ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

WPL 2026: ಎಲಿಮಿನೇಟರ್‌ಗೆ ಅರ್ಹತೆ ಪಡೆಯಲು ಮುಂಬೈ ಇಂಡಿಯನ್ಸ್‌ಗೆ ಅವಕಾಶ ಇದೆಯಾ? ಇಲ್ಲಿದೆ ಲೆಕ್ಕಾಚಾರ!

Mumbai Indians Eliminator Scenario: ಶುಕ್ರವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗುಜರಾತ್‌ ಜಯಂಟ್ಸ್‌ ತಂಡ 11 ರನ್‌ಗಳಿಂದ ಗೆದ್ದು ಬೀಗಿತು. ಆ ಮೂಲಕ ಎಲಿಮಿನೇಟರ್‌ ಪಂದ್ಯಕ್ಕೆ ಗುಜರಾತ್‌ ಅರ್ಹತೆ ಪಡೆಯಿತು. ಆದರೆ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಎಲಿಮಿನೇಟರ್‌ ಹಾದಿ ಕಠಿಣವಾಗಿದೆ. ಇದರ ಲೆಕ್ಕಾಚಾರವನ್ನು ಇಲ್ಲಿ ವಿವರಿಸಲಾಗಿದೆ.

ಮುಂಬೈ ಇಂಡಿಯನ್ಸ್‌ ತಂಡದ ಎಲಿಮಿನೇಟರ್‌ ಲೆಕ್ಕಾಚಾರ ಹೀಗಿದೆ!

ಮುಂಬೈ ಇಂಡಿಯನ್ಸ್‌ ತಂಡದ ಎಲಿಮಿನೇಟರ್‌ ಲೆಕ್ಕಾಚಾರೆ. -

Profile
Ramesh Kote Jan 31, 2026 3:56 PM

ವಡೋದರ: ಪ್ರಸ್ತುತ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯು ತೀವ್ರ ಕುತೂಹಲ ಘಟ್ಟದಲ್ಲಿ ಸಾಗುತ್ತಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಗುಜರಾತ್‌ ಜಯಂಟ್ಸ್‌ (Gujarat Giants) ತಂಡ 11 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಟೂರ್ನಿಯ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆಯಿತು. ಆ ಮೂಲಕ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಎಲಿಮಿನೇಟರ್‌ಗೆ ಇನ್ನೂ ಅವಕಾಶವಿದೆ. ಆದರೆ, ಈ ತಂಡಕ್ಕೆ ಫೆಬ್ರವರಿ 1 ರಂದು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಯುಪಿ ವಾರಿಯರ್ಸ್‌ ನಡುವಣ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ.

ಇದಕ್ಕೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 12 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸುವ ಮೂಲಕ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಿತು. ಇದೀಗ ಗುಜರಾತ್‌ ಜಯಂಟ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನು ಆಡುವ ತಂಡ ಯಾವುದೆಂದು ಇನ್ನೂ ಅಂತಿಮವಾಗಿಲ್ಲ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಯುಪಿ ವಾರಿಯರ್ಸ್‌ ತಂಡಗಳ ನಡುವಣ ಪಂದ್ಯದ ಫಲಿತಾಂಶ ಮುಂಬೈ ತಂಡದ ಎಲಿಮಿನೇಟರ್‌ ಭವಿಷ್ಯವನ್ನು ನಿರ್ಧರಿಸಲಿದೆ.

WPL 2026: ಹರ್ಮನ್‌ಪ್ರೀತ್‌ ಹೋರಾಟ ವ್ಯರ್ಥ, ಮುಂಬೈ ವಿರುದ್ಧ ಗೆದ್ದು ಎಲಿಮಿನೇಟರ್‌ಗೆ ಪ್ರವೇಶಿಸಿದ ಗುಜರಾತ್‌ ಜಯಂಟ್ಸ್‌!

