ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ರಾಜಸ್ಥಾನ್‌ ರಾಯಲ್ಸ್‌ ತೊರೆದ ಸಂಜು ಸ್ಯಾಮ್ಸನ್‌ ಬಗ್ಗೆ ರಿಯಾನ್‌ ಪರಾಗ್‌ ದೊಡ್ಡ ಹೇಳಿಕೆ!

IPL 2026: ಆಧುನಿಕ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ರೀತಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಸಂಜು ಸ್ಯಾಮ್ಸನ್‌ ಅವರ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ ಹೇಳಿದ್ದಾರೆ. ಸಂಜು ಸ್ಯಾಮ್ಸನ್‌ ಟ್ರೇಡ್‌ ಡೀಲ್‌ ಮೂಲಕ ಆರ್‌ಆರ್‌ನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸಂಜು ಸ್ಯಾಮ್ಸನ್‌ ಬಗ್ಗೆ ರಿಯಾನ್‌ ಪರಾಗ್‌ ದೊಡ್ಡ ಹೇಳಿಕೆ.

ನವದೆಹಲಿ: ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರ ರೀತಿ, ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದಲ್ಲಿ ಸಂಜು ಸ್ಯಾಮ್ಸನ್‌ (Sanju Samson) ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌ (Riyan Parag) ಹೇಳಿದ್ದಾರೆ. ಅಂದ ಹಾಗೆ ಸಂಜು ಸ್ಯಾಮ್ಸನ್‌ ಅವರು ಟ್ರೇಡ್‌ ಡೀಲ್‌ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಅವರಿಗೆ ಸಿಎಸ್‌ಕೆ ನಾಯಕತ್ವವನ್ನು ನೀಡಬಹುದಾಗಿದೆ. ಸಂಜು 2021 ರಿಂದ 2025ರ ವರೆಗೆ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದರು. ಸಿಎಸ್‌ಕೆಯಿಂದ ರವೀಂದ್ರ ಜಡೇಜಾ, ಆರ್‌ಆರ್‌ಗೆ ಬಂದಿದ್ದಾರೆ.

ಪ್ರೀ ಸೀಸನ್‌ ಪ್ರೆಸ್‌ ಕಾನ್ಫೆರೆನ್ಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಿಯಾನ್‌ ಪರಾಗ್‌, "ಅವರಂತೆಯೇ (ಸಂಜು ಸ್ಯಾಮ್ಸನ್‌) ಕೌಶಲ ಹೊಂದಿರುವ ಇನ್ನೊಬ್ಬ ಆಟಗಾರನನ್ನು ಹುಡುಕಬಹುದು ಅಥವಾ ಅವರ ಸ್ಥಾನದಲ್ಲಿ ಯಾರನ್ನಾದರೂ ಆಡಿಸಬಹುದು. ಆದರೆ ವಿರಾಟ್‌ ಕೊಹ್ಲಿ ಅಥವಾ ರೋಹಿತ್‌ ಶರ್ಮಾ ಅವರಿಗೆ ಬದಲಾವಣೆ ಇಲ್ಲದಂತೆ, ಸಂಜು ಭಾಯ್‌ಗೂ ನಿಜವಾದ ಬದಲಾವಣೆ ಯಾರೂ ಇಲ್ಲ. ಅವರು ಅಷ್ಟೊಂದು ಉತ್ತಮ ಆಟಗಾರ,” ಎಂದು ಹೇಳಿದ್ದಾರೆ.

IPL 2026: ಈ ಸಲವೂ ಆರ್‌ಸಿಬಿಗೆ ಕಪ್‌ ಗೆದ್ದುಕೊಡಬಲ್ಲ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!

ಸಂಜು ಸ್ಯಾಮ್ಸನ್‌ 11 ವರ್ಷಗಳ ಕಾಲ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಪ್ರತಿನಿಧಿಸಿದ ನಂತರ, ರಾಜಸ್ಥಾನ್‌ ರಾಯಲ್ಸ್‌ಗೆ ಅತ್ಯಂತ ಯಶಸ್ವಿ ಕ್ಯಾಪ್ಟನ್ ಮತ್ತು ಪ್ರಮುಖ ರನ್‌ಸ್ಕೋರ್ ಆಗಿದ್ದರು. ಅವರು 2022ರ ಐಪಿಎಲ್‌ ಫೈನಲ್‌ಗೆ ಮತ್ತು 2024ರ ಟೂರ್ನಿಯ ಪ್ಲೇಆಫ್ಸ್‌ ತಂಡವನ್ನು ಮುನ್ನಡೆಸಿದ್ದರು.

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರುವ ಮೂಲಕ ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ಈ ಟೂರ್ನಿಯಲ್ಲಿ 321 ರನ್‌ಗಳ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು ಹಾಗೂ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದಾದ ಬಳಿಕ ಸಂಜು ಸ್ಯಾಮ್ಸನ್‌ ಅವರ ಭವಿಷ್ ಸಂಪೂರ್ಣವಾಗಿ ಬದಲಾಯಿತು.

