ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs WI: ʻಬೌಲರ್‌ಗಳು ಏಕೆ, ಬೌಲಿಂಗ್‌ ಮಷೀನ್‌ ಇಟ್ಟುಕೊಳ್ಳಿʼ-ಪಿಚ್‌ ಬಗ್ಗೆ ಗುಡುಗಿದ ಯುಜ್ವೇಂದ್ರ ಚಹಲ್‌!

ವೆಸ್ಟ್ ಇಂಡೀಸ್ ವಿರುದ್ಧ ಭಾರತ 249 ರನ್ ಗಳಿಸಿಯೂ ಸೋತ ಬೆನ್ನಲ್ಲೇ, ಯುಜ್ವೇಂದ್ರ ಚಹಲ್ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಣ್ಣ ಬೌಂಡರಿಗಳು, ಬ್ಯಾಟಿಂಗ್ ಪಿಚ್‌ಗಳು ಹಾಗೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಬೌಲರ್‌ಗಳ ಸವಾಲು ಹೆಚ್ಚಿಸಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಟಿ20 ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಟೀಕಿಸಿದ ಯುಜ್ವೇಂದ್ರ ಚಹಲ್‌.

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಕಳವಳ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿರುವ ಪಿಚ್‌ಗಳು, ಸಣ್ಣ ಬೌಂಡರಿಗಳು ಮತ್ತು ಇಬ್ಬನಿಯ ಪರಿಣಾಮದಿಂದ ಬೌಲರ್‌ಗಳಿಗೆ ತಮ್ಮ ಕೌಶಲ ಪ್ರದರ್ಶಿಸಲು ಸಾಕಷ್ಟು ಅವಕಾಶ ಸಿಗುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಂಚಿಯಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs WI) ವೆಸ್ಟ್ ಇಂಡೀಸ್ ತಂಡ, ಭಾರತ ನೀಡಿದ 250 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಬೆನ್ನಲ್ಲೇ ಚಹಲ್ ಅವರ ಈ ಹೇಳಿಕೆ ನೀಡಿದ್ದಾರೆ.

ಅಕ್ಟೋಬರ್ 9ರಂದು ರಾಂಚಿಯಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 82 ರನ್ ಸಿಡಿಸಿದರೆ, ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌ ಹಾಗೂ ತಿಲಕ್‌ ವರ್ಮಾ ಕೂಡ ಉತ್ತಮ ಕೊಡುಗೆ ನೀಡಿದರು.

IND vs WI: ಎರಡನೇ ಟಿ20ಐ ಸೋಲಿನ ಬಳಿಕ ಭಾರತದ ಪ್ಲೇಯಿಂಗ್‌ XI ಬಗ್ಗೆ ದಿನೇಶ್‌ ಕಾರ್ತಿಕ್‌ ಪ್ರತಿಕ್ರಿಯೆ!

ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ತಂಡ ಶೇಯ್‌ ಹೋಪ್ ಅವರ ಅಜೇಯ ಶತಕ ಮತ್ತು ಶೆರ್ಫೇನ್ ಋದರ್‌ಫೋರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಹೋಪ್ 45 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರೆ, ಋದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್ ಸಿಡಿಸಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 120 ರನ್‌ಗಳ ಜೊತೆಯಾಟ ಭಾರತದ ಗೆಲುವಿನ ನಿರೀಕ್ಷೆಯನ್ನು ಹುಸಿಗೊಳಿಸಿತು. ವೆಸ್ಟ್ ಇಂಡೀಸ್ ಆರು ವಿಕೆಟ್‌ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.

ಇಂತಹ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ಏನೂ ಕೆಲಸವಿಲ್ಲ: ಚಹಲ್

ಈ ಪಂದ್ಯದ ಬಳಿಕ ಜಿಯೋಸ್ಟಾರ್‌ನ ‘ಹೈಯರ್ ಕ್ರಿಕೆಟ್ ಲೈವ್’ ಕಾರ್ಯಕ್ರಮದಲ್ಲಿ ಮಾತನಾಡಿದ ಚಹಲ್, ಆಧುನಿಕ ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ʻನಮ್ಮ ತಂಡದಲ್ಲಿ ಗುಣಮಟ್ಟದ ಬೌಲಿಂಗ್‌ ಇಲ್ಲʼ: ಭಾರತ ತಂಡದ ಬೌಲಿಂಗ್‌ ಅನ್ನು ಟೀಕಿಸಿದ ಆರ್‌ ಅಶ್ವಿನ್‌!

