com/3hKjP0x7MT
— Windies Cricket (@windiescricket) October 13, 2025
ಜಸ್ಟಿನ್ ಗ್ರೀವ್ಸ್ ಅರ್ಧಶತಕ
ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟ್ ಮಾಡುತ್ತಿರುವ ಜಸ್ಟಿನ್ ಗ್ರೀವ್ಸ್ ಅವರು ಎರಡನೇ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಚೆನ್ನಾಗಿ ಬ್ಯಾಟ್ ಮಾಡಿದರು. ಇವರು ಕೊನೆಯವರೆಗೂ ಅಜೇಯ ಆಟವನ್ನು ಪ್ರದರ್ಶಿಸಿ 85 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 50 ರನ್‌ಗಳನ್ನು ಗಳಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಜೇಡನ್ ಸಿಲ್ಸ್ ಕೊನೆಯಲ್ಲಿ ಸ್ವಲ್ಪ ಹೊತ್ತು ಸಾಥ್ ನೀಡಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ. ಜೇಡನ್ ಸೀಲ್ಸ್ ಅವರು ಆಡಿದ 67 ಎಸೆತಗಳಲ್ಲಿ ಅಜೇಯ 32 ರನ್‌ಗಳನ್ನು ದಾಖಲಿಸಿದರು.
Promise made, promise kept! 🏏👏🏿
— Windies Cricket (@windiescricket) October 13, 2025
Our first test centurion of the year, in the most testing of conditions. #INDvWI | #MenInMaroon pic.twitter.com/4Qy06NoQUF
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಭಾರಿ ಅಂತರದ ಹಿನ್ನಡೆ ಅನುಭವಿಸುವ ಮೂಲಕ ಫಾಲೋ ಆನ್‌ಗೆ ಸಿಲುಕಿತ್ತು. ಇದರ ಪರಿಣಾಮ ವಿಂಡೀಸ್ ದ್ವಿತೀಯ ಇನಿಂಗ್ಸ್ ಅನ್ನು ಆಡಬೇಕಾಗಿತ್ತು. ಅಂದ ಹಾಗೆ ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 518 ರನ್‌ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು.