ನವದೆಹಲಿ: ಟಿ20 ವಿಶ್ವಕಪ್ (T20 World Cup 2007) ಉದ್ಘಾಟನಾ ಟೂರ್ನಿಯ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯ ಇತಿಹಾಸ ಪುಟ ಸೇರಿದೆ. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ (Yuvraj Singh), ಸ್ಟುವರ್ಟ್ ಬ್ರಾಡ್ (Stuart Broad) ಬೌಲಿಂಗ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿ ಇಡೀ ಜಗತ್ತನ್ನು ಬೆರಗುಗೊಳಿಸಿದ್ದರು. ಈ ಅವಿಸ್ಮರಣೀಯ ಕ್ಷಣ ಯುವರಾಜ್ ಅವರನ್ನು ರಾತ್ರೋರಾತ್ರಿ ಜಾಗತಿಕ ಸೂಪರ್‌ಸ್ಟಾರ್‌ಪಟ್ಟಕ್ಕೆ ಏರಿಸಿತು, ಆದರೆ ಯುವ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಇದು ಒಂದು ದುಃಸ್ವಪ್ನವಾಗಿತ್ತು. ಇತ್ತೀಚೆಗೆ, ಮೈಕಲ್ ವಾನ್ ಅವರೊಂದಿಗಿನ ಸಂದರ್ಶನದಲ್ಲಿ ಯುವರಾಜ್ ಸಿಂಗ್ ಈ ಘಟನೆಯ ಬಗ್ಗೆ ಹಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಮೈಕಲ್ ವಾನ್ ಅವರ ಓವರ್‌ಲ್ಯಾಪ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಯುವರಾಜ್ ಸಿಂಗ್, "ಟಿ20 ಕ್ರಿಕೆಟ್‌ನಲ್ಲಿ ಅವರಿಗೆ (ಸ್ಟುವರ್ಟ್ ಬ್ರಾಡ್) ಅನುಭವ ಇಲ್ಲ ಎಂಬುದು ನನಗೆ ಅರ್ಥವಾಗಿದೆ. ಆ ಘಟನೆಯ ಬಳಿಕ ಬ್ರಾಡ್ ದಿಗ್ಗಜ ವೇಗದ ಬೌಲರ್ ಆಗಿ ಬೆಳೆದಿದ್ದಾರೆ ಹಾಗೂ 600 ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಕಹಿ ಘಟನೆಯನ್ನು ಅವರು ಶಕ್ತಿಶಾಲಿಯಾಗಿ ಪರಿವರ್ತಿಸಿದ್ದಾರೆ. ಈ ಜಾಗದಲ್ಲಿ ಬೇರೆ ಯಾರಾದರೂ ಆಟಗಾರ ಇದ್ದಿದ್ದರೆ, ಅವರ ವೃತ್ತಿ ಬದುಕು ಅಲ್ಲಿಯೇ ಮುಗಿದಿರುತ್ತಿತ್ತು," ಎಂದು ಹೇಳಿದ್ದಾರೆ.
ʼನನ್ನನ್ನು ಹುಚ್ಚ ಎಂದಿದ್ರು, ನಾನು ತಲೆ ಕೆಡಿಸಿಕೊಳ್ಳಲಿಲ್ಲʼ: ಕಷ್ಟದ ದಿನಗಳನ್ನು ನೆನೆದ ಮುಕುಲ್ ಚೌಧರಿ ತಂದೆ!
"ಒಮ್ಮೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯದ ವೇಳೆ ಸ್ಟವರ್ಟ್ ಅವರ ತಂದೆ ಕ್ರಿಸ್ ಬ್ರಾಡ್ ರೆಫರಿಯಾಗಿದ್ದರು. ಅಂದು ಅವರು, ʻನನ್ನ ಮಗನ ವೃತ್ತಿ ಬದುಕನ್ನು ಬಹುತೇಕ ಮುಗಿಸಿದ್ದೀರಿʼ ಎಂದಿದ್ದರು. ಅದಕ್ಕೆ ನಾನು, ʻಸರ್, ನನಗೂ ಐದು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ; ಇದು ಯಾವ ರೀತಿ ಭಾವನೆ ಉಂಟು ಮಾಡುತ್ತದೆ ಎಂಬುದು ನನಗೂ ಗೊತ್ತಿದೆ,ʼ ಎಂದು ಹೇಳಿದೆ. ನಂತರ ಅವರು, ʻಈ ಟೀ ಶರ್ಟ್‌ಗೆ ಸಹಿ ಮಾಡಿ ಕೊಡಿ, ಸ್ಟುವರ್ಟ್‌ಗೆ ಕೊಡಬೇಕು,ʼ ಎಂದಿದ್ದರು. ಆಗ ನನ್ನ ಟೀಮ್ ಇಂಡಿಯಾದ ಜೆರ್ಸಿಗೆ ಸಹಿ ಹಾಕಿ, ನನಗೂ ಕೂಡ ಐದು ಸಿಕ್ಸರ್ ಹೊಡೆದಿದ್ದಾರೆ, ಇದು ಯಾವ ಭಾವನೆ ಉಂಟು ಮಾಡುತ್ತದೆ ಎಂಬುದು ನನಗೂ ಗೊತ್ತಿದೆ. ನೀವು ಭವಿಷ್ಯದಲ್ಲಿ ಶ್ರೇಷ್ಠ ಬೌಲರ್ ಆಗುತ್ತೀರಿ ಎಂಬ ನಂಬಿಕೆ ನನಗೆ ಇದೆ. ನಾನು ಕ್ರಿಸ್‌ಗೆ ಕೊಟ್ಟ ಟೀ ಶರ್ಟ್ ಅನ್ನು ಬ್ರಾಡ್ ಡಸ್ಟ್‌ಬಿನ್‌ಗೆ ಎಸೆದಿದ್ದರು ಎಂಬ ಸುದ್ದಿಯನ್ನು ನಾನು ಇತ್ತೀಚೆಗೆ ತಿಳಿದುಕೊಂಡಿದ್ದೆ. ಅವರು ಕೋಪದಲ್ಲಿದ್ದರು ಹಾಗೂ ಇದು ಸ್ವೀಕಾರಾರ್ಹವಾಗಿದೆ," ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
'ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ನನಗೆ ಕ್ಲಾರಿಟಿ ನೀಡಲಿಲ್ಲ, ಎಂಎಸ್ ಧೋನಿ ಸತ್ಯ ಹೇಳಿದ್ರು'- ಯುವರಾಜ್ ಸಿಂಗ್!
ಕ್ಯಾನ್ಸರ್ ಜೊತೆಗಿನ ಹೋರಾಟ ಬಗ್ಗೆ ಯುವಿ ಪ್ರತಿಕ್ರಿಯೆ
“ಅದು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ನೀವು ನಿಮ್ಮ ವೃತ್ತಿಜೀವನದ ಅಗ್ರ ಸ್ಥಾನದಲ್ಲಿದ್ದಾಗ, ನೀವು ಪರ್ವತದ ಮೇಲಿರುತ್ತೀರಿ, ಆದರೆ ಹಠಾತ್ ಒಂದು ಗುಂಡಿಯೊಳಗೆ ಬೀಳುವಂತಾಗುತ್ತದೆ. ನಾನು ದೆಹಲಿಯಲ್ಲಿ ಇದ್ದೆ. ನಾವು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲು ಸಿದ್ಧರಾಗಿದ್ದೆವು. ಸೌರವ್ ಗಂಗೂಲಿ ನಿವೃತ್ತರಾಗಿದ್ದರು ಮತ್ತು ನನ್ನ ಟೆಸ್ಟ್ ಸ್ಥಾನ ಖಾಲಿಯಾಗಿತ್ತು. ನಾನು ಆ ಅವಕಾಶಕ್ಕಾಗಿ ಏಳು ವರ್ಷಗಳಿಂದ ಕಾಯುತ್ತಿದ್ದೆ. ‘ನಾನು ಸತ್ತರೂ ಪರವಾಗಿಲ್ಲ ನನಗೆ ಆ ಸ್ಥಾನ ಬೇಕು’ ಎಂದು ಹೇಳಿದ್ದೆ. ಆದರೆ ನಾನು ದಿನೇ-ದಿನೆ ಹೆಚ್ಚು ಅಸ್ವಸ್ಥನಾಗುತ್ತಿದ್ದೆ," ಎಂದು ಹೇಳಿದ್ದಾರೆ.
ʻರಿಷಭ್ ಪಂತ್ ಭಾರತ ವೈಟ್‌ಬಾಲ್ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕುʼ-ಯುವರಾಜ್ ಸಿಂಗ್!
ಡಾ. ನಿತೇಶ್ ರೋಹಟ್ಗಿ ಹೇಳಿದ್ದೇನು?
‘ಟ್ಯೂಮರ್ ನಿಮ್ಮ ಹೃದಯ ಮತ್ತು ಶ್ವಾಸಕೋಶದ ಮಧ್ಯೆ ಇದೆ. ನೀವು ಕ್ರಿಕೆಟ್ ಆಡಲು ಹೋದಾಗ ಅಥವಾ ಹೋಗದೇ ಇದ್ದರೂ ನಿಮಗೆ ಹೃದಯಾಘಾತವಾಗಬಹುದು. ನೀವು ಕಿಮೋಥೆರಪಿ ಮಾಡಿಸದಿದ್ದರೆ, ನಿಮ್ಮ ಬಳಿ ಇನ್ನೂ ಮೂರರಿಂದ ಆರು ತಿಂಗಳು ಮಾತ್ರ ಉಳಿದಿವೆ.’ ಆಗ ನಾನು ಯೋಚನೆ ಮಾಡಬೇಕೆಂದು ಅರಿತುಕೊಂಡೆ,” ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.