ನವದೆಹಲಿ: ಭಾರತ ಟಿ20 ತಂಡ ನಾಯಕನಾಗಿ ಸೂರ್ಯಕುಮಾರ್ ಯಾದವ್ (Suryakumar yadav) ಅವರು ಯಶಸ್ವಿಯಾದರೂ ಅವರಿಗೆ ಸಿಗಬೇಕಾದ ಶ್ರೇಯ ಇನ್ನೂ ಸಿಗಲಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು, ಮಾಜಿ ನಾಯಕ ರೋಹಿತ್ ಶರ್ಮಾ ಅವರ ಪ್ರತಿಬಿಂಬ ಎಂದು ಬಣ್ಣಿಸಿದ್ದಾರೆ. ರೋಹಿತ್ ಶರ್ಮಾ (Rohit sharma) ಅವರು ನಾಯಕತ್ವದಲ್ಲಿ ಏನು ಮಾಡಿದ್ದಾರೆ, ಇದೀಗ ಅದೇ ಕೆಲಸವನ್ನು ಸೂರ್ಯಕುಮಾರ್ ಯಾದವ್ ಅವರು ಮುಂದುವರಿಸುತಿದ್ದಾರೆ. ಸ್ವತಃ ಸೂರ್ಯಕುಮಾರ್ ಅವರೇ ಮುಂದೆ ನಿಂತು ತಂಡವನ್ನು ಮುನ್ನಡೆಸುತ್ತಿದ್ದಾರೆ.
ರೆವ್‌ಸ್ಪೋರ್ಟ್ಸ್ ಜೊತೆ ಮಾತನಾಡಿದ ಇರ್ಫಾನ್ ಪಠಾಣ್, "ಯಾವುದೇ ಕಾರಣಗಳಿಂದಾಗಿ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾವು ಹೆಚ್ಚು ಸಂಭ್ರಮಿಸುವುದಿಲ್ಲ. ಅವರು ನಾಯಕನಾಗಿ ಟಿ20ಐ ಕ್ರಿಕೆಟ್‌ನಲ್ಲಿನ ಸರಾಸರಿ 84ರಷ್ಟು ಇದೆ, ಇದು ನಮ್ಮ ತಂಡದಲ್ಲಿ ಅತಿ ಹೆಚ್ಚು ಗೆಲುವಿನ ಸರಾಸರಿಯಾಗಿದೆ. ನಾಯಕನ ಪರವಾಗಿ ನಾವು ಏಕೆ ಸಂಭ್ರಮಿಸುತ್ತಿಲ್ಲ? ಜನರು ತಂಡದ ಯಶಸ್ವಿನ ಶ್ರೇಯವನ್ನು ಅವರಿಗೆ ನೀಡುತ್ತಿಲ್ಲ," ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
WPL 2026: ಎಲಿಮಿನೇಟರ್‌ಗೆ ಅರ್ಹತೆ ಪಡೆಯಲು ಮುಂಬೈ ಇಂಡಿಯನ್ಸ್‌ಗೆ ಅವಕಾಶ ಇದೆಯಾ? ಇಲ್ಲಿದೆ ಲೆಕ್ಕಾಚಾರ!
"ಅವರು ಬೌಲರ್‌ಗಳ ನಾಯಕ. ಅವರು ಬೌಲರ್‌ಗಳನ್ನು ನೋಡಿಕೊಳ್ಳುವ ರೀತಿಯಿಂದ, ಅವರು ತುಂಬಾ ಉತ್ಸಾಹಭರಿತರು, ಆಟದಲ್ಲಿ ತುಂಬಾ ತೊಡಗಿಸಿಕೊಂಡಿದ್ದಾರೆ ಮತ್ತು ಹಲವು ಬಾರಿ ತಂಡಕ್ಕಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಎಲ್ಲಾ ಅಂಶಗಳಿಂದಾಗಿ ರೋಹಿತ್ ಶರ್ಮಾರ ಪ್ರತಿಬಿಂಬವನ್ನು ನಾನು ಅವರಲ್ಲಿ ನೋಡಿದ್ದೇನೆ. ”ಎಂದು ಮಾಜಿ ಆಲ್‌ರೌಂಡರ್ ಬಣ್ಣಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ನವಯುಗದ ನಾಯಕ
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದಾದ ಬಳಿಕ ಭಾರತ ಚುಟುಕು ತಂಡದ ನಾಯಕತ್ವವನ್ನು ವಹಿಸಿದ ಸೂರ್ಯಕುಮಾರ್ ಯಾದವ್, ತಡೆರಹಿತ ಪರಿವರ್ತನೆಯ ಮೂಲಕ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಅವರ ಆಕ್ರಮಣಕಾರಿ, ನಿರ್ಭೀತ ವಿಧಾನವು ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದೆ, ಭಾರತ ತಂಡವು 41 ಟಿ20ಐಗಳಲ್ಲಿ 31ರಲ್ಲಿ ಗೆದ್ದಿದೆ, 2025ರ ಏಷ್ಯಾ ಕಪ್ ಅನ್ನು ಗೆದ್ದಿದೆ ಮತ್ತು ಏಳು ದ್ವಿಪಕ್ಷೀಯ ಸರಣಿಗಳಲ್ಲಿ ಅಜೇಯವಾಗಿ ಉಳಿದಿದೆ.
ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್; ವಿಶ್ವದ ಮೊದಲ ಆಟಗಾರ್ತಿ
ಸೂರ್ಯಕುಮಾರ್ ಅವರ ನಾಯಕತ್ವದ ಸಂಖ್ಯೆಗಳು ಅತ್ಯುತ್ತಮವಾಗಿದ್ದರೂ, ಕಳೆದ ವರ್ಷ ಅವರು ವೈಯಕ್ತಿಕವಾಗಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದರು. ಭಾರತದ ನಾಯಕ 2025ರಲ್ಲಿ ಕಠಿಣ ಅವಧಿಯನ್ನು ಎದುರಿಸಿದರು, 21 ಪಂದ್ಯಗಳಲ್ಲಿ 14 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 218 ರನ್‌ಗಳನ್ನು ಗಳಿಸಿದರು. ಆದಾಗ್ಯೂ, ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸೂರ್ಯ ತನ್ನ ಲಯವನ್ನು ಕಂಡುಕೊಂಡಿದ್ದಾರೆ.
"ಅವರಿಗೆ ತಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುವುದು ಬಹಳ ಮುಖ್ಯವಾಗಿತ್ತು. ನಾಯಕನಾಗಿ, ಅವರು ಯಾವಾಗಲೂ ವಿಶ್ವಕಪ್ ಆಡುತ್ತಿದ್ದರು, ಆದರೆ ರನ್‌ಗಳೊಂದಿಗೆ ವಿಶ್ವಕಪ್‌ಗೆ ಹೋಗುವುದು ಅವರಿಗೆ ನಿರ್ಣಾಯಕವಾಗಿತ್ತು," ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಆ ಮೂಲಕ ಚುಟುಕು ತಂಡದ ನಾಯಕನಿಗೆ ಮಾಜಿ ಆಲ್‌ರೌಂಡರ್ ಬೆಂಬಲಿಸಿದ್ದಾರೆ.
ಇದೀಗ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 5 ಪಂದ್ಯಗಳ ಟಿ20ಐ ಸರಣಿಯನ್ನು ಆಡುತ್ತಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೀಮ್ ಇಂಡಿಯಾ 3-1 ಮುನ್ನಡೆಯನ್ನು ಪಡೆದಿದೆ.