IPL 2026: ಆರ್‌ಸಿಬಿ ವೇಗಿ ಜಾಶ್‌ ಹೇಝಲ್‌ವುಡ್‌ ಎಷ್ಟು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ?

"ಈ ವರ್ಷ ಟೂರ್ನಿಯನ್ನು ಇನ್ನಷ್ಟು ಉತ್ತಮವಾಗಿ ಮುಗಿಸಲು ಸೂಕ್ತ ಯೋಜನೆಯನ್ನು ರೂಪಿಸುವ ಕಡೆಗೆ ಗಮನವನ್ನು ಹರಿಸುತ್ತೇವೆ. ಕಳೆದ ಸೀಸನ್‌ಗಿಂತ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಲು ಪ್ರಯತ್ನಿಸುತ್ತೇವೆ," ಎಂದು ರಿಯಾನ್‌ ಪರಾಗ್‌ ತಿಳಿಸಿದ್ದಾರೆ.

"ನಾವು ಯೋಜನೆಯನ್ನು ಉತ್ತಮವಾಗಿ ರೂಪಿಸುವ ಅಗತ್ಯವಿದೆ. ಕಳೆದ ವರ್ಷ ನಾವು 5-6 ಪಂದ್ಯಗಳನ್ನು ಕೊನೆಯ ಓವರ್‌ ಹಾಗೂ ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿದ್ದೇವೆ. ನಾವು ಈ ಪಂದ್ಯಗಳನ್ನು ನಾವು ಸರಿಯಾಗಿ ಮುಗಿಸಿದ್ದರೆ ಹಾಗೂ ಸೂಕ್ತ ಯೋಜನೆಯೊಂದಿಗೆ ಆಡಿದ್ದರೆ, ನಮ್ಮ ಫಲಿತಾಂಶ ಇನ್ನಷ್ಟು ಉತ್ತಮವಾಗಿರುತ್ತಿತ್ತು. ನಮ್ಮ ರನ್‌ರೇಟ್‌ ಕೂಡ ಸುಧಾರಣೆಯಾಗುತ್ತಿತ್ತು ಹಾಗೂ ನಾವು ಪ್ಲೇಆಫ್ಸ್‌ಗೆ ಅರ್ಹತೆಯನ್ನು ಪಡೆಯುತ್ತಿದ್ದೆವು," ಎಂದು ರಿಯಾನ್‌ ಪರಾಗ್‌ ಹೇಳಿದ್ದಾರೆ.

IPL 2026: ʻವಿರಾಟ್‌ ಕೊಹ್ಲಿ ಆರ್‌ಸಿಬಿಯ ಹೃದಯ ಬಡಿತʼ-ಎಬಿಡಿ ಮಾತು ಒಪ್ಪಬಹುದಾ?

“ಪ್ರತಿ ಟಿ20 ಪಂದ್ಯದಲ್ಲೂ ಆಟದ ದಿಕ್ಕನ್ನೇ ಬದಲಾಯಿಸುವ 3–4 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಆ ಸಣ್ಣ ನಿರ್ಧಾರಗಳನ್ನು ಸರಿಯಾದ ತಂತ್ರ ಮತ್ತು ಯೋಜನೆಯೊಂದಿಗೆ ತೆಗೆದುಕೊಂಡರೆ, ಈ ವರ್ಷ ಫಲಿತಾಂಶ ವಿಭಿನ್ನವಾಗಿರುತ್ತದೆ,” ಎಂದು ರಾಜಸ್ಥಾನ್‌ ರಾಯಲ್ಸ್‌ ನಾಯಕ ತಿಳಿಸಿದ್ದಾರೆ.

“ನಾನು ಇಲ್ಲಿ 17 ವರ್ಷದವನಾಗಿದ್ದಾಗ ರಾಜಸ್ಥಾನ್‌ ರಾಯಲ್ಸ್‌ ಬಂದಿದ್ದೆ. ಆಗಿನಿಂದ ಇಂದಿನವರೆಗೂ ಎಲ್ಲಾ ಏರುಪೇರುಗಳನ್ನು ನೋಡಿದ್ದೇನೆ ಏರಿಕೆಗಿಂತ ಇಳಿಕೆಯೇ ಹೆಚ್ಚು. ನನ್ನ ಮೇಲೆ ನಂಬಿಕೆ ಇಟ್ಟು, ನಾನು ಯಾವ ರೀತಿಯ ಕ್ರಿಕೆಟಿಗನೋ ಅದನ್ನು ಅರ್ಥಮಾಡಿಕೊಂಡ ರಾಜಸ್ಥಾನ್‌ ತಂಡಕ್ಕೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ,” ಎಂದು ಪರಾಗ್ ಹೇಳಿದ್ದಾರೆ.