ಬೆಂಗಳೂರಿನಲ್ಲಿ ಇದೇ ಮೊದಲು, ಮಕ್ಕಳಿಗಾಗಿ ಸಂವಾದಾತ್ಮಕ ವಿಜ್ಞಾನ ಕೇಂದ್ರ ಸ್ಥಾಪನೆ! ಪರಂ ಫೌಂಡೇಶನ್‌ನಿಂದ ಪಾರ್ಸೆಕ್ ಸಮರ್ಪಣೆ!
ಅನುಭವದ ಮೂಲಕವೇ ವಿಜ್ಞಾನವನ್ನು ಅತ್ಯುತ್ತಮವಾಗಿ ಕಲಿಯಬಹುದು ಎಂಬ ನಂಬಿಕೆ ಯನ್ನು ಆಧರಿಸಿದ ಪಾರ್ಸೆಕ್, ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ಕಲಿಕಾ ಸ್ಥಳವಾಗಿದೆ. ಇದು ಮಕ್ಕಳಲ್ಲಿ ಕುತೂಹಲವನ್ನು ಕೆರಳಿಸಲು, ಸೃಜನಶೀಲತೆಯನ್ನು ಪ್ರೇರೇಪಿಸಲು ಮತ್ತು ವಿನೋದ, ಆಟದಿಂದಲೇ ವೈಜ್ಞಾನಿಕ ಅನ್ವೇಷಣೆ ಮಾಡಲು, ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ವಿನ್ಯಾಸ ಗೊಳಿಸಲಾಗಿದೆ.


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಮೊದಲ ಸಂವಾದಾತ್ಮಕ ಹಾಗೂ ಪ್ರಾಯೋಗಿಕ ವಿಜ್ಞಾನ ಕೇಂದ್ರವನ್ನು ಪರಂ ಫೌಂಡೇಶನ್ ಸ್ಥಾಪಿಸಿದೆ. ಜಯನಗರದಲ್ಲಿ ಪಾರ್ಸೆಕ್ - ಪರಂ ವಿಜ್ಞಾನ ಅನುಭವ ಕೇಂದ್ರವನ್ನು ಸ್ಥಾಪಿಸಿದ್ದು, ಯುವ ಮನಸ್ಸುಗಳಲ್ಲಿ ವಿಜ್ಞಾನ ಶಿಕ್ಷಣದ ಬಗ್ಗೆ ಉತ್ಸಾಹವನ್ನು ಹೆಚ್ಚಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಹೊಸ ಮೈಲಿಗಲನ್ನು ಸ್ಥಾಪಿಸಿದೆ.
ಅನುಭವದ ಮೂಲಕವೇ ವಿಜ್ಞಾನವನ್ನು ಅತ್ಯುತ್ತಮವಾಗಿ ಕಲಿಯಬಹುದು ಎಂಬ ನಂಬಿಕೆ ಯನ್ನು ಆಧರಿಸಿದ ಪಾರ್ಸೆಕ್, ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ಕಲಿಕಾ ಸ್ಥಳವಾಗಿದೆ. ಇದು ಮಕ್ಕಳಲ್ಲಿ ಕುತೂಹಲವನ್ನು ಕೆರಳಿಸಲು, ಸೃಜನಶೀಲತೆಯನ್ನು ಪ್ರೇರೇಪಿಸಲು ಮತ್ತು ವಿನೋದ, ಆಟದಿಂದಲೇ ವೈಜ್ಞಾನಿಕ ಅನ್ವೇಷಣೆ ಮಾಡಲು, ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ. 5 ರಿಂದ 15 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿ ಕೊಂಡ ಈ ಕೇಂದ್ರವು ಸಾಂಪ್ರದಾಯಿಕ ಶಿಕ್ಷಣಕ್ಕೆ ಪೂರಕವಾಗಿ, ಅನುಭವ-ಆಧಾರಿತ ಮತ್ತು ಪ್ರಶ್ನೆ-ಆಧಾರಿತ ಕಲಿಕೆಯ ಮೂಲಕ ಭವಿಷ್ಯದ ಸಂಶೋಧಕರು, ಸಮಸ್ಯೆಯನ್ನು ಪರಿಹರಿಸುವವರು ಮತ್ತು ಚಿಂತಕರಿಗೆ ನೀರೆರೆಯಲಿದೆ.
