ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: 15ನೇ ವಯಸ್ಸಿನಲ್ಲೇ ಆರೆಂಜ್‌ ಕ್ಯಾಪ್‌ ಗೆದ್ದು ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ 15ನೇ ವಯಸ್ಸಿನ ರಾಜಸ್ಥಾನ್‌ ರಾಯಲ್ಸ್‌ ಆರಂಭಿಕ ವೈಭವ್‌ ಸೂರ್ಯವಂಶಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ದೊಡ್ಡ ದಾಖಲೆಯನ್ನು ವೈಭವ್‌ ಸೂರ್ಯವಂಶಿ ಬರೆದಿದ್ದಾರೆ. ಅವರು 19ನೇ ಆವೃತ್ತಿಯಲ್ಲಿ 776 ರನ್‌ಗಳನ್ನು ಬಾರಿಸಿದ್ದಾರೆ.

IPL 2026: ಆರೆಂಜ್‌ ಕ್ಯಾಪ್‌ ಗೆದ್ದು ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ಆರೆಂಜ್‌ ಕ್ಯಾಪ್‌ ಗೆದ್ದು ಇತಿಹಾಸ ಸೃಷ್ಟಿಸಿದ ವೈಭವ್‌ ಸೂರ್ಯವಂಶಿ. -

Profile
Ramesh Kote May 31, 2026 9:21 PM

ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ(RCB vs GT) ಗುಜರಾತ್‌ ಟೈಟನ್ಸ್‌ ಆರಂಭಿಕರಾದ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಅವರು ಬಹುಬೇಗ ಔಟ್‌ ಆದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಓಪನರ್‌ ವೈಭವ್‌ ಸೂರ್ಯವಂಶಿಗೆ (Vaibhav Sooryavanshi) ಆರೆಂಜ್‌ ಕ್ಯಾಪ್‌ ಖಚಿತವಾಯಿತು. ಆ ಮೂಲಕ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಎಡಗೈ ಬ್ಯಾಟ್ಸ್‌ಮನ್‌ ಬರೆದಿದ್ದಾರೆ. ವೈಭವ್‌ಗೆ ಇದೀಗ 15 ವರ್ಷ ವಯಸ್ಸಾಗಿದೆ. ವೈಭವ್‌ಗೂ ಮುನ್ನ ಈ ದಾಖಲೆ ಸಾಯಿ ಸುದರ್ಶನ್‌ಗೆ ಇತ್ತು. ಅವರು ತಮ್ಮ 23ನೇ ವಯಸ್ಸಿನಲ್ಲಿ ಈ ಮೈಲುಗಲ್ಲು ತಲುಪಿದ್ದರು.

ಗುಜರಾತ್‌ ಟೈಟನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ ಎರಡನೇ ಕ್ವಾಲಿಫೈಯರ್‌ ಪಂದ್ಯದ ಬಳಿಕ ವೈಭವ್‌ ಸೂರ್ಯವಂಶಿ 16 ಪಂದ್ಯಗಳಿಂದ 48.50ರ ಸರಾಸರಿ ಮತ್ತು 237.31ರ ಸ್ಟ್ರೈಕ್‌ ರೇಟ್‌ನಲ್ಲಿ 776 ರನ್‌ಗಳನ್ನು ಗಳಿಸಿ ತಮ್ಮ ಅಭಿಯಾನವನ್ನು ಮುಗಿಸಿದ್ದರು. ಈ ಪಂದ್ಯದಲ್ಲಿ ವೈಭವ್‌ 47 ಎಸೆತಗಳಲ್ಲಿ 96 ರನ್‌ಗಳನ್ನು ಗಳಿಸಿದ್ದರು. ಅಂದ ಹಾಗೆ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿದ್ದ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಅವರು ಫೈನಲ್‌ ಪಂದ್ಯಕ್ಕೂ ಮುನ್ನ ಕ್ರಮವಾಗಿ 722 ರನ್‌ ಹಾಗೂ 710 ರನ್‌ಗಳನ್ನು ಗಳಿಸಿದ್ದರು. ಅಂದ ಹಾಗೆ ವೈಭವ್‌ ಸೂರ್ಯವಂಶಿಯನ್ನು ಹಿಂದಿಕ್ಕಲು ಗಿಲ್‌ಗೆ 55 ರನ್‌ ಅಗತ್ಯವಿತ್ತು ಹಾಗೂ ಸುದರ್ಶನ್‌ಗೆ 66 ರನ್‌ಗಳ ಅಗತ್ಯವಿತ್ತು.