ಗುಜರಾತ್‌ ಜಯಂಟ್ಸ್‌ ವಿರುದ್ಧ ಸೋಲು ಅನುಭವಿಸಿದ ಹೊರತಾಗಿಯೂ ರನ್‌ರೇಟ್‌ ಆಧಾರದ ಮೇಲೆ 6 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್‌ ತಂಡ, ಎಲಿಮಿನೇಟರ್‌ ರೇಸ್‌ನಲ್ಲಿ ಉಳಿದಿದೆ. ಸದ್ಯ ಮುಂಬೈ ತಂಡದ ರನ್‌ರೇಟ್‌ +0.059ರಷ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡ 6 ಅಂಕ ಹೊಂದಿದ್ದರೂ -0.164 ರಷ್ಟು ಕಡಿಮೆ ರನ್‌ರೇಟ್‌ ಹೊಂದಿದೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿರುವ ಯುಪಿ ವಾರಿಯರ್ಸ ತಂಡ -1.146 ರಷ್ಟು ರನ್‌ರೇಟ್‌ ಹೊಂದಿದೆ. ಹಾಗಾಗಿ ಈ ಎರಡೂ ತಂಡಗಳ ಪೈಕಿ ಉತ್ತಮ ರನ್‌ರೇಟ್‌ ಹೊಂದಿರುವ ಮುಂಬೈಗೆ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆಯಲು ಅವಕಾಶವಿದೆ.

ಮುಂಬೈ ಇಂಡಿಯನ್ಸ್‌ ತಂಡದ ಎಲಿಮಿನೇಟರ್‌ ಲೆಕ್ಕಾಚಾರ

ಮುಂಬೈ ಇಂಡಿಯನ್ಸ್‌ ತಂಡ ತನ್ನ ಪಾಲಿನ 8 ಪಂದ್ಯಗಳನ್ನು ಮುಗಿಸಿದೆ. ಇದರಲ್ಲಿ ಅವರು ಮೂರು ಪಂದ್ಯಗಳನ್ನು ಗೆದ್ದು, ಇನ್ನುಳಿದ ಐದೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಯುಪಿ ವಾರಿಯರ್ಸ್‌ ಗೆದ್ದರೆ, ಆದ ಈ ಮೂರೂ ತಂಡಗಳ ಪಾಯಿಂಟ್ಸ್‌ ಸಮಬಲವಾಗಲಿದೆ. ಆಗ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಮುಂಬೈ ಇಂಡಿಯನ್ಸ್‌ ಉತ್ತಮ ರನ್‌ರೇಟ್‌ ಸಹಾಯದಿಂದ ಯುಪಿ ವಾರಿಯರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳನ್ನು ಹಿಂದಿಕ್ಕಿ ಎಲಿಮಿನೇಟರ್‌ಗೆ ಅರ್ಹತೆ ಪಡೆಯಲಿದೆ.

ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್; ವಿಶ್ವದ ಮೊದಲ ಆಟಗಾರ್ತಿ

ಒಂದು ವೇಳೆ ಯುಪಿ ವಾರಿಯರ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಗೆದ್ದರೆ, ಆಗ ಮುಂಬೈ ಇಂಡಿಯನ್ಸ್‌ ತಂಡದ ಎಲಿಮಿನೇರ್‌ ಕನಸು ಭಗ್ನವಾಗಲಿದೆ. ಆಗ ಜೆಮಿಮಾ ರೊಡ್ರಿಗಸ್‌ ನಾಯಕತ್ವದ ಡೆಲ್ಲಿ ತಂಡ 8 ಅಂಕಗಳೊಂದಿಗೆ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಇನ್ನು ಯುಪಿ ವಾರಿಯರ್ಸ್‌ ಎಲಿಮಿನೇಟರ್‌ಗೆ ಅರ್ಹತೆ ಪಡೆಯುವುದು ಕಷ್ಟ ಸಾಧ್ಯ. ಏಕೆಂದರೆ ಇವರ ರನ್‌ರೇಟ್‌ ತುಂಬಾ ಕಡಿಮೆ ಇದೆ. ಯುಪಿ ತಂಡ, 156 ರನ್‌ಗಳ ಅಂತರದಲ್ಲಿ ಡೆಲ್ಲಿಯನ್ನು ಮಣಿಸಿದರೆ ಮಾತ್ರ ಎಲಿಮಿನೇಟರ್‌ಗ ಅರ್ಹತೆ ಪಡೆಯಲಿದೆ. ಅಂದ ಹಾಗೆ ಇಲ್ಲಿಯವರೆಗೂ 2023ರಲ್ಲಿ ಗಜರಾತ್‌ ವಿರುದ್ಧ 143 ರನ್‌ಗಳ ಅಂತರದ ದೊಡ್ಡ ಗೆಲುವು ಪಡೆದಿತ್ತು.