ಇದನ್ನೂ ಓದಿ: Vinayak V Bhat Column: ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ
ಆಟ, ಪ್ರಯೋಗ ಮತ್ತು ಕಲ್ಪನೆಯ ಮೂಲಕ ವಿಜ್ಞಾನಕ್ಕೆ ಜೀವ ಬರುವ ಉತ್ಸಾಹಭರಿತ ಕೇಂದ್ರವನ್ನಾಗಿ ನಾವು ಪಾರ್ಸೆಕ್ ಅನ್ನು ಡಿಸೈನ್ ಮಾಡಿದ್ದೇವೆ. ಇದು ಕೇವಲ ಒಂದು ವಿಜ್ಞಾನ ಕೇಂದ್ರವಲ್ಲ, ಭವಿಷ್ಯದ ಬದಲಾವಣೆಯ ಹರಿಕಾರರಿಗೆ ಇದೊಂದು ಉಡಾವಣಾ ವೇದಿಕೆಯಾಗಿದೆ ಎಂದು ಪರಂ ಫೌಂಡೇಶನ್‌ನ ವಕ್ತಾರರು ಹೇಳಿದ್ದಾರೆ. ಜಯನಗರ 7ನೇ ಬ್ಲಾಕ್‌ನಲ್ಲಿ ಪಾರ್ಸೆಕ್ ಕೇಂದ್ರ ಇದ್ದು, ಇಲ್ಲಿನ ಮೆಟ್ರೋ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿ ಇದೆ. ಸುರಕ್ಷತೆ, ಸುಲಭ ಪ್ರವೇಶ ಮತ್ತು ಮಕ್ಕಳ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವನ್ನು ನಿರ್ಮಿಸಲಾಗಿದೆ.
ಪಾರ್ಸೆಕ್‌ನ ಮುಖ್ಯಾಂಶಗಳು:
· ಚಲನಶಾಸ್ತ್ರ, ಸ್ಪರ್ಶಜ್ಞಾನ, ಕಲ್ಪನೆ ಮತ್ತು ಡಿಜಿಟಲ್ ವಿಜ್ಞಾನ ಸೇರಿ 7 ವಿಷಯಾಧಾರಿತ ಗ್ಯಾಲರಿ ಗಳಲ್ಲಿ 80ಕ್ಕೂ ಹೆಚ್ಚು ಸಂವಾದಾತ್ಮಕ ಪ್ರದರ್ಶನಗಳನ್ನು ಇಡಲಾಗಿದೆ.
· ಸ್ವತಃ ಪ್ರಯತ್ನಿಸಿ ಕಲಿಯಲು, ಮಾದರಿಗಳನ್ನು (ಪ್ರೊಟೊಟೈಪ್) ರಚಿಸಲು ಮತ್ತು ಸೃಜನಾತ್ಮಕ ಪ್ರಯೋಗಗಳನ್ನು ಮಾಡಲು 'ಮೇಕರ್ ಸ್ಪೇಸ್' ಇದೆ.
· ಕಲಿಕೆಯನ್ನು ಆಸಕ್ತಿದಾಯಕ ಮತ್ತು ಸ್ಮರಣೀಯವಾಗಿಸಲು ಲೈವ್ ವಿಜ್ಞಾನ ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಶೋಧನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
· ಪ್ರತಿ ಭೇಟಿಯಲ್ಲೂ ಹೊಸ ಅನುಭವ ನೀಡಲು, ಪ್ರಸ್ತುತ ವೈಜ್ಞಾನಿಕ ಆವಿಷ್ಕಾರಗಳಿಗೆ ಅನುಗುಣವಾಗಿ ಪ್ರದರ್ಶನದ ವಿಷಯಗಳನ್ನು ಬದಲಾಯಿಸಲಾಗುತ್ತದೆ.