RCB vs GT, IPL 2026 Final: ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

ಆದರೆ, ಶುಭಮನ್‌ ಗಿಲ್‌ ಆರ್‌ಸಿಬಿ ಎದುರು 10 ರನ್‌ ಗಳಿಸಿ ಜಾಶ್‌ ಹೇಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರೆ, ಸಾಯಿ ಸುದರ್ಶನ್‌ 12 ರನ್‌ ಗಳಿಸಿದ ಬಳಿಕ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಇದೀಗ ಫೈನಲ್‌ ಆಡುತ್ತಿರುವ ವಿರಾಟ್‌ ಕೊಹ್ಲಿ ಸದ್ಯ 600 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ವೈಭವ್‌ ಅವರನ್ನು ಹಿಂದಿಕ್ಕಲು ಇನ್ನೂ 177 ರನ್‌ಗಳನ್ನು ಗಳಿಸಬೇಕಾದ ಅಗತ್ಯವಿದೆ. ಆದರೆ, ಇದು ಅಸಾಧ್ಯ. ಏಕೆಂದರೆ ಮೊದಲು ಬ್ಯಾಟ್‌ ಮಾಡಿದ ಜಿಟಿ, ಆರ್‌ಸಿಬಿಗೆ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಹಾಗಾಗಿ ವೈಭವ್‌ ಸೂರ್ಯವಂಶಿ ಆರೆಂಜ್‌ ಕ್ಯಾಪ್‌ ಅನ್ನು ತನ್ನದಾಗಿಸಿಕೊಂಡಿದ್ದಾರೆ.

ಸುದರ್ಶನ್‌ ದಾಖಲೆಯನ್ನು ಮುರಿದ ವೈಭವ್‌

ವೈಭವ್‌ ಸೂರ್ಯವಂಶಿಗೂ ಮುನ್ನ ಸಾಯಿ ಸುದರ್ಶನ್‌ ತಮ್ಮ 23ನೇ ವಯಸ್ಸಿನಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದಿದ್ದರು. 2025ರ ಐಪಿಎಲ್‌ ಟೂರ್ನಿಯಲ್ಲಿ ಜಿಟಿ ಆರಂಭಿಕ 759 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ 2023ರಲ್ಲಿ ಈ ದಾಖಲೆ ಬರೆದಿದ್ದ ಶುಭಮನ್‌ ಗಿಲ್‌ ಅವರನ್ನು ಸುದರ್ಶನ್‌ ಹಿಂದಿಕ್ಕಿದ್ದರು.

GT vs RR: 1000 ಐಪಿಎಲ್‌ ರನ್‌ ಪೂರ್ಣಗೊಳಿಸಿ ನೂತನ ದಾಖಲೆ ಬರೆದ ವೈಭವ್‌ ಸೂರ್ಯವಂಶಿ!