“ಇಂತಹ ಪಿಚ್‌ಗಳಲ್ಲಿ ಬೌಲರ್‌ಗಳಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಚೆಂಡು ಹಳೆಯದಾದಾಗ, ಇಬ್ಬನಿ ಬೀಳುವಾಗ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಜೊತೆಗೆ ಮೈದಾನಗಳ ಬೌಂಡರಿಗಳೂ ಚಿಕ್ಕದಾಗುತ್ತಿವೆ. ಐಪಿಎಲ್‌ನಲ್ಲಿಯೂ ಇದನ್ನು ನೋಡಿದ್ದೇವೆ. 19 ಓವರ್‌ಗಳಲ್ಲೇ 260 ರನ್‌ಗಳ ಗುರಿಯನ್ನು ಬೆನ್ನಟ್ಟಲಾಗಿದೆ. ಈ ಪಂದ್ಯದಲ್ಲೂ 250 ರನ್‌ಗಳ ಗುರಿಯನ್ನು 18.3 ಓವರ್‌ಗಳಲ್ಲೇ ಸುಲಭವಾಗಿ ಬೆನ್ನಟ್ಟಲಾಯಿತು. ಹೀಗಾದರೆ ಬೌಲರ್‌ಗಳು ಏನು ಮಾಡಬೇಕು? ಅವರ ಕೌಶಲಕ್ಕೆ ಬೆಲೆ ಎಲ್ಲಿದೆ?” ಎಂದು ಜಿಯೋಸ್ಟಾರ್‌ನ ‘ಕ್ರಿಕೆಟ್ ಲೈವ್’ ಕಾರ್ಯಕ್ರಮದಲ್ಲಿ ಚಹಲ್ ಹೇಳಿದರು.

ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆಯೂ ಚಹಲ್‌ ಅಸಮಾಧಾನ

ಬ್ಯಾಟರ್‌ಗಳಿಗೆ ಅನುಕೂಲವಾಗುವ ಪಿಚ್‌ಗಳಷ್ಟೇ ಅಲ್ಲದೆ, ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆಯೂ ಚಹಲ್ ಟೀಕೆ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದ ತಂಡಗಳಿಗೆ ಹೆಚ್ಚುವರಿ ಬ್ಯಾಟಿಂಗ್ ಆಯ್ಕೆಯನ್ನು ಬಳಸಿಕೊಳ್ಳಲು ಅವಕಾಶ ಸಿಗುವುದರಿಂದ, ಬೌಲರ್‌ಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಬಹುದು ಎಂಬುದು ಅವರ ಕಳವಳ.

IND vs WI 3rd T20I: ಶಿವಂ ದುಬೇ ಔಟ್‌? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

“ಬೌಲರ್ ಆಗಿರುವ ನನಗೆ ಅವರ ಕಷ್ಟ ಅರ್ಥವಾಗುತ್ತದೆ. ಐಪಿಎಲ್‌ನಲ್ಲಿ ಸಣ್ಣ ಮೈದಾನಗಳು, ಬ್ಯಾಟಿಂಗ್‌ಗೆ ಅನುಕೂಲಕರವಾದ ಪಿಚ್‌ಗಳು ಹಾಗೂ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ನಡುವೆ ಬೌಲಿಂಗ್ ಮಾಡುವುದು ಸವಾಲಿನ ಕೆಲಸವಾಗಿದೆ. ಹಿಂದೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇಲ್ಲದಿದ್ದಾಗ, ಮೊದಲ ಆರು ಓವರ್‌ಗಳಲ್ಲಿ 50 ರನ್‌ಗಳು ದಾಖಲಾಗುತ್ತಿದ್ದವು. 170-180 ರನ್‌ಗಳ ಮೊತ್ತವೂ ಹೋರಾಟದ ಗುರಿಯಾಗಿತ್ತು.

“ಆದರೆ ಈಗ ಮೊದಲ ಆರು ಓವರ್‌ಗಳಲ್ಲೇ 70-80 ರನ್‌ಗಳು ದಾಖಲಾಗುತ್ತಿವೆ. ಅಲ್ಲಿಯೇ ಪಂದ್ಯದ ಫಲಿತಾಂಶ ಬಹುತೇಕ ನಿರ್ಧಾರವಾಗುತ್ತದೆ. ಹೀಗಾಗಿ ಪಿಚ್‌ನಲ್ಲಿ ಬೌಲರ್‌ಗಳಿಗೂ ನೆರವಾಗುವಂತಹ ಅಂಶಗಳಿರಬೇಕು. ಇಲ್ಲದಿದ್ದರೆ, ಬೌಲಿಂಗ್ ಯಂತ್ರವನ್ನೇ ಅಳವಡಿಸಿಬಿಡಿ,” ಎಂದು ಅವರು ಹೇಳಿದರು.