ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs GT ಫೈನಲ್‌ನಲ್ಲಿ ಆಶಿಶ್ ನೆಹ್ರಾರ 'ರಕ್ಷಣಾತ್ಮಕ' ತಂತ್ರದ ವಿರುದ್ಧ ಎಬಿ ಡಿವಿಲಿಯರ್ಸ್ ಆಕ್ರೋಶ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರ ರಕ್ಷಣಾತ್ಮಕ ರಣತಂತ್ರವನ್ನು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವಂತಾದ ಜಿಟಿ, ತನ್ನ ಪಾಲಿನ 20 ಓವರ್‌ಗಳಿಗೆ 155 ರನ್‌ಗಳಿಗೆ ಸೀಮಿತವಾಯಿತು.

ಗುಜರಾತ್‌ ಟೈಟನ್ಸ್‌ ಹೆಡ್‌ ಕೋಚ್‌ ವಿರುದ್ಧ ಎಬಿಡಿ ಆಕ್ರೋಶ.

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ (RCB vs GT) ಗುಜರಾತ್‌ ಟೈಟನ್ಸ್‌ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರ ರಕ್ಷಣಾತ್ಮಕ ರಣತಂತ್ರವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌(AB De Villiers) ಟೀಕಿಸಿದ್ದಾರೆ. ಪವರ್‌ಪ್ಲೇನಲ್ಲಿ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಔಟ್‌ ಆದ ಬಳಿಕ ಗುಜರಾತ್‌ ಟೀಮ್‌ ಮ್ಯಾನೇಜ್‌ಮೆಂಟ್‌, ಜೋಸ್‌ ಬಟ್ಲರ್‌ ಅವರ ಬದಲು ನಿಶಾಂತ್‌ ಸಿಂಧು ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳುಹಿಸಿತ್ತು. ಆ ಮೂಲಕ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ರಕ್ಷಣಾತ್ಮಕ ರಣತಂತ್ರಕ್ಕೆ ಮಣೆ ಹಾಕಿದ್ದರು. ನೆಹ್ರಾ ಅವರ ಈ ರಣತಂತ್ರ ಎಬಿಡಿಗೆ ಇಷ್ಟವಾಗಲಿಲ್ಲ.

ಗುಜರಾತ್‌ ಟೈಟನ್ಸ್‌ ತಂಡದ ಇನಿಂಗ್ಸ್‌ ವೇಳೆ ಕಾಮೆಂಟರಿ ವೇಳೆ ಎಬಿ ಡಿ ವಿಲಿಯರ್ಸ್‌, "ಜೋಸ್‌ ಬಟ್ಲರ್‌ ಅವರನ್ನು ಆರಂಭದಲ್ಲೇ ಕಳೆದುಕೊಳ್ಳುವ ಅಪಾಯ ತೆಗೆದುಕೊಳ್ಳಲು ತಂಡ ಬಯಸುವುದಿಲ್ಲ. ಅದಕ್ಕಾಗಿಯೇ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಕ್ಕೆ ಕಳುಹಿಸಲಾಗಿದೆ. ನನ್ನ ವೃತ್ತಿಜೀವನದಲ್ಲಿಯೂ ನಾನು ಇದೇ ರೀತಿಯ ಪರಿಸ್ಥಿತಿಯನ್ನು ಅನುಭವಿಸಿದ್ದೇನೆ, ಆದ್ದರಿಂದ ಇದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ," ಎಂದರು.

RCB vs GT, IPL 2026 Final: ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಮಾತು ಮುಂದುವರಿಸಿದ ಅವರು, "ಈ ನಿರ್ಧಾರಕ್ಕೆ ಎರಡು ಕಾರಣಗಳಿವೆ. ಆದರೆ ಇಂದಿನ ಪಂದ್ಯದಲ್ಲಿ ಅವರು ಇದೇ ತಂತ್ರವನ್ನು ಅನುಸರಿಸಲು ತೀರ್ಮಾನಿಸಿದ್ದಾರೆ. ಬಟ್ಲರ್ ಅವರನ್ನು ಕೆಳಕ್ರಮಾಂಕದಲ್ಲಿ ಕಳುಹಿಸುವ ಮೂಲಕ ಬ್ಯಾಟಿಂಗ್ ವಿಭಾಗವನ್ನು ಇನ್ನಷ್ಟು ಡೆಪ್ತ್‌ಗೊಳಿಸಲು ಅವರು ಪ್ರಯತ್ನಿಸಿದ್ದಾರೆ,” ಎಂದು ಆರ್‌ಸಿಬಿ ದಿಗ್ಗಜ ತಿಳಿಸಿದ್ದಾರೆ.

"ಇದು ರಕ್ಷಣಾತ್ಮಕವಾಗಿ ಕೂಡಿದೆ ಹಾಗೂ ಇದನ್ನು ನಾನು ಇಷ್ಟಪಡುವುದಿಲ್ಲ. ಇದು ಸ್ಪಷ್ಟವಾಗಿದೆಯೇ?" ಎಂದು ಎಬಿಡಿ ಪ್ರಶ್ನೆ ಮಾಡಿದ್ದಾರೆ.

155 ರನ್‌ಗಳಿಗೆ ಸೀಮಿತವಾದ ಗುಜರಾತ್‌ ಟೈಟನ್ಸ್‌

ಇನ್ನು ಈ ಪಂದ್ಯದಲ್ಲಿ ಅಗ್ರ ಹಾಗೂ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಗುಜರಾತ್‌ ಟೈಟನ್ಸ್‌ ತಂಡ, ವಾಷಿಂಗ್ಟನ್‌ ಸುಂದರ್‌ ಅವರ ಜವಾಬ್ದಾರಿಯುತ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆರ್‌ಸಿಬಿಗೆ 156 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು.

IPL 2026: 15ನೇ ವಯಸ್ಸಿನಲ್ಲೇ ಆರೆಂಜ್‌ ಕ್ಯಾಪ್‌ ಗೆದ್ದು ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ!

ವಾಷಿಂಗ್ಟನ್‌ ಸುಂದರ್‌ ಅರ್ಧಶತಕ

ಒಂದು ತುದಿಯಲ್ಲಿ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಪೆರೆಡ್‌ ನಡೆಸುತ್ತುದ್ದರೂ ಮತ್ತೊಂದು ತುದಿಯಲ್ಲಿ ವಾಷಿಂಗ್ಟನ್‌ ಸುಂದರ್‌ ಗಟ್ಟಿಯಾಗಿ ನಿಂತು ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಕಠಿಣ ಹೋರಾಟ ನಡೆಸಿದರು. ಅವರು ಆಡಿದ 37 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ ಅಜೇಯ 50 ರನ್‌ ಗಳಿಸಿದರು. ಆ ಮೂಲಕ ಜಿಟಿ 155 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದರು, ಇಲ್ಲವಾದಲ್ಲಿ ಆತಿಥೇಯರು 120ರ ಗಡಿ ದಾಟುತ್ತಿರಲಿಲ್ಲ.