ಐಪಿಎಲ್‌ ಟೂರ್ನಿಯಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ಗಳು

ವೈಭವ್‌ ಸೂರ್ಯವಂಶಿ: 15 ವರ್ಷ, 65 ದಿನಗಳು- 2026

ಸಾಯಿ ಸುದರ್ಶನ್‌: 23 ವರ್ಷ, 231 ದಿನಗಳು- 2025

ಶುಭಮನ್‌ ಗಿಲ್‌: 23 ವರ್ಷ, 263 ದಿನಗಳು- 2023

ಋತುರಾಜ್‌ ಗಾಯಕ್ವಾಡ್‌: 24 ವರ್ಷ, 357 ದಿನಗಳು- 2021

RCB vs GT: ʻರೊಮ್ಯಾರಿಯೊ ಶೆಫರ್ಡ್‌ ಬೌಲ್‌ ಮಾಡಿದ್ರೆ ಸೋಲು ಖಚಿತʼ-ಆರ್‌ಸಿಬಿಗೆ ಕೆ ಶ್ರೀಕಾಂತ್‌ ವಾರ್ನಿಂಗ್‌!

ಎಲ್ಲಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರೆಂಜ್‌ ಕ್ಯಾಪ್ ವಿಜೇತರು

ಶಾನ್ ಮಾರ್ಷ್ (ಕಿಂಗ್ಸ್‌ ಇಲೆವೆನ್‌ ಪಂಜಾಬ್‌): 616 ರನ್‌ಗಳು- 2008

ಮ್ಯಾಥ್ಯೂ ಹೇಡನ್ (ಸಿಎಸ್‌ಕೆ): 572 ರನ್‌- 2009

ಸಚಿನ್ ತೆಂಡೂಲ್ಕರ್ (ಎಂಐ) : 618 ರನ್‌- 2010

ಕ್ರಿಸ್ ಗೇಲ್ (ಆರ್‌ಸಿಬಿ: 608 ರನ್‌- 2011

ಕ್ರಿಸ್ ಗೇಲ್ (ಆರ್‌ಸಿಬಿ): 733 ರನ್‌- 2012

ಮೈಕೆಲ್ ಹಸ್ಸಿ (ಸಿಎಸ್‌ಕೆ): 733 ರನ್‌- 2013

ರಾಬಿನ್ ಉತ್ತಪ್ಪ (ಕೆಕೆಆರ್): 660 ರನ್‌- 2014

ಡೇವಿಡ್ ವಾರ್ನರ್ (ಎಸ್‌ಆರ್‌ಹೆಚ್): 562 ರನ್‌- 2015

ವಿರಾಟ್ ಕೊಹ್ಲಿ (ಆರ್‌ಸಿಬಿ): 973 ರನ್‌- 2016

ಡೇವಿಡ್ ವಾರ್ನರ್ (ಎಸ್‌ಆರ್‌ಹೆಚ್): 641 ರನ್‌- 2017

ಕೇನ್ ವಿಲಿಯಮ್ಸನ್ (ಎಸ್‌ಆರ್‌ಹೆಚ್): 735 ರನ್‌ 2018

ಡೇವಿಡ್ ವಾರ್ನರ್ (ಎಸ್‌ಆರ್‌ಹೆಚ್): 692 ರನ್‌- 2019

ಕೆಎಲ್ ರಾಹುಲ್ (ಪಿಬಿಕೆಎಸ್): 670 ರನ್‌- 2020

ರುತುರಾಜ್ ಗಾಯಕ್ವಾಡ್ (ಸಿಎಸ್‌ಕೆ): 635 ರನ್‌- 2021

ಜೋಸ್ ಬಟ್ಲರ್ (ಆರ್‌ಆರ್‌): 863 ರನ್‌- 2022

ಶುಭಮನ್ ಗಿಲ್ (ಜಿಟಿ): 890 ರನ್‌- 2023

ವಿರಾಟ್ ಕೊಹ್ಲಿ (ಆರ್‌ಸಿಬಿ): 741 ರನ್‌- 2024

ಸಾಯಿ ಸುದರ್ಶನ್ (ಜಿಟಿ): 759 ರನ್‌- 2025

ವೈಭವ್ ಸೂರ್ಯವಂಶಿ (ಆರ್‌ಆರ್): 776‌ ರನ್‌- 2026