· ವಿಜ್ಞಾನ ಶಿಕ್ಷಣದಲ್ಲಿ ಸಮಾನತೆಯನ್ನು ಉತ್ತೇಜಿಸಲು, ಸೌಲಭ್ಯವಂಚಿತ ಸಮುದಾಯಗಳಿಗಾಗಿ ವಿಶೇಷ ಪ್ರವೇಶ ಕಾರ್ಯಕ್ರಮಗಳು ಇವೆ.
ಎಲ್ಲಾ ವಯಸ್ಸಿನವರಿಗಾಗಿ ಕಾರ್ಯಕ್ರಮಗಳ ವಿನ್ಯಾಸ
· ಕಿರಿಯ ವಿದ್ಯಾರ್ಥಿಗಳಿಗೆ (5 ರಿಂದ 8 ವರ್ಷ) ಮೂಲಭೂತ ಅನ್ವೇಷಣೆ.
· ಮಧ್ಯಮ ಹಂತದ ವಿದ್ಯಾರ್ಥಿಗಳಿಗೆ (9 ರಿಂದ 12 ವರ್ಷ) ಪ್ರಾಯೋಗಿಕ ಕಲಿಕೆ.
· ಹದಿಹರೆಯದವರಿಗೆ (13 ರಿಂದ 15 ವರ್ಷ) ಪ್ರಾಜೆಕ್ಟ್-ಆಧಾರಿತ ಮತ್ತು ಅತ್ಯಾಧುನಿಕ ವರ್ಕ್‌ಶಾಪ್‌ಗಳು.
· ಶಿಕ್ಷಕರ ತರಬೇತಿ, ಶೈಕ್ಷಣಿಕ ಪ್ರವಾಸಗಳು, ವಿಜ್ಞಾನ ಶಿಬಿರಗಳು ಮತ್ತು ಸಮುದಾಯ ಸಂಪರ್ಕ ಕಾರ್ಯಕ್ರಮಗಳು ಕೂಡ ಇವೆ. ಇದರಿಂದ ಪಾರ್ಸೆಕ್ನ ಪರಿಣಾಮ ಶೈಕ್ಷಣಿಕ ವ್ಯವಸ್ಥೆ ಮೇಲೆ ಮತ್ತಷ್ಟು ವಿಸ್ತಾರವಾಗಲಿದೆ.
ಪಾಲುದಾರಿಕೆ ಮತ್ತು ದೃಷ್ಟಿಕೋನ
ಬೆಂಗಳೂರಿನ ಉತ್ಸಾಹಭರಿತ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿರುವ ಶಾಲೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಇನೋವೇಶನ್ ನಾಯಕರೊಂದಿಗೆ ಪರಂ ಫೌಂಡೇಶನ್ ಸಕ್ರಿಯ ಪಾಲುದಾರಿಕೆಗಳನ್ನು ಮಾಡಿಕೊಳ್ಳುತ್ತಿದೆ. ಈ ಸಹಯೋಗದ ಮೂಲಕ, ಪರಿಣಾಮಕಾರಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಲಿಕೆಯ ಅನುಭವಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಪಾರ್ಸೆಕ್ ಕೇವಲ ಒಂದು ಸ್ಥಳವಲ್ಲ, ಇದು ಒಂದು ಚಳವಳಿ. ವಿಜ್ಞಾನ ಕಲಿಕೆಯನ್ನು ಎಲ್ಲರಿಗೂ ತಲುಪಿಸುವ ಧ್ಯೇಯದೊಂದಿಗೆ, ಪ್ರತಿ ಮಗುವೂ ತನ್ನನ್ನು ಒಬ್ಬ ವಿಜ್ಞಾನಿ, ಸಂಶೋಧಕ ಅಥವಾ ಅನ್ವೇಷಕನಾಗಿ ನೋಡಿಕೊಳ್ಳಲು ಪ್ರೇರೇಪಿಸುತ್ತದೆ. ಈ ಮೂಲಕ ಬೆಂಗಳೂರಿನ ಶೈಕ್ಷಣಿಕ ಭೂಪಟದಲ್ಲಿ ಪಾರ್ಸೆಕ್ ಲ್ಯಾಂಡ್ ಮಾರ್ಕ್ ಆಗಿ ಗುರುತಿಸಿಕೊಳ್ಳಲಿದೆ.